ಡಿಂಡಿಮ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ‘ಜುಗಲ್‌ ಬಂದಿ’ ಬಿಡಿ ಬಿಡಿ ಕತೆಗಳ ಗುಚ್ಛ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆಯ ಕತೆಗಳುಳ್ಳ ಟ್ರೈಲರ್‌ ಬಿಡುಗಡೆಯಾಗಿದೆ. ಇದು ಹೊಸ ಪ್ರತಿಭೆಗಳ ಮತ್ತೊಂದು ವಿಶಿಷ್ಟ ಪ್ರಯೋಗವಾಗಿದ್ದು ಶೀಘ್ರದಲ್ಲೇ ಸಿನಿಮಾ ತೆರೆಕಾಣಲಿದೆ.

ಕಳೆದೊಂದು ವರ್ಷದಿಂದೀಚೆಗೆ ಸುದ್ದಿಯಾಗಿರುವ ಚಿತ್ರಗಳ ಪೈಕಿ ‘ಜುಗಲ್‌ ಬಂದಿ’ ಕೂಡ ಒಂದು. ಹೊಸ ಪ್ರತಿಭೆಗಳ ವಿನೂತನ ಪ್ರಯತ್ನ. ದಿವಾಕರ ಡಿಂಡಿಮ ಚೊಚ್ಚಲ ನಿರ್ದೇಶನದ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದ ಸಿನಿಮಾ ಈ ಹಿಂದೆ ಹಾಡಿನ ಮೂಲಕ ಗಮನ ಸೆಳೆದಿತ್ತು. ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರಲಿದ್ದು, ಇದಕ್ಕೆ ಮುನ್ನ ಟ್ರೈಲರ್‌ ರಿಲೀಸ್‌ ಆಗಿದೆ.

ಡಿಂಡಿಮ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ಚಿತ್ರ ಬಿಡಿ ಬಿಡಿ ಕತೆಗಳ ಜುಗಲ್ ಬಂದಿ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆಯ ಕತೆಗಳು ಇಲ್ಲಿವೆ. ‘ಕಾಂತಾರ’ ಸಿನಿಮಾ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ, ಚಂದ್ರಪ್ರಭಾ, ರಂಜನ್‌, ಯುಕ್ತ ಅಲ್ಲು ಸುಶ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್.ಎಂ.ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಸಾಹಿತ್ಯವಿದೆ.

Previous article‘ಪೊನ್ನಿಯಿನ್‌ ಸೆಲ್ವನ್‌ 2’ ಲಿರಿಕಲ್‌ ಸಾಂಗ್‌ ‘ಕಿರುನಗೆ’; ಏಪ್ರಿಲ್‌ 28ಕ್ಕೆ ಸಿನಿಮಾ
Next articleBiffes 2023 | ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ಚಾಲನೆ

LEAVE A REPLY

Connect with

Please enter your comment!
Please enter your name here