‘ಇಮ್ಲಿ ಇನ್ ಪ್ಯಾರಿಸ್‌’ ಸೀಸನ್‌ 2 ಟ್ರೈಲರ್ ಬಿಡುಗಡೆಯಾಗಿದ್ದು, ಡಿಸೆಂಬರ್‌ 22ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸರಣಿ ಸ್ಟ್ರೀಮ್ ಆಗಲಿದೆ. ತ್ರಿಕೋನ ಪ್ರೇಮಕತೆ ಮತ್ತು ಇಮ್ಲಿಯ ಬದಲಾದ ಜೀವನಶೈಲಿ ಸೀಸನ್‌ 2 ಮೂಲಕಥೆ.

ನೆಟ್‌ಫ್ಲಿಕ್ಸ್‌ OTT ಪ್ಲಾಟ್‌ಫಾರ್ಮ್‌ ‘ಇಮ್ಲಿ ಇನ್ ಪ್ಯಾರಿಸ್‌’ ಸೀಸನ್‌ 2 ಟ್ರೈಲರ್ ಹಂಚಿಕೊಂಡಿದೆ. ರೊಮ್ಯಾಂಟಿಕ್‌ ಕಾಮಿಡಿ ದೃಶ್ಯಗಳನ್ನು ಈ ಎರಡನೇ ಸೀಸನ್‌ನಲ್ಲಿ ಕಾಣಬಹುದು. ಮೊದಲ ಸೀಸನ್‌ನಲ್ಲಿ ಇಮ್ಲಿ ತನ್ನ ಸಿದ್ಧಾಂತಗಳ ಜೊತೆಗೆ ಪ್ಯಾರಿಸ್‌ನ ಹೈ ಸೊಸೈಟಿಯ ನಡುವೆ ಹೋರಾಡುತ್ತಾಳೆ. ಇದರ ನಡುವೆ ಫ್ರೆಂಚ್‌ನ ಮೋಜಿನ ಜೀವನಶೈಲಿಯನ್ನು ನಿಧಾನವಾಗಿ ತನ್ನ ಜೀವನದಲ್ಲಿ ಅನಿವಾರ್ಯವಾಗಿ ಅಳವಡಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲದೆ ತನ್ನ ಗೆಳತಿಯ ಬಾಯ್‌ಫ್ರೆಂಡ್‌ ಜೊತೆಗೂ ಇವಳಿಗೆ ಪ್ರೇಮಾಂಕುರವಾಗುತ್ತದೆ. ಈ ಪಾಪಪ್ರಜ್ಞೆ ಈಕೆಗೆ ಸದಾ ಕಾಡುತ್ತಲಿರುತ್ತೆ. ಇನ್ನು ಇಮ್ಲಿ ಅನೇಕ ಪುರುಷರಿಂದ ಆಕರ್ಷಿತಳಾಗೋದು ಕೂಡ ಸಹಜ. ಹೀಗೆ ಇಮ್ಲಿ ಗೊಂದಲಮಯ ಜೀವನ ಸಾಗುತ್ತಾ ಹೋಗುತ್ತದೆ.

‘ಇಮ್ಲಿ ಇನ್ ಪ್ಯಾರಿಸ್’ ಸೀಸನ್ 2 ಟ್ರೈಲರ್‍ನಲ್ಲಿ ನಾಯಕಿಯ ಪಾಪ ಪ್ರಜ್ಞೆಯನ್ನಾಗಲಿ, ಹತಾಶೆಯನ್ನಾಗಲಿ ತೋರಿಸಿಲ್ಲ. ಅಂದರೆ ಇಮ್ಲಿ ಸೀಸನ್ 2ರಲ್ಲಿ ಪ್ಯಾರಿಸ್‍ನ ಮೋಜಿನಜೀವನ ಶೈಲಿಗೆ ಅಂಟಿಕೊಂಡಳಾ ಅನ್ನೊ ಪ್ರಶ್ನೆ ಮೂಡುತ್ತದೆ. ಇಲ್ಲಿ ಇಮ್ಲಿಯ ಗೊಂದಲಕ್ಕಿಂತ ಆಕೆಯ ಸ್ವೇಚ್ಛಾಚಾರವನ್ನು ಹೆಚ್ಚಾಗಿ ಕಾಣಬಹುದು. ಇಮ್ಲಿಯ ಸದಾ ನಗುಮುಖ, ಸ್ವಚ್ಛಂದ ಓಡಾಟ, ಎಂಜಾಯ್‍ಮೆಂಟ್‍ ಅನ್ನೇ ಇಲ್ಲಿ ಹೆಚ್ಚಾಗಿ  ತೋರಿಸಿದ್ದಾರೆ. ಇಮ್ಲಿಯ ಮತ್ತೊಂದು ಜೀವನಶೈಲಿ ಅಥವಾ ಮತ್ತೊಂದು ಮುಖವನ್ನು ಸೀಸನ್ 2ರಲ್ಲಿ ಕಾಣಬಹುದು.‘ಇಮ್ಲಿಇನ್ ಪ್ಯಾರಿಸ್ 2’ ನೆಟ್‍ಫ್ಲೆಕ್ಸ್‍ನಲ್ಲಿ ಡಿಸೆಂಬರ್22ರಿಂದ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here