ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ‘ಅನ್‌ಸ್ಟಾಪಬಲ್‌’ ಶೋನೊಂದಿಗೆ OTT ಪ್ರವೇಶಿಸುತ್ತಿದ್ದಾರೆ. ‘ಆಹಾ’ ಪ್ಲಾಟ್‌ಫಾರ್ಮ್‌ನಲ್ಲಿ ನವೆಂಬರ್ 4ರಿಂದ ಶೋ ಸ್ಟ್ರೀಮ್ ಆಗಲಿದೆ.

ತೆಲುಗಿನ ಜನಪ್ರಿಯ ಓಟಿಟಿ ‘ಆಹಾ’ ನಂದಮೂರಿ ಬಾಲಕೃಷ್ಣ ಅವರ ಶೋನ ಪ್ರೋಮೊ ಬಿಡುಗಡೆಗೊಳಿಸಿದೆ. ‘ಅನ್‌ಸ್ಟಾಪಬಲ್‌’ ಶೋನೊಂದಿಗೆ ನಿರೂಪಕರಾಗಿ ಅವರು ಡಿಜಿಟಲ್ ದುನಿಯಾ ಪ್ರವೇಶಿಸಲಿದ್ದಾರೆ. ‘The baap of all talk shows’ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಸಿನಿಮಾಗಳಲ್ಲಿನ ಬಾಲಕೃಷ್ಣರ ಲಾರ್ಜರ್‌ದ್ಯಾನ್ ಲೈಫ್‌ ಶೈಲಿಯಲ್ಲೇ ಪ್ರೋಮೊ ಸೃಷ್ಟಿಯಾಗಿದೆ. ಶೋನಲ್ಲಿ ಬಾಲಕೃಷ್ಣ ಅವರು ಟಾಲಿವುಡ್‌ನ ದೊಡ್ಡ ಸ್ಟಾರ್‌ಗಳೊಂದಿಗೆ ಮಾತನಾಡಲಿದ್ದಾರೆ. ಬಾಲಕೃಷ್ಣ ಅವರು ಚಿತ್ರರಂಗದ ಸಾಧಕರ ಕತೆಗಳು, ಗೊತ್ತಿರದ ಸಂಗತಿಗಳನ್ನು ಹೇಳಲಿದ್ದಾರೆ. ಫ್ಯಾನ್ಸಿ ಬೈಕ್‌, ದುಬಾರಿ ಕಾರು, ಕುದುರೆ ಏರಿ ಭರಪೂರ ಡೈಲಾಗ್‌ಗಳೊಂದಿಗೆ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಬೊಯಪಾಟಿ ಶ್ರೀನು ನಿರ್ದೇಶನದಲ್ಲಿ ಬಾಲಕೃಷ್ಣ ನಟಿಸಿರುವ ‘ಅಖಂಡ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ‘ಸಿಂಹ’ ಮತ್ತು ‘ಲೆಜೆಂಡ್‌’ ಚಿತ್ರಗಳ ನಂತರ ನಿರ್ದೇಶಕ ಬೊಯಪಾಟಿ ಸೀನು ಅವರೊಂದಿಗೆ ಬಾಲಕೃಷ್ಣರದ್ದು ಇದು ಮೂರನೇ ಸಿನಿಮಾ. ಗೋಪಿಚಂದ್‌ ಮಾಲಿನೇನಿ ನಿರ್ದೇಶನದ ತೆಲುಗು ಚಿತ್ರವೊಂದರಲ್ಲಿ ಅವರು ನಟಿಸುವುದು ಖಾತ್ರಿಯಾಗಿದೆ. ತೆಲುಗಿನ ಜನಪ್ರಿಯ ಓಟಿಟಿ ಫ್ಲಾಟ್‌ಫಾರ್ಮ್‌ ‘ಆಹಾ’ ಈ ಹಿಂದೆ ನಟಿ ಸಮಂತಾ ನಿರೂಪಣೆಯಲ್ಲಿ ‘ಸ್ಯಾಮ್ – ಜಾಮ್‌’ ಶೋ ರೂಪಿಸಿತ್ತು. ನಟಿ ಲಕ್ಷ್ಮೀ ಮಂಚು ಅವರು ಈ ಓಟಿಟಿಗಾಗಿ ‘ಆಹಾ ಭೋಜನಾಂಬು’ ಅಡುಗೆ ಶೋ ನಡೆಸಿಕೊಟ್ಟಿದ್ದರು. ಸದ್ಯ ‘ಆಹಾ’ದಲ್ಲಿ ‘ನಂ.1 ಯಾರೀ’ ಸೀಸನ್‌ 3 ಸ್ಟ್ರೀಮ್ ಆಗುತ್ತಿದೆ. ‘ಬಾಹುಬಲಿ’ ಖ್ಯಾತಿಯ ನಟ ರಾಣಾ ಶೋ ನಿರೂಪಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here