ಸೂಪರ್‌ಹಿಟ್‌ ‘ವಿಕ್ರಂ ವೇದ’ ತಮಿಳು ಚಿತ್ರದ ಹಿಂದಿ ರೀಮೇಕ್‌ನಲ್ಲಿನ ಹೃತಿಕ್‌ ರೋಷನ್‌ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹೃತಿಕ್‌ ಭೂಗತ ಪಾತಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಮಾಧವನ್‌ ಅವರು ಟ್ವಿಟರ್‌ನಲ್ಲಿ ಹೃತಿಕ್‌ ‘ವೇದ’ ಲುಕ್‌ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಅಂಗವಾಗಿ ಅವರ ‘ವಿಕ್ರಂ ವೇದ’ ಸಿನಿಮಾದ ಫಸ್ಟ್‌ಲುಕ್‌ ರಿಲೀಸ್‌ ಮಾಡಿದೆ ಚಿತ್ರತಂಡ. ಈ ಪಾತ್ರದೊಂದಿಗೆ ಹೃತಿಕ್‌ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಸೈಫ್‌ ಅಲಿ ಖಾನ್‌ ಚಿತ್ರದ ‘ವಿಕ್ರಂ’ ಪಾತ್ರದಲ್ಲಿದ್ದು, ರಾಧಿಕಾ ಆಪ್ಟೆ ಅವರಿಗೆ ವಿಶೇಷ ಪಾತ್ರವಿದೆ. ಮೂಲ ಚಿತ್ರಕ್ಕೆ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದ ಪುಷ್ಕರ್‌ ಮತ್ತು ಗಾಯತ್ರಿ ಅವರೇ ಹಿಂದಿ ಅವತರಣಿಕೆಯ ಸಾರಥ್ಯ ವಹಿಸಿದ್ದಾರೆ. ‘ವಿಕ್ರಂ ಮತ್ತು ಬೇತಾಳ’ ಜನಪದ ಕತೆಯ ಪ್ರೇರಣೆ ‘ವಿಕ್ರಂ ವೇದ’ಕ್ಕೆ ಇದೆ ಎನ್ನಲಾಗಿದೆ. ಇದು ನಿಯೊ-ನೈರ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಾರೆ.

ಖಡಕ್‌ ಪೊಲೀಸ್‌ ಅಧಿಕಾರಿ ಮತ್ತು ಭೂಗತ ಪಾತಕಿಯ ಕತೆಯಿದು. ಮೂಲ ತಮಿಳು ಚಿತ್ರದಲ್ಲಿ ಆರ್‌.ಮಾಧವನ್‌ ಮತ್ತು ವಿಜಯ್‌ ಸೇತುಪತಿ ಪಾತ್ರಗಳನ್ನು ನಿರ್ವಹಿಸಿದ್ದರು. ನಟ ಆರ್.‌ಮಾಧವನ್‌ ಅವರು ಹೃತಿಕ್‌ ಲುಕ್‌ ಮೆಚ್ಚಿಕೊಂಡಿದ್ದು, “Now that’s a “Vedha” I do want to see…. Wow bro .. this is EPIC. Damnnnnn.” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಟಿ-ಸೀರೀಸ್‌, ರಿಲಯನ್ಸ್‌ ಎಂಟರ್‌ಟೇನ್‌ಮೆಂಟ್‌, ಫ್ರೈಡೇ ಫೈರ್‌ವರ್ಕ್ಸ್‌ ಮತ್ತು ನಾಟ್‌ ಸ್ಟುಡಿಯೋ ನಿರ್ಮಿಸುತ್ತಿರುವ ಸಿನಿಮಾ ಈ ವರ್ಷ ಸೆಪ್ಟೆಂಬರ್‌ 30ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here