ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್‌’ ಸಿನಿಮಾದ ‘ಆಗಂತುಕ’ ಸಾಂಗ್‌ ಬಿಡುಗಡೆಯಾಗಿದೆ. Rap ಶೈಲಿಯ ಹಾಡನ್ನು Rapper ಅನೂಪ್‌ ಮತ್ತು ಕೌಮುದಿ ಹಾಡಿದ್ದಾರೆ. Rap ಮತ್ತು ಭಾರತೀಯ ಪಾರಂಪರಿಕ ಸಂಗೀತ ಶೈಲಿಯ ಈ ಹಾಡಿಗೆ ಪ್ರಸನ್ನ ಕುಮಾರ್‌ ಎಂ ಎಸ್‌ ಸಂಗೀತ ಸಂಯೋಜಿಸಿದ್ದಾರೆ.

ದೀಕ್ಷಿತ್‌ ಶೆಟ್ಟಿ ಮತ್ತು ಚೈತ್ರಾ ಆಚಾರ್‌ ನಟನೆಯ ‘ಬ್ಲಿಂಕ್‌’ ಸಿನಿಮಾದ ‘ಆಗಂತುಕ’ ಸಾಂಗ್‌ ರಿಲೀಸ್‌ ಆಗಿದೆ. Rap ಶೈಲಿಯ ಹಾಡಿಗೆ ಭಾರತೀಯ ಪಾರಂಪರಿಕ ಸಂಗೀತವನ್ನೂ ಬೆರೆಸಿ ಸಂಗೀತ ಸಂಯೋಜಿಸಿದ್ದಾರೆ ಪ್ರಸನ್ನ ಕುಮಾರ್‌ ಎಂ ಎಸ್‌. ಖ್ಯಾತ Rapper ಅನೂಪ್‌ ಮತ್ತು ಕೌಮುದಿ ಈ ಹಾಡಿಗೆ ದನಿಯಾಗಿದ್ದಾರೆ. ಸೈನ್ಸ್‌ ಫಿಕ್ಷನ್‌ ಕಥಾವಸ್ತು ಇರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಂದಾರ ಬಟ್ಟಲಹಳ್ಳಿ, ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ, ಕಿರಣ್ ನಾಯ್ಕ್ ನಟಿಸಿದ್ದಾರೆ. ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗೀರ್‌ದಾರ್‌ ಸಂಕಲನ ಚಿತ್ರಕ್ಕಿದೆ. ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಅಡಿ ರವಿಚಂದ್ರ ಎ ಜೆ ಅವರು ಚಿತ್ರ ನಿರ್ಮಿಸುತ್ತಿದ್ದು, ಶ್ರೀನಿಧಿ ಬೆಂಗಳೂರು ನಿರ್ದೆಶನದ ಹೊಣೆ ಹೊತ್ತಿದ್ದಾರೆ. ಟೀಸರ್‌ ಮೂಲಕ ಗಮನ ಸೆಳೆದಿದ್ದ ಸಿನಿಮಾ ಇದೀಗ ‘ಆಗಂತುಕ’ ಸಾಂಗ್‌ನೊಂದಿಗೆ ಪ್ರೊಮೋಷನ್‌ಗೆ ಚಾಲನೆ ನೀಡಿದೆ. ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

LEAVE A REPLY

Connect with

Please enter your comment!
Please enter your name here