ರಂಜಿಸುತ್ತಲೇ‌ ಅದರ ಮುಂದೂ ಯೋಚಿಸಲು ಹಚ್ವುವ ಲವಲವಿಕೆಯಿಂದ ಕೂಡಿದ ಚಿತ್ರವನ್ನು ತರುಣರ ಗುಂಪು‌ಕೊಟ್ಟಿದೆ. ತೇಜಸ್ವಿಯವರ ಮೂಲಕತೆಯನ್ನು ತುಂಬಾ ಪರಿಣಾಮಕಾರಿಯಾಗಿ ವಿಸ್ತರಿಸಿದ್ದಾರೆ. ‘ಡೇರ್ ಡೆವಿಲ್ ಮುಸ್ತಾಫಾ’ Amazon Prime Videoದಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಅಮೇಜಾನ್‌ ಪ್ರೈಂ ವೀಡಿಯೋದಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ವೀಕ್ಷಿಸಿದೆ. ‌ರಂಜಿಸುತ್ತಲೇ‌ ಅದರ ಮುಂದೂ ಯೋಚಿಸಲು ಹಚ್ವುವ ಲವಲವಿಕೆಯಿಂದ ಕೂಡಿದ ಚಿತ್ರವನ್ನು ತರುಣರ ಗುಂಪು‌ಕೊಟ್ಟಿದೆ. ತೇಜಸ್ವಿಯವರ ಮೂಲಕತೆಯನ್ನು ತುಂಬಾ ಪರಿಣಾಮಕಾರಿಯಾಗಿ ವಿಸ್ತರಿಸಿದ್ದಾರೆ. ಗಿರೀಶ್ ಕಾಸರವಳ್ಳಿ ಮೂಲಕತೆಯ ಯಾವುದೋ ಮುಖ್ಯವಾದ ಎಳೆ ಹಿಡಿದು ವ್ಯಾಖ್ಯಾನಿಸುತ್ತಾರೆ. ಮೂಲಕತೆಯ ಒತ್ತು‌,ನಿರೂಪಣೆ ಇರುವುದೇ ಬೇರೆ.! (ನಾಯಿ ನೆರಳು). ಆದರೆ ಈ ಟೀಮ್ ಮತ್ತು ನಿರ್ದೇಶಕರು ಕತೆಯನ್ನು ಪರಿಣಾಮಕಾರಿಯಾಗಿ ವಿಸ್ತರಿಸಿದ್ದಾರೆ. ಪ್ರತಿ ಹೆಜ್ಜೆಯಲ್ಲಿಯೂ ವೃತ್ತಿಪರತೆ ಎದ್ದು ಕಾಣುತ್ತದೆ. ತೇಜಸ್ವಿಯವರ ಇತರೆ ಕೃತಿಗಳ‌ ಪಾತ್ರಗಳಾದ ಮಹಾಲಕ್ಷ್ಮೀ, ರಫೀಕ್, ಅಬಚೂರು, ಕಳಸಾಪುರ, ಡಾ ಕುಬೇರ… ಕವಿತೆಗಳಲ್ಲಿ ಬರುವ ಇತರೇ ಕವಿತೆಯ ಸಾಲು, ಶಬ್ದಗಳಂತೆ ಒಂದು ಕ್ಷಣ ಅದನ್ನು‌ಮುಟ್ಟಿ ಬಂದಂತೆ ಅನಿಸುತ್ತೆ.

ಸೈಕಲ್ ಸವಾರಿಯ ದೃಶ್ಯಗಳು, ಕ್ರಿಕೆಟ್‌ ಸ್ಪರ್ಧೆಯ ತಯಾರಿ, ಕಾಡಿನ ದೃಶ್ಯಗಳು, ಗಣಪತಿ ಮೆರವಣಿಗೆ ಸಂದರ್ಭಗಳಲ್ಲಿ ಕ್ಯಾಮರಾ ಚುರುಕುತನ ತೋರಿದೆ. ಕಾಲೇಜಿನ ಸಿಬ್ದಂದಿಗಳ‌ ಆಂತರಿಕ ಗೋಜಲು ಸೊಗಸಾಗಿ ಬಂದಿವೆ. ಮುಸ್ತಾಫಾ, ರಾಮಾನುಜ ಮತ್ತು ಅವರ ತಂಡ, ಪ್ರಿನ್ಸಿಪಾಲ್ ಸೀಬಯ್ಯ, (ಅಣ್ಣನ ನೆನಪುನಲ್ಲಿ ಯುವರಾಜ ಕಾಲೇಜಿನ ಈ ಪ್ರಿನ್ಸಿಪಾಲರ ಹೆಸರು‌ ಕಾಣಿಸುತ್ತದೆ), ಉಳಿದ ಉಪನ್ಯಾಸಕರು, ಪಿ ಇ ಟೀಚರ್ ಮತ್ತು ಎರಡು ದೃಶ್ಯದಲ್ಲಿ ಬಂದು ಹೋಗುವ ಪೋಲಿಸ್ ಇನ್‌ಸ್ಪೆಕ್ಟರ್‌ ಮತ್ತುಅವರ ತಂಡ ಮತ್ತು ರಮಾಮಣಿ ಸೇರಿ ಉಳಿದ ಹುಡುಗಿಯರು ಮತ್ತವರ ಪೋಷಾಕು ಇತ್ಯಾದಿ ಎಲ್ಲರೂ ಆ ಪಾತ್ರಕ್ಕೆ ಅವರಲ್ಲದೇ ಬೇರೆಯವರು ಸಾಧ್ಯವಿಲ್ಲ ಎನ್ನುವಂತಿದೆ.

ಕಾರ್ಟೂನ್‌ ಕ್ಯಾರಿಕೇಚರ್‌ಗಳನ್ನು ಸಮರ್ಥವಾಗಿ‌ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಪ್ರತಿಭಾ ಪ್ರದರ್ಶನದ ದೃಶ್ಯಗಳನ್ಮು ಹಲವು ಭಿನ್ನವಾದ ಪರಿಣಾಮ ಉಂಟು ಮಾಡುವಂತೆ ತೋರಿಸಲಾಗಿದೆ. ವೇದಿಕೆಯ ಮೇಲಿನ ದೃಶ್ಯ, ರಾಜಕುಮಾರ್ ದೃಶ್ಯ, ರಮಾಮಣಿಯ ಮನಸ್ಸಿನಲ್ಲಿ ನಡೆಯುತ್ತಿರುವುದು ಎಲ್ಲ ಸೇರುತ್ತದೆ. ಹಿರಿಯ ಕಲಾವಿದರಾದ ಮಂಡ್ಯ ರಮೇಶ್, ಉಮೇಶ್ ಈ ಕಿರಿಯರ ಸಂಗಡ ಪರಿಣಾಮಕಾರಿಯಾಗಿ‌ ಅಭಿನಯಿಸಿದ್ದಾರೆ. ಒಂದು ಸಾರ್ಥಕ ಪರಿಣಾಮಕಾರಿ ಸಿನಿಮಾ. Amazon Primeನಲ್ಲಿ ಸ್ಟ್ರೀಮ್‌ ಆಗುತ್ತಿರುವ ಈ ಸದಭಿರುಚಿಯ ಚಿತ್ರವನ್ನು ನೀವೂ ವೀಕ್ಷಿಸಿ.

LEAVE A REPLY

Connect with

Please enter your comment!
Please enter your name here