ಬೆಳಬೆಳಿಗ್ಗೆಯೇ ಬಿಗ್‌ಬಾಸ್ ಮನೆಯ ಓಪನ್ ಆದಾಗ ಎಲ್ಲ ಸ್ಫರ್ಧಿಗಳೂ ಅಚ್ಚರಿಯಿಂದ ಅತ್ತ ನೋಡಿದರು. ತೆರೆದ ಬಾಗಿಲಿಂದ ಬ್ರಹ್ಮಾಂಡ ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಬ್ರಹ್ಮಾಂಡ ಗುರೂಜಿ Bigg Bossನ ಮಾಜಿ ಸ್ಪರ್ಧೆ ಎನ್ನುವುದು ವಿಶೇಷ.

ಬಿಗ್‌ಬಾಸ್‌ನಲ್ಲಿ ಕಳೆದ ವಾರಾಂತ್ಯ ಇಬ್ಬರು ಸ್ಪರ್ಧಿಗಳ ಎಲಿಮಿನೇಷನ್‌ ಆಗಿತ್ತು. ಡಬಲ್‌ ಎಲಿಮಿನೇಷನ್‌ಗಳಿಂದ ವಿಷಾದದ ಮೂಡ್‌ನಲ್ಲಿದ್ದ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಸೋಮವಾರ ಬೆಳಗ್ಗೆ ಸರ್ಪೈಸ್ ಸಿಕ್ಕಿದೆ. ಅದು ಒಬ್ಬರ ಸ್ಪೆಷಲ್ ಎಂಟ್ರಿಯಿಂದ! JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಈ ಸ್ಪೆಷಲ್‌ ಎಂಟ್ರಿಯ ಗ್ಲಿಂಪಸ್‌ ಇದೆ. ‘ಮುಂಡಾ ಮೋಚ್ತು’ ಎಂಬ ಶಬ್ಧ ಬಿಗ್‌ಬಾಸ್‌ ಮನೆಯಲ್ಲಿ ಮೊಳಗಿದೆ! ಬ್ರಹ್ಮಾಂಡ ಗುರೂಜಿ ಬಿಗ್‌ಬಾಸ್ ಮನೆಗೆ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಾರೆ!

ಬೆಳಬೆಳಿಗ್ಗೆಯೇ ಬಿಗ್‌ಬಾಸ್ ಮನೆಯ ಓಪನ್ ಆದಾಗ ಎಲ್ಲ ಸ್ಫರ್ಧಿಗಳೂ ಅಚ್ಚರಿಯಿಂದ ಅತ್ತ ನೋಡಿದರು. ತೆರೆದ ಬಾಗಿಲಿಂದ ಗುರೂಜಿ ಒಳಬರುತ್ತಿದ್ದಂತೆಯೇ ಎಲ್ಲರ ಮುಖದಲ್ಲಿಯೂ ನಗು. ಮನೆಯಿಡೀ ಓಡಾಡುತ್ತ, ಕ್ಯಾಮೆರಾಗಳಿಗೆ ಆರ್ಡರ್ ಮಾಡುತ್ತ, ಬಾಳೆಹಣ್ಣು ತಿನ್ನುತ್ತ ಬ್ರಹ್ಮಾಂಡ ಗುರೂಜಿ ಸ್ಪೆಷಲ್‌ ವೈಬ್ ಕ್ರಿಯೇಟ್ ಮಾಡಿದ್ದಾರೆ. ಈ ಸ್ಪೆಷಲ್ ಎಂಟ್ರಿಯಿಂದ ಸದ್ಯಕ್ಕಂತೂ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಆದರೆ ಆ ನಗು ಎಷ್ಟು ಕಾಲ ಇರುತ್ತದೆ? ಬಿಗ್‌ಬಾಸ್ ಮನೆಯಲ್ಲಿ ಗುರೂಜಿ ಎಷ್ಟು ಸಮಯ ಇರುತ್ತಾರೆ? ಯಾರು ಯಾರಿಗೆ ಏನು ಹೇಳುತ್ತಾರೆ? ಎನ್ನುವುದನ್ನು ಕಾದುನೋಡಬೇಕಿದೆ.

LEAVE A REPLY

Connect with

Please enter your comment!
Please enter your name here