ಬಿಜೋಯ್‌ ನಂಬಿಯಾರ್‌ ನಿರ್ದೇಶನದ ‘ಕಾಲಾ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಅವಿನಾಶ್‌ ತಿವಾರಿ ನಟನೆಯ ಥ್ರಿಲ್ಲರ್‌ ಸರಣಿ ಸೆಪ್ಟೆಂಬರ್‌ 15ರಿಂದ DisneyPlus Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

ಅವಿನಾಶ್ ತಿವಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕಾಲಾ’ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಬಿಜೋಯ್ ನಂಬಿಯಾರ್ ರಚಿಸಿ ನಿರ್ದೇಶಿಸಿರುವ ಸರಣಿ ಅಪರಾಧ, ಅಧಿಕಾರ, ದ್ರೋಹದ ಭೂಗತ ಜಗತ್ತಿನ ಭಯಾನಕ ಅಂಶಗಳನ್ನು ತೆರೆದಿಡಲಿದೆ. ಟ್ರೈಲರ್‌ನಲ್ಲಿ ಬ್ಲಾಕ್‌ ಮನಿ ಕುರಿತಾದ ಕೆಲವು ಅಂಶಗಳನ್ನು ಹೇಳಲಾಗಿದೆ. ಭಯೋತ್ಪಾದಕರಿಗೆ ಧನ ಸಹಾಯ ಒದಗಿಸುವ, ಅಕ್ರಮ ಶಸ್ತ್ರಾಸ್ತ್ರ ವ್ಯವಸ್ಥೆ ವಿರುದ್ದ ಹೋರಾಡುವ ಮತ್ತು ಮಾದಕ ವಸ್ತುಗಳ ಜಾಲವನ್ನು ಹಿಡಿದು ಕಾರ್ಯಾಚರಣೆ ನಡೆಸುವ IB ಸಿಬ್ಬಂದಿಗಳನ್ನು ಒಳಗೊಂಡಿದೆ. 14 ಸಾವಿರ ಟ್ರಿಲಿಯನ್‌ ಹಣವನ್ನು ಭಾರತದಿಂದಾಚೆಗೆ ಸಾಗಿಸುವ ಕ್ರಮಿನಲ್‌ಗಳನ್ನು ಸೆರೆಹಿಡಿಯುವ ಸಾಹಸಗಾಥೆ ಸರಣಿಯಲ್ಲಿದೆ. ಇದು ಆಕ್ಷನ್‌-ಕ್ರೈಮ್-ಥ್ರಿಲ್ಲರ್ ಜಾನರ್‌ ವೆಬ್‌ ಸರಣಿಯಾಗಿದ್ದು IB (Intelligence Bureau) ಅಧಿಕಾರಿಗಳ ಕಥೆಯನ್ನು ವಿವರಿಸಲಿದೆ. ಕ್ರಿಮಿನಲ್ ಭೂಗತ ಜಗತ್ತಿನ ಆಳದಲ್ಲಿ ಹುದುಗಿರುವ ಅಪಾಯಕಾರಿ ಕ್ರಿಮಿನಲ್‌ಗಳ ಯೋಜನೆಯನ್ನು ಭಗ್ನಗೊಳಿಸುವ ಅಧಿಕಾರಿಯ ಸಾಹಸವನ್ನು ಸರಣಿಯಲ್ಲಿ ತೋರಿಸಲಾಗಿದೆ. ರೋಹನ್ ವಿನೋದ್ ಮೆಹ್ರಾ, ನಿವೇತಾ ಪೇತುರಾಜ್, ತಾಹೆರ್ ಶಬ್ಬೀರ್, ಹಿತೇನ್ ತೇಜ್ವಾನಿ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. T-Series ನಿರ್ಮಿಸಿರುವ ಈ ಸರಣಿಯು ಸೆಪ್ಟೆಂಬರ್ 15, 2023ರಿಂದ Disney+ Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಖ್ಯಾತ ಚಿತ್ರಸಾಹಿತಿ ವಿಜಯೇಂದ್ರ ಪ್ರಸಾದ್‌ ರಚನೆಯ ಕತೆ, ಚಂದ್ರು ನಿರ್ದೇಶನದಲ್ಲಿ ಸುದೀಪ್‌
Next articleಸೆಪ್ಟೆಂಬರ್‌ 7ಕ್ಕೆ ‘ಕದ್ದ ಚಿತ್ರ’ | ಸುಹಾಸ್‌ ಕೃಷ್ಣ ನಿರ್ದೇಶನ, ವಿಜಯ ರಾಘವೇಂದ್ರ ಹೀರೋ

LEAVE A REPLY

Connect with

Please enter your comment!
Please enter your name here