ನಾಡಿನಲ್ಲಿ ಈಗ ದಸರಾ ಹಬ್ಬದ ಸಂಭ್ರಮ. ಸ್ಪರ್ಧಿಗಳಿಗೆ ಶುಭಾಶಯ ಕೋರಲು ನಟಿ ತಾರಾ ಬಿಗ್‌ಬಾಸ್‌ ಮನೆಗೆ ತೆರೆಳಿದ್ದರು. ತಾರಾ ಇದ್ದಷ್ಟೂ ಹೊತ್ತು ಮನೆಯಲ್ಲಿ ಸೆಲೆಬ್ರೇಷನ್‌ ಮೂಡ್‌ ಇತ್ತು. ನಟಿ ಎಲ್ಲರೊಂದಿಗೆ ಬೆರೆತು ಶುಭಾಶಯ ಕೋರಿ ಬಂದಿದ್ದಾರೆ.

ದಸರಾ ಹಬ್ಬದ ಈ ಸಂದರ್ಭದಲ್ಲಿ ಬಿಗ್‌ಬಾಸ್‌ ಮನೆಯೊಳಗೂ ಹಬ್ಬದ ಸಡಗರ ಮನೆಮಾಡಿದೆ. ಟಾಸ್ಕ್‌, ಪನಿಶ್‌ಮೆಂಟ್‌, ಜಗಳಗಳಿಂದ ಬಳಲಿರುವ ಸ್ಪರ್ಧಿಗಳ ಮುಖದಲ್ಲಿ ಸಂತಸದ ನಗೆಯರಳಿದೆ. ಮನೆಯಲ್ಲಿ ಸೆಲೆಬ್ರೇಷನ್‌ ಮೂಡ್‌ ರೂಪುಗೊಂಡಿದೆ. ಬಿಗ್‌ಬಾಸ್‌ ಮನೆಯ ಸಂಭ್ರಮದ ಕೇಂದ್ರಬಿಂದು ನಟಿ ತಾರಾ ಆಗಿದ್ದರು ಎನ್ನುವುದು ವಿಶೇಷ! ಮನೆಯೊಳಗೆ ಹಬ್ಬವನ್ನು ಆಚರಿಸಲು ಹಿರಿಯ ನಟಿ, ತಾರಾ ಅನೂರಾಧಾ ಎಂಟ್ರಿ ಕೊಟ್ಟಿದ್ದಾರೆ. ಭರಪೂರ ನಗು, ಸಣ್ಣ ಕೀಟಲೆ, ಖುಷಿಯ ಅಲೆಯೋ ಅಲೆ – ಈ ಅಲೆಯಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಮೈಮರೆತಿದ್ದಾರೆ. ಹಾಡಿ ಕುಣಿದಿದ್ದಾರೆ. ನಕ್ಕು ನಲಿದಿದ್ದಾರೆ. ಆ ಸಂಭ್ರಮದ ಝಲಕ್ ತೋರಿಸುವ ಪ್ರೊಮೊ JioCinemaಬಿಡುಗಡೆ ಮಾಡಿದೆ. ಹಲವು ಅನಿರೀಕ್ಷಿತಗಳಿಂದ ಮನೆಯೊಳಗೆ ಹುಟ್ಟಿಕೊಂಡಿದ್ದ ಟೆನ್ಷನ್‌ ದಸರೆಯ ಸಂಭ್ರಮದಲ್ಲಿ ಕಳೆದುಹೋಗಲಿದೆಯೇ? ಅಥವಾ ಖುಷಿಯ ಸೂರ್ಯನಿಗೆ ಮತ್ತೆ ಕಾರ್ಮೋಡ ಕವಿಯಲಿದೆಯೇ? ಎನ್ನುವ ಪ್ರಶ್ನೆಗಳಂತೂ ಇದ್ದೇ ಇರುತ್ತವೆ.

LEAVE A REPLY

Connect with

Please enter your comment!
Please enter your name here