80ರ ದಶಕದ ಖ್ಯಾತ ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ತೆಲುಗು – ತಮಿಳು ಬಯೋಪಿಕ್ ಸಿನಿಮಾ ಸೆಟ್ಟೇರಿದೆ. ವಿಕ್ರಾಂತ್ ರುದ್ರ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಿಜಯರಾಜು ರಾಮ ನಟಿಸುತ್ತಿದ್ದಾರೆ. ‘ಜರ್ನಿ ಆಫ್ ಅನ್ಸಂಗ್ ಚಾಂಪಿಯನ್’ ಈ ಸಿನಿಮಾದ ಉಪಶೀರ್ಷಿಕೆ.
ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ಕುರಿತು ಸಿನಿಮಾವೊಂದು ತೆರೆಮೇಲೆ ಬರಲಿದೆ. ‘ಅರ್ಜುನ್ ಚಕ್ರವರ್ತಿ’ ಎಂದೇ ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಇದೊಂದು PAN ಇಂಡಿಯಾ ಪ್ರಾಜೆಕ್ಟ್ ಎನ್ನಲಾಗಿದ್ದು, ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಹಲವರ ಕುರಿತ ಬಯೋಪಿಕ್ ಸಿನಿಮಾಗಳು ಬಂದಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಅರ್ಜುನ್ ಚಕ್ರವರ್ತಿ’. ಚಿತ್ರದ ಫಸ್ಟ್ಲುಕ್ನಲ್ಲಿ ಪದಕವನ್ನು ಹಿಡಿದುಕೊಂಡು ಮೈದಾನದ ಮಧ್ಯಭಾಗದಲ್ಲಿ ನಿಂತು ವಿಜಯದ ಕ್ಷಣವನ್ನು ಆನಂದಿಸುತ್ತಿರುವ ಅರ್ಜುನ್ ಚಕ್ರವರ್ತಿ ಅವರ ದೃಶ್ಯವಿದೆ. ವಿಕ್ರಾಂತ್ ರುದ್ರ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಜಯರಾಜು ರಾಮ ಅವರು ‘ಅರ್ಜುನ್ ಚಕ್ರವರ್ತಿ’ ಪಾತ್ರವನ್ನು ಮಾಡುತ್ತಿದ್ದಾರೆ. ಸಿಜಾ ರೋಸ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ನಿರ್ಮಾಪಕ ಶ್ರೀನಿ ಗುಬ್ಬಾಳ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
PAN-INDIA FILM ‘ARJUN CHAKRAVARTHY’ FIRST LOOK POSTER… #FirstLook poster of #ArjunChakravarthy: Journey Of An Unsung Champion – based on the true-life story of a #Kabaddi player who represented #India in the 1980s – unveils… #VijayaRamaRaju enacts the title role in the film,… pic.twitter.com/cxrSJii9jJ
— taran adarsh (@taran_adarsh) October 27, 2023
‘ಜರ್ನಿ ಆಫ್ ಅನ್ಸಂಗ್ ಚಾಂಪಿಯನ್ ಎಂಬುದು ಈ ಚಿತ್ರದ ಅಡಿಬರಹ. ಇದು ಕೇವಲ ಸಿನಿಮಾ ಅಲ್ಲ. ಸವಾಲುಗಳನ್ನು ಮೀರಿ ನಿಲ್ಲುವಂತಹ ಹಾಗೂ ನಮ್ಮೆಲ್ಲರಿಗೂ ಸ್ಫೂರ್ತಿ, ಪ್ರೇರಣೆ ನೀಡುವಂತಹ ಪ್ರಯೋಗ. ಈ ಚಿತ್ರದಿಂದ ನಾವು ಇಚ್ಛಾಶಕ್ತಿ ಹಾಗೂ ಆತ್ಮಬಲದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ’ ಎಂದಿದ್ದಾರೆ ಶ್ರೀನಿ ಗುಬ್ಬಾಳ. ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಕನ್ನಡ, ಮಲಯಾಳಂ ಮತ್ತು ಹಿಂದಿಗೆ ಡಬ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. 1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಎದುರಾದ ಹೋರಾಟಗಳು ಹಾಗೂ ಸಿಕ್ಕ ಗೆಲುವಿನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ದಯಾನಂದ ರೆಡ್ಡಿ, ಅಜಯ್, ಅಜಯ್ ಘೋಷ್ ಹಾಗೂ ದುರ್ಗೇಶ್ ಅವರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಘ್ನೇಶ್ ಭಾಸ್ಕರನ್ ಅವರ ಸಂಗೀತ ನಿರ್ದೇಶನ ಹಾಗೂ ಜಗದೀಶ್ ಚೀಕಾಟಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. Gannet Celluloid ಬ್ಯಾನರ್ ಅಡಿಯಲ್ಲಿ ಶ್ರೀನಿ ಗುಬ್ಬಾಳ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ.