ವಿಜಯ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕದ್ದ ಚಿತ್ರ’ ಸಿನಿಮಾ ಸೆಪ್ಟೆಂಬರ್‌ 7ರಂದು ತೆರೆಕಾಣಲಿದೆ. ಚಿತ್ರದಲ್ಲಿ ಅವರು ಜನಪ್ರಿಯ ಬರಹಗಾರನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಸುಹಾಸ್‌ ಕೃಷ್ಣ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ ನಟಿಸಿರುವ ‘ಕದ್ದ ಚಿತ್ರ’ ಒಂದು ಥ್ರಿಲ್ಲರ್‌ ಕಥಾನಕ. ವಿಜಯ ರಾಘವೇಂದ್ರ ಅವರು ಭಿನ್ನ ಪಾತ್ರಗಳಲ್ಲಿ ನಟಿಸಲು ಒಲವು ತೋರುತ್ತಾರೆ. ವಿಶೇಷ ಕಥೆಗಳನ್ನು ಆಯ್ಕೆ ಮಾಡಿಕೊಂಡು ಅಭಿನಯಿಸುವುದೆಂದರೆ ಅವರಿಗಿಷ್ಟ. ಇತ್ತೀಚೆಗೆ ಅವರ ನಟನೆಯ ‘ರಾಘು’ ಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿತ್ತು. ಚಿತ್ರದುದ್ದಕ್ಕೂ ತೆರೆಮೇಲೆ ಕಾಣಿಸುವ ಒಂದೇ ಪಾತ್ರದ ಚಿತ್ರ ಅದು! ‘ಕದ್ದ ಚಿತ್ರ’ ಸಿನಿಮಾದಲ್ಲೂ ಅವರು ಭಿನ್ನ ಪಾತ್ರ ಮಾಡಿದ್ದಾರೆ. ಭಾರತದ ಖ್ಯಾತ ಬರಹಗಾರರೊಬ್ಬರ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ಕಾರಣಾಂತಗಳಿಂದ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿತ್ತು. ಸಂದೀಪ್‌ H K ಮತ್ತು ಸುಹಾಸ್‌ K ನಿರ್ಮಿಸಿರುವ ಚಿತ್ರಕ್ಕೆ ಕೃಷ್ಣ ರಾಜ್‌ ಸಂಗೀತ ಸಂಯೋಜಿಸಿದ್ದು, ಸ್ಟೀಫನ್‌ H ಛಾಯಾಗ್ರಹಣ ನಿರ್ವಹಿಸಿದ್ದಾರೆ. ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ, ಬೇಬಿ ಆರಾಧ್ಯಾ, ಬಾಲಾಜಿ ಮನೋಹರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್‌ 7ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here