ಹಿಂದಿ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ರಾಜ್‌ಕುಮಾರ್‌ ಕೊಹ್ಲಿ (90 ವರ್ಷ) ಅಗಲಿದ್ದಾರೆ. ಇವರ ನಿರ್ದೇಶನದಲ್ಲಿ ಸುನೀಲ್ ದತ್, ಧರ್ಮೇಂದ್ರ, ಜೀತೇಂದ್ರ, ಶತ್ರುಘ್ನ ಸಿನ್ಹಾ, ರೀನಾ ರಾಯ್, ಅನಿತಾ ಸೇರಿದಂತೆ ಹೆಸರಾಂತ ನಟ – ನಟಿಯರ ಚಿತ್ರಗಳು ತಯಾರಾಗಿವೆ.

ಹಿಂದಿ ಚಿತ್ರನಿರ್ದೇಶಕ ರಾಜ್‌ಕುಮಾರ್‌ ಕೊಹ್ಲಿ (90 ವರ್ಷ) ನಿನ್ನೆ (ನವೆಂಬರ್‌ 24) ನಿಧನರಾಗಿದ್ದಾರೆ. 1966ರ ಚಲನಚಿತ್ರ ‘ದುಲ್ಲಾ ಭಟ್ಟಿ’, ದಾರಾ ಸಿಂಗ್ ನಟಿಸಿದ ‘ಲೂಟೆರಾ’ (1970), ‘ನಾಗಿನ್’ (1976), ‘ಜಾನಿ ದುಷ್ಮನ್’ (1979), ‘ಬದ್ಲೆ ಕಿ ಆಗ್’, ‘ನೌಕರ್ ಬೀವಿ ಕಾ’, ‘ರಾಜ್ ತಿಲಕ್'(1984), ಅಕ್ಷಯ್‌ ಕುಮಾರ್ ಅಭಿನಯದ ‘ಜಾನಿ ದುಷ್ಮನ್’ (2002) ಇವರ ನಿರ್ದೇಶನದ ಜನಪ್ರಿಯ ಚಿತ್ರಗಳು. ಇವರ ನಿರ್ದೇಶನದಲ್ಲಿ ಸುನೀಲ್ ದತ್, ಧರ್ಮೇಂದ್ರ, ಜೀತೇಂದ್ರ, ಶತ್ರುಘ್ನ ಸಿನ್ಹಾ, ರೀನಾ ರಾಯ್, ಅನಿತಾ ಸೇರಿದಂತೆ ಹೆಸರಾಂತ ನಟ – ನಟಿಯರ ಚಿತ್ರಗಳು ನಿರ್ಮಾಣಗೊಂಡಿವೆ. ರಾಜ್‌ಕುಮಾರ್ ಅವರ ತಾರಾ ಪುತ್ರ ಅರ್ಮಾನ್ ಕೊಹ್ಲಿ ಅವರು ತಮ್ಮ ತಂದೆ ನಿರ್ಮಾಣದ ‘ವಿರೋಧಿ’ (1992) ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಪುತ್ರನಿಗಾಗಿ ಅವರು ‘ಔಲಾದ್ ಕೆ ದುಷ್ಮನ್’ (1993) ಮತ್ತು ʼಕಹಾರ್ʼ (1997) ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಜ್‌ಕುಮಾರ್‌ ಕೊಹ್ಲಿ ನಿಧನಕ್ಕೆ ಬಾಲಿವುಡ್‌ನ ಹಲವರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here