ಪೃಥ್ವಿರಾಜ್ ನಟನೆಯ ‘ಎಝ್ರಾ’ ಮಲಯಾಳಂ ಚಿತ್ರದ ಹಿಂದಿ ರಿಮೇಕ್‌ ‘ಡಿಬ್ಬಕ್‌’ ಟೀಸರ್ ಬಿಡುಗಡೆಯಾಗಿದೆ. ಇಮ್ರಾನ್ ಹಶ್ಮಿ, ನಿಕಿತಾ ದತ್ತಾ ಅಭಿನಯದ ಸಿನಿಮಾ ಇದೇ ತಿಂಗಳ 29ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ.

“ಬಿಗಿಯಾದ ನಿರೂಪಣೆಯ ಹಾರರ್ ಸಿನಿಮಾಗಳು ಪ್ರೇಕ್ಷಕರನ್ನು ತಲುಪುವುದರಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಈ ಸಿನಿಮಾದಲ್ಲಿಯೂ ಅದೇ ಮ್ಯಾಜಿಕ್ ನಡೆಯಲಿದೆ ಎನ್ನುವ ವಿಶ್ವಾಸ ನಮ್ಮದು. ವೀಕ್ಷಕರು ಮರೆಯದಂತಹ ಅನುಭವವನ್ನು ಈ ಚಿತ್ರದಲ್ಲಿ ನಾವು ನೀಡಲಿದ್ದೇವೆ” ಎಂದಿದ್ದಾರೆ ‘ಡಿಬ್ಬಕ್‌’ ಹಿಂದಿ ಚಿತ್ರದ ನಟ ಇಮ್ರಾನ್ ಹಶ್ಮಿ. ಅವರು ಈ ಹಿಂದೆ ಕೂಡ ಕೆಲವು ಹಾರರ್‌ ಸಿನಿಮಾಗಳಲ್ಲಿ ನಟಿಸಿದವರು. ಇದೀಗ ‘ಡಿಬ್ಬಕ್‌ – ದಿ ಕರ್ಸ್‌ ಈಸ್ ರಿಯಲ್‌’ ಹಾರರ್‌- ಥ್ರಿಲ್ಲರ್‌ನೊಂದಿಗೆ ಮತ್ತೊಮ್ಮೆ ವೀಕ್ಷಕರಿಗೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಜಯ್‌ಕೃಷ್ಣನ್ ನಿರ್ದೇಶನದ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಇದೇ ಅಕ್ಟೋಬರ್ 29ರಿಂದ ಸ್ಟ್ರೀಮ್ ಆಗಲಿದೆ.

ಪೃಥ್ವಿರಾಜ್‌ ಮತ್ತು ಪ್ರಿಯಾ ಆನಂದ್ ಅಭಿನಯದಲ್ಲಿ ನಾಲ್ಕು ವರ್ಷಗಳ ಹಿಂದೆ ‘ಎಝ್ರಾ’ ಮಲಯಾಳಂ ಚಿತ್ರದ ರೀಮೇಕ್‌ ‘ಡಿಬ್ಬಕ್‌’. ಮೂಲ ಮಲಯಾಳಂ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಹಿಂದಿಯಲ್ಲೂ ಸಿನಿಮಾ ತಯಾರಾಗಿದೆ. ಹಿಂದಿ ಅವತರಣಿಕೆಯ ಪ್ರಮುಖ ಪಾತ್ರಗಳಲ್ಲಿ ಇಮ್ರಾನ್ ಹಶ್ಮಿ ಜೊತೆ ನಿಕತಾ ದತ್ತಾ ಮತ್ತು ಮಾನವ್ ಕೌಲ್ ಇದ್ದಾರೆ. ಟೀಸರ್‌ನಲ್ಲಿ ನಾಯಕಿ ನಿಕಿತಾ ಮಿಸ್ಟರಿ ಬಾಕ್ಸ್‌ ಓಪನ್‌ ಮಾಡಲು ಪ್ರಯತ್ನಿಸುವ ದೃಶ್ಯವಿದೆ. ಬಾಕ್ಸ್ ತೆರೆಯುತ್ತಿದ್ದಂತೆ ಅನೂಹ್ಯ ಘಟನೆಗಳು ಜರುಗುತ್ತವೆ. ಕತೆಯ ಸುಳಿವು ಬಿಟ್ಟುಕೊಡ ಟೀಸರ್ ವೀಕ್ಷಕರಲ್ಲಿ ಕುತೂಹಲ ಉಳಿಸುತ್ತದೆ.

LEAVE A REPLY

Connect with

Please enter your comment!
Please enter your name here