ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ಅವರ ಮೇಲೆ ಮುಂಬಯಿ ಪೊಲೀಸರು ಚಾರ್ಜ್‌ಶೀಟ್‌ ಹಾಕಿದ್ದಾರೆ. ಈ ಹಿಂದೆ ಗಣೇಶ್‌ ಆಚಾರ್ಯ ಅವರೊಂದಿಗೆ ಕೆಲಸ ಮಾಡಿದ್ದ ಸಹನೃತ್ಯಗಾರ್ತಿಯೊಬ್ಬರ ಲೈಂಗಿಕ ಕಿರುಕುಳ ಆರೋಪದ ಮೇಲೆ ಈ ಕ್ರಮ ಜರುಗಿಸಲಾಗಿದೆ.

ಮುಂಬಯಿ ಪೊಲೀಸರು ಜನಪ್ರಿಯ ನೃತ್ಯನಿರ್ದೇಶಕ ಗಣೇಶ್‌ ಆಚಾರ್ಯ ಅವರ ಮೇಲೆ ಚಾರ್ಜ್‌ಶೀಟ್‌ ಫೈಲ್‌ ಮಾಡಿದ್ದಾರೆ. 2020ರಲ್ಲಿ ಗಣೇಶ್‌ ಆಚಾರ್ಯ ಮೇಲೆ ಸಹನೃತ್ಯಗಾರ್ತಿಯೊಬ್ಬರು ನೀಡಿದ ದೂರಿನ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. sections 354A (sexual harassment), 354C (voyeurism), 354D (stalking) ಸೇರಿದಂತೆ ಇನ್ನಿತರೆ ಸೆಕ್ಷನ್‌ಗಳ ಅಡಿ ಅಂಧೇರಿ ಪೊಲೀಸ್‌ ಠಾಣೆಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

“ಡ್ಯಾನ್ಸ್‌ ಪ್ರಾಜೆಕ್ಟ್‌ಗೆ ಗಣೇಶ್‌ ಆಚಾರ್ಯ ಅವರೊಂದಿಗೆ ಕೆಲಸ ಮಾಡುತ್ತಿದ್ದೆ. ಆಗ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದರು. ಸಹಕರಿಸದಿದ್ದರೆ ಅವಕಾಶಗಳಿಲ್ಲದ ಹಾಗೆ ಮಾಡುವುದಾಗಿ ಗಣೇಶ್‌ ಆಚಾರ್ಯ ಮತ್ತು ಅವರ ಸಹಚರ ಬೆದರಿಕೆಯೊಡ್ಡಿದ್ದರು. ನಾನು ಅವರ ಬೆದರಿಕೆಗಳಿಗೆ ಮಣಿಯಲಿಲ್ಲ. ಮುಂದೆ Cine ಮತ್ತು TV Choriographers Association ನಲ್ಲಿ ಅವರು ಜನರಲ್‌ ಸೆಕ್ರೆಟರಿ ಆದಾಗ ನನ್ನನ್ನು ಸದಸ್ಯತ್ವದಿಂದ ತೆಗೆದುಹಾಕಿದರು” ಎಂದು ನೃತ್ಯಗಾರ್ತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಇದು ಆಧಾರರಹಿತ ಆರೋಪ” ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here