ಸಿಹಿಕಹಿ ಚಂದ್ರು ಸಾರಥ್ಯದ ‘ಬೊಂಬಾಟ್‌ ಭೋಜನ’ ಕನ್ನಡ ಕಿರುತೆರೆಯ ಜನಪ್ರಿಯ ಶೋ. ಸ್ಟಾರ್‌ ಸುವರ್ಣ ವಾಹಿನಿಯ ಈ ಶೋನ 3ನೇ ಸೀಸನ್‌ಗೆ ಚಾಲನೆ ಸಿಗುತ್ತಿದೆ. ಈ ಸೀಸನ್‌ನಲ್ಲಿ ಶೋಗೆ ವಿವಿಧ ಸೆಗ್‌ಮೆಂಟ್‌ಗಳು ಸೇರ್ಪಡೆಯಾಗಿರುವುದು ವಿಶೇಷ.

ನಟ, ನಿರ್ದೇಶಕರಾಗಿ ಕನ್ನಡಿಗರಿಗೆ ಚಿರಪರಿಚಿತರು ಸಿಹಿಕಹಿ ಚಂದ್ರು. ‘ಬೊಂಬಾಟ್‌ ಭೋಜನ’ ಅಡುಗೆ ಶೋನಲ್ಲಿ ರುಚಿಕರ ಅಡುಗೆ ಪರಿಚಯಿಸುತ್ತಾ ಮತ್ತಷ್ಟು ಹತ್ತಿರವಾದರು. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ 2019ರಲ್ಲಿ ಆರಂಭವಾದ ಮೊದಲ ಸೀಸನ್‌ಗೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎರಡು ಸೀಸನ್‌ಗಳಲ್ಲಿ ಮೂಡಿಬಂದ ‘ಬೊಂಬಾಟ್‌ ಭೋಜನ’ ಜನಪ್ರಿಯತೆ ಗಳಿಸಿತ್ತು. ಇದೀಗ ಶೋನ ಮೂರನೇ ಸೀಸನ್‌ಗೆ ಚಾಲನೆ ಸಿಗುತ್ತಿದೆ. ಈ ಸೀಸನ್ ನಲ್ಲಿ ‘ಬಯಲೂಟ’, ‘ಸವಿಯೂಟ’, ‘ಮನೆ ಊಟ’, ‘ಅಂದ ಚಂದ’, ‘ಅಂಗೈ ಅಲ್ಲಿ ಆರೋಗ್ಯ’, ‘ಟಿಪ್ ಟಿಪ್ ಟಿಪ್’ ಹಾಗೂ ‘ಅತಿಥಿ ದೇವೋಭವ’ ಶೀರ್ಷಿಕೆಯಡಿ ಏಳು ವಿವಿಧ ಸೆಗ್‌ಮೆಂಟ್‌ಗಳಿರುತ್ತವೆ.

ಡಾ.ಗೌರಿ ಸುಬ್ರಹ್ಮಣ್ಯ ಅವರು ಆರೋಗ್ಯದ ಕುರಿತು ಮನೆಮದ್ದುಗಳನ್ನು ತಿಳಿಸಿಕೊಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಚುಟುಕು ಕವಿ ದುಂಡಿರಾಜ್ ಅವರು ಹನಿಗವನವೊಂದನ್ನು ಹೇಳುತ್ತಾರೆ. ಸೋಮವಾರದಿಂದ ಶನಿವಾರದ ತನಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ‘ಬೊಂಬಾಟ್ ಭೋಜನ ಸೀಸನ್ 3’ ಮೂಡಿಬರಲಿದೆ ಎಂದು ಮಾಹಿತಿ ನೀಡುತ್ತಾರೆ ಸಿಹಿಕಹಿ ಚಂದ್ರು. ಸಿಹಿಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಶೋನ ಭಾಗವಾಗಿರುತ್ತಾರೆ.

Previous articleವಾಸ್ತವಿಕತೆಯಿಂದ ದೂರವೇ ಉಳಿಯುವ ‘ಮಿಷನ್‌ ಮಜ್ನು’
Next articleಟ್ರೈಲರ್‌ | ರೊಮ್ಯಾಂಟಿಕ್‌ – ಥ್ರಿಲ್ಲರ್‌ ಜರ್ನೀ ಕತೆ ‘ಲಾಂಗ್‌ ಡ್ರೈವ್’

LEAVE A REPLY

Connect with

Please enter your comment!
Please enter your name here