ಫಹಾದ್‌ ಫಾಝಿಲ್‌ ಅಭಿನಯದ ಸರ್ವೈವಲ್‌ ಡ್ರಾಮಾ ‘ಮಲಯಾಂಕುಂಜು’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮ್ಯೂಸಿಕ್‌ ಸೆನ್ಸೇಷನ್‌ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜನೆಯಿದೆ ಎನ್ನುವುದು ವಿಶೇಷ.

ನಟ ಫಹಾದ್‌ ಫಾಝಿಲ್‌ ಸದಾ ತಮ್ಮ ಪಾತ್ರ, ಸಿನಿಮಾಗಳ ಮೂಲಕ ಅಚ್ಚರಿ ಮೂಡಿಸುತ್ತಾರೆ. ‘ಮಲಯಾಂಕುಂಜು’ ಮಲಯಾಳಂ ಸಿನಿಮಾದ ಟ್ರೈಲರ್‌ ಇದನ್ನು ಮತ್ತೊಮ್ಮೆ ಅನುಮೋದಿಸಿದೆ. ಇನ್ನು ಈ ಚಿತ್ರಕ್ಕೆ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜಿಸಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. 29 ವರ್ಷಗಳ ಹಿಂದೆ ‘ಯೋಧ’ ಮಲಯಾಳಂ ಚಿತ್ರಕ್ಕೆ ಅವರು ಸಂಗೀತ ನಿರ್ದೇಶಿಸಿದ್ದರು. ಈಗ ‘ಮಲಯಾಂಕುಂಜು’ನೊಂದಿಗೆ ಮಾಲಿವುಡ್‌ಗೆ ಮರಳಿದ್ದಾರೆ. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಫಹಾದ್‌ ಅವರ ಒತ್ತಾಸೆಯಿಂದ ಇದು ಸಾಧ್ಯವಾಗಿದೆ ಎನ್ನುವುದು ಚಿತ್ರತಂಡದ ಮಾತು. ಈ ಹಿಂದೆ ಫಹಾದ್‌ ಅವರನ್ನು ಮಾಲಿಕ್‌, ಟೇಕ್‌ ಆಫ್‌, ಸಿಯೂ ಸೂನ್‌ ಚಿತ್ರಗಳಲ್ಲಿ ನಿರ್ದೇಶಿಸಿದ್ದ ಮಹೇಶ್‌ ನಾರಾಯಣನ್‌ ‘ಮಲಯಾಂಕುಂಜು’ ಚಿತ್ರಕಥೆ ರಚಿಸಿದ್ದಾರೆ. ಸಾಜಿಮನ್‌ ಪ್ರಭಾಕರ್‌ ಚೊಚ್ಚಲ ನಿರ್ದೇಶನದ ಸಿನಿಮಾ. ಪ್ರತಿಭಾವಂತ ಕಲಾವಿದರಾದ ರಜೀಷಾ ವಿಜಯನ್‌, ಇಂದ್ರನ್ಸ್‌, ಜಾಫರ್‌ ಇಡುಕ್ಕಿ, ದೀಪಕ್‌ ಪರಂಬೋಲ್‌ ನಟಿಸಿದ್ದಾರೆ. ಟ್ರೈಲರ್‌ ಹೇಳುವಂತೆ ‘ಅನಿರುದ್ಧನ್‌’ ಆಗಿ ನಟಿಸಿರುವ ಫಹಾದ್ ಪಾತ್ರಕ್ಕೆ ಹಲವು ಶೇಡ್‌ಗಳಿವೆ. ಭೂಕುಸಿತದ ಹಿನ್ನೆಲೆಯಲ್ಲಿ ಕತೆ ಹೆಣೆದಿರುವಂತಿದ್ದು, ಟ್ರೈಲರ್‌ನಲ್ಲಿನ ರೆಹಮಾನ್‌ ಹಿನ್ನೆಲೆ ಸಂಗೀತ ಇಂಟೆನ್ಸ್‌ ಆಗಿದೆ. 2022ರ ಫೆಬ್ರವರಿಯಲ್ಲಿ ಸಿನಿಮಾ ತೆರೆಕಾಣಲಿದೆ.

Previous articleಮಾಡಬೇಕಾದ ಮತ್ತು ಮಾಡಬಾರದ ಕಾಮಿಡಿಯ ಸಮ್ಮಿಲನ ಡಿ-ಕಪಲ್ಡ್
Next article‘ಸ್ಪೇಸಸ್ ಫಾರ್ ರೆಂಟ್’ನಿಂದ ‘ಬಡವ ರಾಸ್ಕಲ್’ವರೆಗೆ..; ಬಾದಲ್‌ ನೆನಪು

LEAVE A REPLY

Connect withPlease enter your comment!
Please enter your name here