ಧನುಷ್‌ ಅಭಿನಯದ ಬಹುನಿರೀಕ್ಷಿತ ‘ಕ್ಯಾಪ್ಟನ್‌ ಮಿಲ್ಲರ್‌’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅರುಣ್‌ ಮಾತೇಶ್ವರನ್‌ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ ತಾರೆ ಶಿವರಾಜಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್‌ 15ರಂದು ಸಿನಿಮಾ ತೆರೆಕಾಣುತ್ತಿದೆ.

ಕಾಲಿವುಡ್‌ ನಟ ಧನುಷ್‌ ಇಂದು (ಜುಲೈ 28) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಬರ್ತ್‌ಡೇ ನಿಮಿತ್ತ ಅವರ ‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟ ಧನುಷ್‌, ಸ್ವಾತಂತ್ರ್ಯ ಪೂರ್ವ ಐತಿಹಾಸಿಕ ಕಥೆಯೊಂದನ್ನು ಹೇಳಲು ಹೊರಟಿರುವಂತಿದೆ. ಖಡಕ್‌ ಪಾತ್ರದಲ್ಲಿ ಕಂಡಿರುವ ಧನುಷ್‌ರ ರೋಚಕ ಆಕ್ಷನ್‌ ಸನ್ನಿವೇಶಗಳು ಚಿತ್ರದಲ್ಲಿವೆ. ಸ್ಯಾಂಡಲ್‌ವುಡ್‌ ನಟ ಶಿವರಾಜಕುಮಾರ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಟೀಸರ್‌ನಲ್ಲಿ ಅವರದ್ದೊಂದು Glimpses ಇದೆ. ಅರುಣ್‌ ಮಾತೇಶ್ವರನ್‌ ರಚಿಸಿ, ನಿರ್ದೇಶಿಸಿರುವ ಚಿತ್ರದಲ್ಲಿ ಪ್ರಿಯಾಂಕ್‌ ಅರುಲ್‌ ಮೋಹನ್, ಸಂದೀಪ್‌ ಕಿಶನ್‌, ಜಾನ್‌ ಕೊಕೆನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯಜ್ಯೋತಿ ಫಿಲಂಸ್ ಅಡಿಯಲ್ಲಿ ಸೆಂಧಿಲ್ ಮತ್ತು ಅರ್ಜುನ್ ತ್ಯಾಗರಾಜನ್ ಚಿತ್ರ ನಿರ್ಮಿಸಿದ್ದು, G.V ಪ್ರಕಾಶ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾ ಡಿಸೆಂಬರ್‌ 15ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here