ಮೃದುಲ್ ನಾಯರ್ ನಿರ್ದೇಶನದ ‘ಕಾಸರಗೋಲ್ಡ್’ ಮಲಯಾಳಂ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಆಸಿನ್ ಅಲಿ, ಸನ್ನಿ ವೇನ್, ವಿಷ್ಣು ವಿಜಯ್, ವಿನಾಯಕನ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಸೆಪ್ಟೆಂಬರ್ 15ರಂದು ಸಿನಿಮಾ ತೆರೆಕಾಣಲಿದೆ.
ಆಸಿಫ್ ಅಲಿ ಮತ್ತು ಸನ್ನಿ ವೇನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕ್ರೈಮ್ ಡ್ರಾಮಾ ‘ಕಾಸರಗೋಲ್ಡ್’ ಮಲಯಾಳಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಮೃದುಲ್ ನಾಯರ್ ನಿರ್ದೇಶಿಸಿದ್ದಾರೆ. ಆ್ಯಕ್ಷನ್ – ಥ್ರಿಲ್ಲರ್ ರೋಮಾಂಚನಕಾರಿ ದೃಶ್ಯಗಳಿಂದ ಕೂಡಿರುವ ಚಿತ್ರದ ಟ್ರೈಲರ್‌ನಲ್ಲಿ ಆಸಿಫ್ ಮತ್ತು ಅವನ ಜೊತೆಗಾರ ಸನ್ನಿ ಅಪಾಯಕಾರಿಯಾದ ಯೋಜನೆಯೊಂದನ್ನು ಹಾಕಿಕೊಳ್ಳುತ್ತಾರೆ. ಜೀವನಪರ್ಯಂತ ಸಂಪಾದಿಸುವ ಸಂಪತ್ತನ್ನು ಒಂದೇ ಬಾರಿಗೆ ಭದ್ರಪಡಿಸಿಟ್ಟುಕೊಳ್ಳಲು ಚಿನ್ನವನ್ನು ಕದಿಯುವ ಪ್ಲಾನ್ ಮಾಡಿ ಅಪಾರ ಚಿನ್ನದ ಬಿಸ್ಕೇಟ್‌ಗಳನ್ನು ಕದಿಯುತ್ತಾರೆ. ಆದರೆ ಆಸಿಫ್ ಮತ್ತು ಸನ್ನಿಗೆ ಅವರು ಕದ್ದಿದ್ದ ಚಿನ್ನದ ಮೇಲೆ ದುರಾಸೆ ಹುಟ್ಟಿ ಅವರಿಬ್ಬರು ತಮ್ಮ ಸ್ನೇಹವನ್ನು ಮರೆತು ವೈರಿಗಳಾಗಿ ದ್ವೇಷ ಸಾಧಿಸುತ್ತಾರೆ.
ಈ ಸಿನಿಮಾವನ್ನು ವಿಕ್ರಮ್ ಮೆಹ್ರಾ, ಸಿದ್ಧಾರ್ಥ್ ಆನಂದ್ ಕುಮಾರ್, ಸೂರಜ್ ಕುಮಾರ್ ಮತ್ತು ರಿನ್ನಿ ದಿವಾಕರ್ ನಿರ್ಮಿಸಿದ್ದಾರೆ. ವಿಷ್ಣು ವಿಜಯ್ ಮತ್ತು ನಿರಂಜ್ ಸುರೇಶ್ ಸಂಗೀತ ನೀಡಿದ್ದಾರೆ. ಮನೋಜ್ ಕನ್ನೊತ್ ಸಂಕಲನ ಚಿತ್ರಕ್ಕಿದೆ. ವಿನಾಯಕನ್ ಮತ್ತು ವಿಷ್ಣು ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.