‘ಪುಷ್ಪ’ ಸಿನಿಮಾದ ‘ಊ ಅಂಟಾವಾ’ ಹಾಡು ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ವ್ಯೂಸ್‌ ಕಂಡಿದೆ. ದೇವಿಶ್ರೀ ಪ್ರಸಾದ್‌ ಸಂಗೀತ, ಸಮಂತಾ ಡ್ಯಾನ್ಸ್‌ ಈ ಸಾಂಗ್‌ನ ಹೈಲೈಟ್‌. ಹಾಡಿಗೆ ನೃತ್ಯ ಸಂಯೋಜಿಸಿರುವ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಹಾಡಿನ ಬಿಹೈಂಡ್‌ ದಿನ ಸೀನ್ಸ್‌ ವೀಡಿಯೋ ಶೇರ್‌ ಮಾಡಿದ್ದಾರೆ.

‘ಪುಷ್ಪ’ ತೆಲುಗು ಸಿನಿಮಾದ ದೊಡ್ಡ ಯಶಸ್ಸಿನಲ್ಲಿ ‘ಊ ಅಂಟಾವಾ’ ಹಾಡಿನ ಪಾಲು ದೊಡ್ಡದು. ಚಂದ್ರಬೋಸ್‌ ರಚನೆ ದೇವಿಶ್ರೀ ಪ್ರಸಾದ್‌ ಸಂಗೀತ, ಇಂದ್ರಾವತಿ ಚೌವ್ಹಾಣ್‌ ಹಾಡಿರುವ ಈ ಹಾಡಿಗೆ ಜನಪ್ರಿಯ ನಟಿ ಸಮಂತಾ ಡ್ಯಾನ್ಸ್‌ ಮಾಡಿದ್ದಾರೆ. ಇದು ಸಮಂತಾ ವೃತ್ತಿ ಬದುಕಿನಲ್ಲಿ ಮೊದಲ ಸ್ಪೆಷಲ್‌ ಸಾಂಗ್‌. ಕಾಡುವ ಸಂಗೀತಕ್ಕೆ ಹೊಂದುವಂತಹ ನೃತ್ಯ ಸಂಯೋಜಿಸಿದವರು ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಾಡಿನ ಮೇಕಿಂಗ್‌ ವೀಡಿಯೋ ಶೇರ್‌ ಮಾಡಿದ್ದಾರೆ. ಸೆಟ್‌ನಲ್ಲಿ ಸಹಾಯಕಿಯೊಬ್ಬರ ಜೊತೆ ಗಣೇಶ್‌ ಆಚಾರ್ಯ ಅವರು ನಟ ಅಲ್ಲು ಅರ್ಜುನ್‌ ಮತ್ತು ಸಮಂತಾರಿಗೆ ಡ್ಯಾನ್ಸ್‌ ಸ್ಟೆಪ್‌ ತೋರಿಸಿಕೊಡುವ ವೀಡಿಯೋ ಇದು. “ಇದು ನನ್ನ ಯಶಸ್ವೀ ಸಾಂಗ್‌ಗಳಲ್ಲೊಂದು. ಸೆಟ್‌ನಲ್ಲಿ ಇವರಿಬ್ಬರೊಂದಿಗೆ ಖುಷಿ, ತಮಾಷೆಯೊಂದಿಗೆ ಕಾಲ ಕಳೆದೆ” ಎನ್ನುವ ಸಂದೇಶದೊಂದಿಗೆ ಅವರು ವೀಡಿಯೋ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ಸಮಂತಾ ಹಂಚಿಕೊಂಡಿದ್ದ ಈ ಹಾಡಿನ ರಿಹರ್ಸಲ್‌ ವೀಡಿಯೋ ವೈರಲ್‌ ಆಗಿತ್ತು. 2021ರ ಯಶಸ್ವೀ ಸಿನಿಮಾ ಎನಿಸಿಕೊಂಡ ‘ಪುಷ್ಪ’ ಸದ್ಯ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Previous articleಬಿಗ್‌ಬಾಸ್‌ ತಮಿಳು OTT ನಿರೂಪಕರಾಗಿ ಕಮಲ್‌; ಹಾಟ್‌ಸ್ಟಾರ್‌ನಲ್ಲಿ ಜನವರಿ 30ರಿಂದ ಶೋ
Next articleಧನುಷ್‌ – ಐಶ್ವರ್ಯಾ ವಿಚ್ಛೇದನ; 18 ವರ್ಷಗಳ ದಾಂಪತ್ಯಕ್ಕೆ ವಿದಾಯ

LEAVE A REPLY

Connect with

Please enter your comment!
Please enter your name here