ನಟ ಕಮಲಹಾಸನ್‌ ಬಿಗ್‌ಬಾಸ್‌ ತಮಿಳು OTT ಮೊದಲ ಎಡಿಷನ್‌ ನಿರೂಪಣೆ ಮಾಡಲಿದ್ದಾರೆ. ‘ಬಿಗ್‌ಬಾಸ್‌ ಅಲ್ಟಿಮೇಟ್‌’ ಶೀರ್ಷಿಕೆಯಡಿ ಸ್ಟ್ರೀಮ್‌ ಆಗಲಿರುವ ಶೋ ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಜನವರಿ 30ರಿಂದ ಶುರುವಾಗುತ್ತಿದೆ.

“ಇದು ಬಿಗ್‌ಬಾಸ್‌ ಶೋನ ಮೊದಲ OTT ವರ್ಷನ್‌. ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್‌ ಅಲ್ಟಿಮೇಟ್‌ ಸ್ಟ್ರೀಮ್‌ ಆಗಲಿದೆ. OTT ವರ್ಷನ್‌ ನಿರೂಪಿಸುವುದರೊಂದಿಗೆ ಮತ್ತೆ ನಿಮ್ಮೊಂದಿಗೆ ಮುಖಾಮುಖಿಯಾಗುತ್ತಿದ್ದೇನೆ. ಈ ಹೊಸ ಫಾರ್ಮ್ಯಾಟ್‌ 24/7 ಅವಧಿಯಲ್ಲಿ ಸಿಗಲಿದ್ದು, ನಿಮ್ಮನ್ನು ಮತ್ತಷ್ಟು ರಂಜಿಸಲಿದೆ. ಈ ಹೊಸ ಕಾನ್ಸೆಪ್ಟ್‌ ನಿಮ್ಮ ಆಸಕ್ತಿ ತಣಿಸುವುದರೊಂದಿಗೆ ಉತ್ತಮ ಮನರಂಜನೆ ನೀಡುತ್ತದೆ ಎಂದು ನಾನು ಭಾವಿಸಿದ್ದೇನೆ” ಎಂದಿದ್ದಾರೆ ನಟ, ನಿರ್ದೇಶಕ ಕಮಲ ಹಾಸನ್‌. ಜನವರಿ 30ರಿಂದ ಶುರುವಾಗಲಿರುವ OTT ಬಿಗ್‌ಬಾಸ್‌ ಶೋ ನಿರೂಪಣೆಗೆ ಅವರು ಸಜ್ಜಾಗಿದ್ದಾರೆ.

ನಟ ಕಮಲಹಾಸನ್‌ 2017ರಿಂದಲೂ ಬಿಗ್‌ಬಾಸ್‌ ತಮಿಳು ವರ್ಷನ್‌ ನಿರೂಪಣೆ ಮಾಡುತ್ತಿದ್ದು, ಜನರು ಅವರ ನಿರೂಪಣೆಯನ್ನು ಮೆಚ್ಚಿದ್ದಾರೆ. ಇನ್ನು ಬಿಗ್‌ಬಾಸ್‌ OTT ವರ್ಷನ್‌ನಲ್ಲಿ ಈ ಹಿಂದಿನ ಬಿಗ್‌ಬಾಸ್‌ ಸೀಸನ್‌ಗಳಲ್ಲಿ ಸ್ಪರ್ಧಿಗಳಾಗಿದ್ದ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಅವರಿಗೆ ಇಲ್ಲಿ ಸೆಕೆಂಡ್‌ ಛಾನ್ಸ್‌ ಸಿಗುತ್ತಿದ್ದು, ವೀಕ್ಷಕರ ಮೆಚ್ಚುಗೆ ಗಳಿಸಲು ಅವರು ತಯಾರಿ ನಡೆಸುತ್ತಿದ್ದಾರೆ. ಬಿಗ್‌ಬಾಸ್‌ ತಮಿಳು ಐದನೇ ಸೀಸನ್‌ ನಿನ್ನೆ ಭಾನುವಾರ ಮುಕ್ತಾಯವಾಗಿದೆ. ವೀಕ್ಷಕರು ಅಂದುಕೊಂಡಂತೆ ಚಿತ್ರಸಾಹಿತಿ ರಾಜು ಜಯಮೋಹನ್‌ ಬಿಗ್‌ಬಾಸ್‌ ವಿನ್ನರ್‌ ಆಗಿ ಆಯ್ಕೆಯಾಗಿ 50  ಲಕ್ಷ ರೂಪಾಯಿ ನಗದು ಹಣ ತಮ್ಮದಾಗಿಸಿಕೊಂಡಿದ್ದಾರೆ. ಪ್ರಿಯಾಂಕಾ ದೇಶಪಾಂಡೆ ರನ್ನರ್‌ಅಪ್‌ ಸ್ಥಾನ ಪಡೆದಿದ್ದಾರೆ.

Previous article‘ಪುಷ್ಪ’ ಭರ್ಜರಿ ಯಶಸ್ಸು; ಅಲ್ಲು ಅರ್ಜುನ್‌ ‘ಅಲಾ ವೈಕಂಠಪುರಮುಲು’ ರಿಲೀಸ್‌
Next article‘ಊ ಅಂಟಾವಾ’ BTS ವೀಡಿಯೋ ಶೇರ್‌ ಮಾಡಿದ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ

LEAVE A REPLY

Connect with

Please enter your comment!
Please enter your name here