‘ಊ ಅಂಟಾವಾ’, ಬ್ಲಾಕ್‌ ಬಸ್ಟರ್‌ ‘ಪುಷ್ಪ’ ತೆಲುಗು ಸಿನಿಮಾದ ಜನಪ್ರಿಯ ಸಾಂಗ್‌. ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಸಮಂತಾ ಇಂದು ತಮ್ಮ ಯೂಟ್ಯೂಬ್‌ನಲ್ಲಿ ಸಾಂಗ್‌ ರಿಹರ್ಸಲ್ಸ್‌ನ ಬಿಹೈಂಡ್‌ ದಿ ಸೀನ್ಸ್‌ ವೀಡಿಯೋ ಶೇರ್‌ ಮಾಡಿದ್ದಾರೆ.

ಸುಕುಮಾರ್‌ ನಿರ್ದೇಶನದ ‘ಪುಷ್ಪ’ ಚಿತ್ರದ ದೊಡ್ಡ ಯಶಸ್ಸಿನಲ್ಲಿ ಸಂಗೀತ ಸಂಯೋಜಕ ದೇವಿಶ್ರೀಪ್ರಸಾದ್‌ ಅವರ ಪಾಲೂ ಇದೆ. ಅವರ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರಕ್ಕೆ ಹೈಪ್‌ ಕ್ರಿಯೇಟ್‌ ಮಾಡಿದ್ದವು. ನಟಿ ಸಮಂತಾ ಅವರು ಹೆಜ್ಜೆ ಹಾಕಿದ್ದ ‘ಊ ಅಂಟಾವಾ’ ಪಾರ್ಟಿ ಸಾಂಗ್‌ ಸೆನ್ಸೇಷನಲ್‌ ಸಂಗೀತ ಮತ್ತು ಆಕರ್ಷಕ ಪಿಕ್ಚರೈಸೇಷನ್‌ನೊಂದಿಗೆ ಸಿನಿಪ್ರಿಯರಿಗೆ ಇಷ್ಟವಾಗಿತ್ತು. ಈ ಹಾಡಿಗೆ ನಡೆಸಿದ ತಯಾರಿ ಸಂದರ್ಭದ ವೀಡಿಯೋವೊಂದನ್ನು ನಟಿ ಸಮಂತಾ ಇಂದು ಶೇರ್‌ ಮಾಡಿದ್ದಾರೆ. “ಡ್ಯಾನ್ಸ್‌ ರಿಹರ್ಸಲ್‌ ಸುಸ್ತು ಮಾಡಿತ್ತು” ಎಂದು ಅವರು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಕೊರಿಯೋಗ್ರಾಫರ್‌ಗಳೊಂದಿಗೆ ಅವರು ಟ್ಯೂನ್‌ಗಳಿಗೆ ಹೆಜ್ಜೆ ಹಾಕಿದ್ದು, ಹಾಡಿನ ಯಶಸ್ಸಿಗೆ ಅವರು ಹಾಕಿದ್ದ ಪರಿಶ್ರಮ ಕಾಣಿಸುತ್ತದೆ. ಸಮಂತಾರ ಅಭಿಮಾನಿಗಳು ಈ ವೀಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಶೇರ್‌ ಮಾಡುತ್ತಿದ್ಧಾರೆ. ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ 2021ರ ಭಾರತದ ದೊಡ್ಡ ಹಿಟ್‌ ಚಿತ್ರ ಎನಿಸಿಕೊಂಡಿದೆ. ಥಿಯೇಟರ್‌ನಲ್ಲಿ ದೊಡ್ಡ ವಹಿವಾಟು ನಡೆಸಿದ ಸಿನಿಮಾ ನಾಳೆಯಿಂದ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ. ಮೊದಲ ಪಾರ್ಟ್‌ದ ಗೆಲುವಿನ ವಿಶ್ವಾಸದಲ್ಲಿರುವ ನಿರ್ದೇಶಕ ಸುಕುಮಾರ್‌ ಮತ್ತು ತಂಡ ಸೆಕೆಂಡ್‌ ಪಾರ್ಟ್‌ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದೆ.

Previous articleಪುಸ್ತಕ ರೂಪದಲ್ಲಿ ನಿರ್ದೇಶಕ ಸತ್ಯಜಿತ್‌ ರೇ ‘ಘರೆ ಬೈರೆ’ ಸಿನಿಮಾದ ಕೈಬರಹದ ಸ್ಕ್ರಿಪ್ಟ್‌
Next articleಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌; ಚಿತ್ರನಿರ್ದೇಶಕ ಡಿ.ಸತ್ಯಪ್ರಕಾಶ್‌ ಹೊಸ ಯೋಜನೆ

LEAVE A REPLY

Connect with

Please enter your comment!
Please enter your name here