ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ವೇದಿಕೆಯಲ್ಲಿ ಭಾರತದ ಖ್ಯಾತ ತಬಲಾ ವಾದಕ ಉಸ್ತಾದ್‌ ಝಾಕೀರ್‌ ಹುಸೇನ್‌ ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ‘ಜಾಗತಿಕ ಮ್ಯೂಸಿಕ್‌ ಆಲ್ಬಂ’, ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ಪ್ರಶಸ್ತಿ’ ಮತ್ತು ‘ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್ ಪ್ರಶಸ್ತಿ’ ವಿಭಾಗದಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳು ಸಂದಿವೆ.

ಭಾರತದ ಸುಪ್ರಸಿದ್ದ ತಬಲ ವಾದಕರಾದ ಝಾಕೀರ್‌ ಹುಸೇನ್‌ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ವೇದಿಕೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇವರು ದಾಖಲೆಯೆಂಬಂತೆ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಖ್ಯಾತ ಸಂಗೀತಗಾರರಾದ ಝಾಕೀರ್‌ ಹುಸೇನ್‌, ಜಾನ್ ಮೆಕ್‌ಲಾಫ್ಲಿನ್, ಸೆಲ್ವರಾಜ್‌ ಗಣೇಶ್‌, ಶಂಕರ್‌ ಮಹದೇವನ್‌, ಗಣೇಶ್‌ ರಾಜಗೋಪಾಲನ್‌ ಅವರನ್ನು ಒಳಗೊಂಡ ಪ್ಯೂಷನ್‌ ಬ್ಯಾಂಡ್ ‘ಶಕ್ತಿ’ ಆಲ್ಬಂ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ‘ಜಾಗತಿಕ ಮ್ಯೂಸಿಕ್‌ ಆಲ್ಬಂ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಝಾಕಿರ್ ಹುಸೇನ್ ಅವರು ಈ ಪ್ರಶಸ್ತಿಗಳೊಟ್ಟಿಗೆ ಇನ್ನೆರಡು ಪ್ರಶಸ್ತಿಗಳನ್ನು ಪಡೆದು ದಾಖಲೆ ಸೃಷ್ಟಿಸಿದ್ದಾರೆ. ರಾಕೇಶ್ ಚೌರಾಸಿಯಾ ಹಾಗೂ ಅಮೇರಿಕಾದ ಗಾಯಕರುಗಳಾದ ಬೇಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್ ಜೊತೆಗೆ ‘Pashto’ ಮತ್ತು ‘As We Speek’ ಆಲ್ಬಮ್‌ಗಳಿಗಾಗಿ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ಪ್ರಶಸ್ತಿ’ ಮತ್ತು ‘ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್ ಪ್ರಶಸ್ತಿ’ಗಳನ್ನು ಪಡೆದಿದ್ದಾರೆ.

9 ಮಾರ್ಚ್ 1951ರಲ್ಲಿ ಜನಿಸಿದ ಉಸ್ತಾದ್ ಜಾಕಿರ್ ಹುಸೇನ್ ಅವರು ಭಾರತೀಯ ಶ್ರೇಷ್ಠ ತಬಲಾ ವಾದಕ, ಸಂಯೋಜಕ, ತಾಳವಾದಕ, ಸಂಗೀತ ಸಂಯೋಜಕ ಮತ್ತು ನಟರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ತಬಲಾ ವಾದಕರಾದ ಅಲ್ಲಾ ರಖಾ ಅವರ ಹಿರಿಯ ಪುತ್ರ. ಇವರನ್ನು ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಹುಸೇನ್ ಅವರು 1973ರಲ್ಲಿ ಜಾರ್ಜ್ ಹ್ಯಾರಿಸನ್ ಅವರ ‘ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್’ ಆಲ್ಬಂನಲ್ಲಿ ಮತ್ತು ಅದೇ ವರ್ಷದಲ್ಲಿ ಜಾನ್ ಹ್ಯಾಂಡಿ ಅವರ ‘ಹಾರ್ಡ್ ವರ್ಕ್‌’ ಆಲ್ಬಂನಲ್ಲಿ ಹಾಡಿದರು. 1979ರಲ್ಲಿ ವ್ಯಾನ್ ಮಾರಿಸನ್‌ ಅವರ ‘ಇನ್‌ಟು ದಿ ಮ್ಯೂಸಿಕ್ ಅಂಡ್ ಅರ್ಥ್’ ಆಲ್ಬಂ ಮತ್ತು 1983ರಲ್ಲಿ ‘ವಿಂಡ್ & ಫೈರ್‌’ ಆಲ್ಬಂ ಪವರ್‌ಲೈಟ್‌ನಲ್ಲಿ ಪ್ರದರ್ಶನ ನೀಡಿದರು. ಹುಸೇನ್ ಅವರು 1999ರ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರವೇಶಾತಿ ಪಡೆದ ‘ವಾನಪ್ರಸ್ಥಮ್‌’ ಮಲಯಾಳಂ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಇದು 1999 ರಲ್ಲಿ AFI ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (AFI ಫೆಸ್ಟ್) ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡು, 2000ರಲ್ಲಿ ಪ್ರಶಸ್ತಿಗಳನ್ನು ಗೆದ್ದಿತು.

ಝಾಕೀರ್‌ ಅವರು ಇಸ್ತಾಂಬುಲ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (ಟರ್ಕಿ), 2000 ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (ಭಾರತ), ಮತ್ತು 2000 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (ಭಾರತ). ಹಲವಾರು ಚಲನಚಿತ್ರೋತ್ಸವಗಳಿಗೆ ಧ್ವನಿಮುದ್ರಿಕೆಗಳನ್ನು ಸಂಯೋಜಿಸಿದ್ದಾರೆ. ಮುಖ್ಯವಾಗಿ ಇಸ್ಮಾಯಿಲ್ ಮರ್ಚೆಂಟ್ ಅವರ ‘ಇನ್ ಕಸ್ಟಡಿ’ ಮತ್ತು ‘ದಿ ಮಿಸ್ಟಿಕ್ ಮಸ್ಸರ್’, ಮತ್ತು ಫ್ರಾನ್ಸಿಸ್ ಕೊಪ್ಪೊಲಾ ಅವರ ‘ಅಪೋಕ್ಯಾಲಿಪ್ಸ್ ನೌ’, ಬರ್ನಾರ್ಡೊ ಬರ್ಟೊಲುಸಿ ಅವರ ‘ಲಿಟಲ್ ಬುದ್ಧ’ ಮತ್ತು ಇತರ ಚಲನಚಿತ್ರಗಳ ಧ್ವನಿಮುದ್ರಿಕೆಗಳಲ್ಲಿ ತಬಲಾ ನುಡಿಸಿದ್ದಾರೆ. 1998ರ ಸಾಕ್ಷ್ಯಚಿತ್ರ ‘ಝಾಕಿರ್ ಅಂಡ್ ಹಿಸ್ ಫ್ರೆಂಡ್ಸ್’, ಮತ್ತು ‘ದಿ ಸ್ಪೀಕಿಂಗ್ ಹ್ಯಾಂಡ್’, ‘ಜಾಕಿರ್ ಹುಸೇನ್ ಅಂಡ್ ಆರ್ಟ್ ಆಫ್ ದಿ ಇಂಡಿಯನ್ ಡ್ರಮ್‌’ (2003 ಸುಮಂತ್ರ ಘೋಸಲ್) ಸೇರಿದಂತೆ ತಮ್ಮ ಸಂಗೀತವನ್ನು ಪ್ರದರ್ಶಿಸಿರುವ ಹಲವಾರು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಹುಸೇನ್ ಅವರು 1983ರ ಮರ್ಚೆಂಟ್ ಐವರಿ ಚಲನಚಿತ್ರ ‘ಹೀಟ್ ಅಂಡ್ ಡಸ್ಟ್‌’ನಲ್ಲಿ ಇಂದರ್ ಲಾಲ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಹಾಯಕ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿದ್ದರು. ಇವರಿಗೆ ಭಾರತ ಸರ್ಕಾರದಿಂದ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

8 ಫೆಬ್ರವರಿ 2009 ರಂದು 51 ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಹುಸೇನ್ ಅವರು ಮಿಕ್ಕಿ ಹಾರ್ಟ್, ಸಿಕಿರು ಅಡೆಪೋಜು ಮತ್ತು ಜಿಯೋವಾನ್ನಿ ಹಿಡಾಲ್ಗೊ ಅವರ ಸಹಯೋಗದ ಆಲ್ಬಂ ‘ಗ್ಲೋಬಲ್ ಡ್ರಮ್’ ಯೋಜನೆಗಾಗಿ ಸಮಕಾಲೀನ ವರ್ಲ್ಡ್ ಮ್ಯೂಸಿಕ್ ಆಲ್ಬಮ್ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿದ್ದರು. ಅವರು 1990 ರಲ್ಲಿ ಭಾರತ ಸರ್ಕಾರದಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್, 2018
ರಲ್ಲಿ ರತ್ನ ಸದಸ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. 1999 ರಲ್ಲಿ, ಅವರಿಗೆ ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಅನ್ನು ನೀಡಲಾಯಿತು, ಇದು ಕಲಾವಿದರು ಮತ್ತು ಸಂಗೀತಗಾರರಿಗೆ ಸಾಂಪ್ರದಾಯಿಕವಾಗಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿದೆ. 2016 ರಲ್ಲಿ ಶ್ವೇತಭವನದಲ್ಲಿ ನಡೆದ ಇಂಟರ್‌ನ್ಯಾಷನಲ್ ಜಾಝ್ ಡೇಗಾಗಿ ಆಲ್-ಸ್ಟಾರ್ ಗ್ಲೋಬಲ್ ಕನ್ಸರ್ಟ್‌ಗಾಗಿ ಅಮೇರಿಕಾದ ಮಾಜಿ ಅಧ್ಯಕ್ಷ ಒಬಾಮಾ ಆಹ್ವಾನಿಸಿದ್ದ ಅನೇಕ ಪ್ರಸಿದ್ದ ಸಂಗೀತಗಾರರಲ್ಲಿ ಹುಸೇನ್ ಕೂಡ ಒಬ್ಬರು. ಹುಸೇನ್ ಅವರು ಬಿಲ್ ಲಾಸ್ವೆಲ್ ಅವರ ವಿಶ್ವ ಸಂಗೀತ ಸೂಪರ್ ಗ್ರೂಪ್ ತಬಲಾ ಬೀಟ್ ಸೈನ್ಸ್‌ನ ಸ್ಥಾಪಕ ಸದಸ್ಯರೂ ಆಗಿದ್ದಾರೆ. ನಸ್ರೀನ್ ಮುನ್ನಿ ಕಬೀರ್ ಅವರು ‘ಝಾಕಿರ್ ಹುಸೇನ್: ಎ ಲೈಫ್ ಇನ್ ಮ್ಯೂಸಿಕ್’ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವು ಹುಸೇನ್ ಅವರ ಬಾಲ್ಯ ಜೀವನ, ಸಂಗೀತ ಅಭ್ಯಾಸ ಅವರ ವರ್ಷಗಳ ತರಬೇತಿ ಮತ್ತು ಸಂಗೀತಗಾರರಾಗಿ ಬೆಳವಣಿಗೆ ಹೊಂದಿದ ಅನೇಕ ಅಂಶಗಳನ್ನು ಒಳಗೊಂಡಿದೆ. ಈ ಪುಸ್ತಕ 2018ರಲ್ಲಿ ಪ್ರಕಟವಾಯಿತು.

LEAVE A REPLY

Connect with

Please enter your comment!
Please enter your name here