ಪಿ.ವಾಸು ನಿರ್ದೇಶನದಲ್ಲಿ ರವಿಚಂದ್ರನ್‌ ನಟಿಸಿರುವ ‘ದೃಶ್ಯ2’ OTT ಗೆ ಬರುತ್ತಿದೆ. ‘ದೃಶ್ಯ’ ಸೀಕ್ವೆಲ್‌ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಅನಂತನಾಗ್‌, ನವ್ಯಾ ನಾಯರ್‌, ಪ್ರಮೋದ್‌ ಶೆಟ್ಟಿ, ಆರೋಹಿ ನಾರಾಯಣ್‌ ನಟಿಸಿದ್ದಾರೆ.

ರವಿಚಂದ್ರನ್ ‘ರಾಜೇಂದ್ರ ಪೊನ್ನಪ್ಪ’ನಾಗಿ ಕಾಣಿಸಿಕೊಂಡಿದ್ದ ‘ದೃಶ್ಯ2’ ಥಿಯೇಟರ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. 2021ರ ಡಿಸೆಂಬರ್ 10ರಂದು ಸಿನಿಮಾ ತೆರೆಕಂಡಿತ್ತು. ಮರ್ಡರ್​ ಮಿಸ್ಟರಿ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರು ನಟಿಸಿದ್ದ ‘ದೃಶ್ಯ 2’ ಸಿನಿಮಾದ ಕ್ಲೈಮ್ಯಾಕ್ಸ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮೂಲ ಮಲಯಾಳಂ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಮಾರ್ಪಾಟು ಮಾಡಲಾಗಿತ್ತು. ಇದೀಗ ಈ ಸಿನಿಮಾ ಫೆಬ್ರವರಿ 25ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್ ನಾಗ್ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸುರೇಶ್​ ಅರಸ್​ ಸಂಕಲನ, ಜಿ.ಸ್​.ವಿ. ಸೀತಾರಾಮ್​ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತ ಸಿನಿಮಾಕ್ಕಿದೆ. ಇತ್ತೀಚೆಗೆ ZEE5ನಲ್ಲಿ ಸ್ಟ್ರೀಮ್‌ ಆದ ಕನ್ನಡಿಗ, ಭಜರಂಗಿ 2, ಗರುಡ ಗಮನ ವೃಷಭ ವಾಹನ, 100 ಮುಂತಾದ ಕನ್ನಡ ಚಿತ್ರಗಳಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಇದು ಆಶಾದಾಯಕ ಬೆಳವಣಿಗೆ.

Previous articleಪ್ರೀತಿಗೆ ಪ್ರೀತಿಯೇ ಬೆಸುಗೆ; ಇದು ‘Bytwo ಲವ್‌’
Next articleಹಿರಿಯ ನಟ ರಾಜೇಶ್‌ ಇನ್ನಿಲ್ಲ; ಕಪ್ಪು – ಬಿಳುಪು ಸಿನಿಮಾ ಯುಗದ ಮೇರು ಕಲಾವಿದ

LEAVE A REPLY

Connect with

Please enter your comment!
Please enter your name here