DC Extended Universe ಸರಣಿಯ ‘Black Adam’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಡೇನ್‌ ಜಾನ್ಸನ್‌ ಸಿನಿಮಾದ ಶೀರ್ಷಿಕೆ ಪಾತ್ರದಲ್ಲಿದ್ದು ಪಿಯರ್ಸ್‌ ಪ್ರಾಸ್ನನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಡೇನ್‌ ಜಾನ್ಸನ್‌ ಪ್ರಮುಖ ಪಾತ್ರದಲ್ಲಿರುವ ‘Black Adam’ ಸಿನಿಮಾದ ಮೊದಲ ಟ್ರೈಲರ್‌ ಬಿಡುಗಡೆಯಾಗಿದೆ. ಇದು DC Extended Universe ಸರಣಿಯ ಹನ್ನೊಂದನೇ ಸಿನಿಮಾ. ಕೋವಿಡ್‌ ಪ್ಯಾಂಡಮಿಕ್‌ನಿಂದ ಚಿತ್ರೀಕರಣ ವಿಳಂಬವಾಗಿತ್ತು. antihero Black Adam ಕತೆ ಈಗ ಸಿದ್ಧವಾಗಿದ್ದು, ಅಕ್ಟೋಬರ್‌ 21ರಂದು ಸಿನಿಮಾ ತೆರೆಕಾಣಲಿದೆ. Jaume Collet – Serra ನಿರ್ದೇಶನದ ಸಿನಿಮಾದ ‘ಡಾಕ್ಟರ್‌ ಫೇಟ್‌’ ಪಾತ್ರದಲ್ಲಿ ‘ಜೇಮ್ಸ್‌ ಬಾಂಡ್‌’ ಖ್ಯಾತಿಯ ಪಿಯರ್ಸ್‌ ಬ್ರಾಸ್ನನ್‌ ಚಿತ್ರದಲ್ಲಿ ಇದ್ದಾರೆ. ಟ್ರೈಲರ್‌ನ ಆರಂಭದಲ್ಲೇ ಡೇನ್‌ ಪಾತ್ರದ ಟ್ರಾನ್ಸ್‌ಫಾರ್ಮೇಷನ್‌ ಸಿನಿಮಾ ಕುರಿತಂತೆ ಕುತೂಹಲ ಮೂಡಿಸುತ್ತದೆ. ಈ ಚಿತ್ರದ ನಿರೀಕ್ಷೆಯಲ್ಲಿದ್ದ ಸಿನಿಮಾ ಪ್ರಿಯರು ಸೋಷಿಯಲ್‌ ಮೀಡಿಯಾದಲ್ಲಿ ಟ್ರೈಲರ್‌ ಕುರಿತು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಡೇನ್‌ ಜಾನ್ಸನ್‌ ಅವರಿಗೆ Black Adam ಪಾತ್ರ ಅತ್ಯಂತ ಸೂಕ್ತವಾಗಿ ಹೊಂದುತ್ತದೆ ಎನ್ನುವುದು ಬಹುಪಾಲು ಜನರ ಅಭಿಪ್ರಾಯವಾಗಿದೆ.

LEAVE A REPLY

Connect with

Please enter your comment!
Please enter your name here