ನಾನಿ ಅಭಿನಯದ PAN ಇಂಡಿಯಾ ಸಿನಿಮಾ ‘ದಸರಾ’ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾ ತಾರೆಯರಾದ ಎಸ್‌.ಎಸ್‌.ರಾಜಮೌಳಿ, ರಕ್ಷಿತ್‌ ಶೆಟ್ಟಿ, ದುಲ್ಕರ್‌ ಸಲ್ಮಾನ್‌, ಧನುಷ್‌ ಮತ್ತು ಶಾಹೀದ್‌ ಕಪೂರ್‌ ಅವರು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಅವತರಣಿಕೆಗಳಲ್ಲಿ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ದುಷ್ಟರನ್ನು ಸಂಹರಿಸಿ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಸಂತೋಷ, ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುವುದಕ್ಕೆ ಟೀಸರ್‌ ಸಾಕ್ಷ್ಯ ನುಡಿಯುತ್ತದೆ. ಟೀಸರ್‌ನಲ್ಲಿ ಹೀರೋ ನಾನಿ ತಮ್ಮ ಮೇಕ್‌ ಓವರ್‌, ರಗಡ್ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಗೋದಾವರಿ ಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲ್ಲಿನ ಪ್ರಪಂಚ ಟೀಸರ್‌ನಲ್ಲಿ ಕಾಣಿಸುತ್ತದೆ. ಐದು ಭಾಷೆಗಳಲ್ಲಿ ಟೀಸರ್‌ ಬಿಡುಗಡೆಯಾಗಿದೆ. ಚಿತ್ರನಿರ್ದೇಶಕ ಎಸ್‌.ಎಸ್‌.ರಾಜಮೌಳಿ, ನಟರಾದ ರಕ್ಷಿತ್‌ ಶೆಟ್ಟಿ, ದುಲ್ಕರ್‌ ಸಲ್ಮಾನ್‌, ಧನುಷ್‌ ಮತ್ತು ಶಾಹೀದ್‌ ಕಪೂರ್‌ ಅವರು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಅವತರಣಿಕೆಗಳಲ್ಲಿ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

“ಕಳೆದ ವರ್ಷ ತೆಲುಗಿನಲ್ಲಿ RRR, ಕನ್ನಡದಲ್ಲಿ ಕೆಜಿಎಫ್ 2 , ಕಾಂತಾರ ಸಿನಿಮಾಗಳು ಸೂಪರ್‌ಹಿಟ್‌ ಆಗಿವೆ. ಈ ವರ್ಷ ದಸರಾ ಸಿನಿಮಾ ಈ ಹಿಟ್‌ ಲಿಸ್ಟ್‌ ಪಟ್ಟಿಗೆ ಸೇರಲಿದೆ ಎಂದು ಗರ್ವದಿಂದ ಹೇಳುತ್ತೇನೆ” ಎಂದಿದ್ದಾರೆ ನಟ ನಾನಿ. ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದ ನಾಯಕಿಯಾಗಿ ಕೀರ್ತಿ ಸುರೇಶ್ ಇದ್ದಾರೆ. ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಸುಧಾಕರ್ ಚೆರುಕುರಿ ನಿರ್ಮಾಣದ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನವಿದೆ. ಮಾರ್ಚ್‌ 30ರಂದು ಸಿನಿಮಾ ತೆರೆಕಾಣಲಿದೆ.

Previous articleದರ್ಶನ್‌ ಇಮೇಜಿಗೆ ಸಾಣೆ ಹಿಡಿಯುವ ‘ಕ್ರಾಂತಿ’
Next article‘ಅಯಾಲಿ’ ಮೆಚ್ಚಿದ ಸಿನಿ ತಾರೆಯರು; ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸರಣಿ

LEAVE A REPLY

Connect with

Please enter your comment!
Please enter your name here