ಎರಡನೇ ಸಾಲಿನ ಫಿಲ್ಮ್‌ಫೇರ್‌ OTT ಪ್ರಶಸ್ತಿಗಳು ಘೋಷಣೆಯಾಗಿದ್ದು, ಹನ್ಸಲ್‌ ಮೆಹ್ತಾ ನಿರ್ದೇಶನದ ‘ಸ್ಕ್ಯಾಮ್‌ 1992’ಗೆ ಅತಿ ಹೆಚ್ಚು ಪ್ರಶಸ್ತಿಗಳು ಸಂದಿವೆ. ಮನೋಜ್‌ ಭಾಜಪೈ ನಟನೆಯ ‘ದಿ ಫ್ಯಾಮಿಲಿ ಮ್ಯಾನ್‌ 2’ ಪ್ರಶಸ್ತಿ ಗಳಿಕೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.

ಕೋವಿಡ್‌ನಿಂದಾಗಿ ಕಳೆದೆರೆಡು ವರ್ಷಗಳಿಂದ ಮನರಂಜನಾ ಉದ್ಯಮ ಸಂಕಷ್ಟಕ್ಕೀಡಾಗಿತ್ತು. ಇದೀಗಷ್ಟೇ ಚೇತರಿಕೆ ಕಾಣುತ್ತಿದ್ದರೂ ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸುವ ಪರಿಪಾಠ ಕಡಿಮೆಯಾಗುತ್ತಿರುವುದು ಹೌದು. ಈ ಕೋವಿಡ್‌ ದಿನಗಳಲ್ಲಿ ಜನರನ್ನು ರಂಜಿಸಿದ್ದು ಓಟಿಟಿ ಪ್ಲಾಟ್‌ ಫಾರ್ಮ್‌ಗಳು. ಅಲ್ಲಿನ ವಿಭಿನ್ನ ಕಂಟೆಂಟ್‌ ಜನರಿಗೆ ಇಷ್ಟವಾಯ್ತು. ಪ್ರತೀ ವರ್ಷ ಪ್ರಶಸ್ತಿಗಳನ್ನು ಕೊಡುವ ಮೂಲಕ ಸಿನಿಮಾರಂಗವನ್ನು ಬೆಂಬಲಿಸುವ ಫಿಲ್ಮ್‌ಫೇರ್‌ OTT ಸರಣಿಗಳಿಗೂ ಪ್ರಶಸ್ತಿಗಳನ್ನು ಕೊಡಲು ಆರಂಭಿಸಿದೆ. ಸದ್ಯ ಎರಡನೇ ಸೀಸನ್‌ ಫಿಲ್ಮ್‌ಫೇರ್‌ OTT ಪ್ರಶಸ್ತಿಗಳು ಘೋಷಣೆಯಾಗಿವೆ. ಹನ್ಸಲ್‌ ಮೆಹ್ತಾ ನಿರ್ದೇಶನದ ‘ಸ್ಕ್ಯಾಮ್‌ 1992’ ಸರಣಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದೆ. ಪ್ರಶಸ್ತಿ ಗಳಿಕೆಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್‌ 2’ ಎರಡನೇ ಸ್ಥಾನ ಗಳಿಸಿದೆ.

ಅತ್ಯುತ್ತಮ ಸರಣಿ, ಅತ್ಯುತ್ತಮ ಪ್ರೊಡಕ್ಷನ್‌ ಡಿಸೈನ್‌, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಸಂಕಲನ, ಅತ್ಯುತ್ತಮ ವಿಎಫ್‌ಎಕ್ಸ್‌, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ‘ಸ್ಕ್ಯಾಮ್‌ 1992’ ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಒರಿಜಿನಲ್‌ ಸ್ಟೋರಿ, ಅತ್ಯುತ್ತಮ ಪೋಷಕ ನಟ (ಶರೀಬ್‌ ಹಶ್ಮಿ), ಅತ್ಯುತ್ತಮ ನಿರ್ದೇಶನ (ಕ್ರಿಟಿಕ್‌ ಅವಾರ್ಡ್‌, ಸುಪರ್ಣ ವರ್ಮಾ), ಅತ್ಯುತ್ತಮ ನಟ (ಕ್ರಿಟಿಕ್‌ ಅವಾರ್ಡ್‌, ಮನೋಜ್‌ ಭಾಜಪೈ), ಅತ್ಯುತ್ತಮ ನಟಿ (ಸಮಂತಾ) ವಿಭಾಗಗಳಲ್ಲಿ ‘ದಿ ಫ್ಯಾಮಿಲಿ ಮ್ಯಾನ್‌ 2’ ಪ್ರಶಸ್ತಿಗಳನ್ನು ಪಡೆದಿದೆ. ಉಳಿದಂತೆ ಬ್ಯಾಡ್‌ ಬಾಯ್‌ ಬಿಲಿಯನೇರ್ಸ್‌, ಗುಲ್ಲಕ್‌, ಸನ್‌ಫ್ಲವರ್‌, ಓಕೆ ಕಂಪ್ಯೂಟರ್‌, ಬಾಂಬೆ ಬೇಗಮ್‌, ಮಹರಾಣಿ ಸರಣಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿವೆ.

LEAVE A REPLY

Connect with

Please enter your comment!
Please enter your name here