ಅನೀಶ್‌ ತೇಜೇಶ್ವರ್‌ ನಟಿಸಿ, ನಿರ್ಮಿಸುತ್ತಿರುವ ನೂತನ ಸಿನಿಮಾ ‘ಬೆಂಕಿ’ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಕನ್ನಡ ಚಿತ್ರರಂಗದ ಹಿರಿಯ ಚಿತ್ರನಿರ್ದೇಶಕ ಎ.ಆರ್.ಬಾಬು ಅವರ ಪುತ್ರ ಶಾನ್‌ ನಿರ್ದೇಶನದ ಚೊಚ್ಚಲ ಚಿತ್ರವಿದು.

ನಮ್‌ ಏರಿಯಾಲಿ ಒಂದಿನ, ಪೊಲೀಸ್‌ ಕ್ವಾರ್ಟರ್ಸ್‌, ಅಕಿರ, ವಾಸು, ರಾಮಾರ್ಜುನ.. ಸಿನಿಮಾಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಟಿಸಿದ್ದ ಅನೀಶ್‌ ಹೊಸ ಸಿನಿಮಾ ‘ಬೆಂಕಿ’ಯಲ್ಲೂ ಪ್ರಯೋಗ ಮುಂದುವರೆಸಿದ್ದಾರೆ. ಇಂದು ಅವರ ಅವರ ಬರ್ತ್‌ಡೇ ಅಂಗವಾಗಿ ನೂತನ ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಗಡ್ಡ, ಮೀಸೆಯೊಂದಿಗೆ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅನೀಶ್‌. ಅವರ ನಿರ್ಮಾಣ ಸಂಸ್ಥೆಯಡಿ ತಯಾರಾಗುತ್ತಿರುವ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್‌. ಬಾಬು ಅವರ ಪುತ್ರ, ಶಾನ್‌ ನಿರ್ದೇಶಿಸುತ್ತಿದ್ದಾರೆ. ಅವರಿಗಿದು ಮೊದಲ ನಿರ್ದೇಶನದ ಸಿನಿಮಾ. ‘ರೈಡರ್‌’ ಸಿನಿಮಾ ಖ್ಯಾತಿಯ ಸಂಪದ ಚಿತ್ರದ ನಾಯಕಿ.

ಅಣ್ಣ ತಂಗಿ ಸೆಂಟಿಮೆಂಟ್‌ ಕಥೆ ಜೊತೆಗೆ ಹಳ್ಳಿ ಸೊಡಗಿನ ಕಂಪು ಚಿತ್ರದಲ್ಲಿರಲಿದೆ ಎನ್ನುವುದು ಅನೀಶ್‌ ಮಾತು. “ಇದು ನನ್ನ ನಟನೆಯ ಹತ್ತನೇ ಸಿನಿಮಾ. ನಮ್ಮದೇ ವಿಂಕ್‌ ವಿಷಲ್‌ ಪ್ರೊಡಕ್ಷನ್ಸ್‌ನಡಿ ನಿರ್ಮಿಸುತ್ತಿದ್ದೇನೆ. ಪ್ರತೀ ಸಿನಿಮಾದಲ್ಲೂ ಹೊಸ ಬಗೆಯ ಪಾತ್ರ ಮಾಡಬೇಕೆನ್ನುವುದು ನನ್ನ ತುಡಿತ. ನೂತನ ಚಿತ್ರದಲ್ಲಿ ನಿರ್ದೇಶಕ ಶಾನ್‌ ನನ್ನ ಹೊಸ ಲುಕ್‌ನೊಂದಿಗೆ ಪ್ರೇಕ್ಷಕರಿಗೆ ಹೊಸತನದ ಫೀಲ್‌ ನೀಡಲಿದ್ದಾರೆ” ಎನ್ನುತ್ತಾರವರು. ಈಗಾಗಲೇ ಸಿನಿಮಾದ ಶೇ. 80ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡು ಮತ್ತು ಟಾಕಿ ಪೋರ್ಷನ್‌ನ ಕೆಲವು ಸನ್ನಿವೇಶಗಳ ಶೂಟಿಂಗ್‌ ಬಾಕಿ ಇದೆ. ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ತಾರಾಬಳಗದಲ್ಲಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here