ಸಿಂಪಲ್ ಸುನಿ ನಿರ್ದೇಶನದಲ್ಲಿ ಗಣೇಶ್ ನಟಿಸುತ್ತಿರುವ ‘ಸಖತ್‌’ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಅದ್ಧೂರಿ ಸೆಟ್‌ನಲ್ಲಿ ಇಪ್ಪತ್ತೈದು ಡ್ಯಾನ್ಸರ್‌ಗಳೊಂದಿಗೆ ಗಣೇಶ್ ಹೆಜ್ಜೆ ಹಾಕಿದ್ದಾರೆ. ಟ್ರೈಲರ್, ಸಾಂಗ್‌ಗಳ ಮೂಲಕ ಗಮನಸೆಳೆದಿರುವ ಸಿನಿಮಾ ನವೆಂಬರ್‌ 26ರಂದು ತೆರೆಕಾಣಲಿದೆ.

ವಿಭಿನ್ನ ಪ್ರೊಮೋಷನ್‌ ಐಡಿಯಾಗಳ ಮೂಲಕ ಪ್ರೇಕ್ಷಕರ ಕುತೂಹಲ ಕಾಯ್ದುಕೊಂಡಿರುವ ‘ಸಖತ್‌’ ಸಿನಿಮಾ ತಂಡ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಗಣೇಶ್ ನಟಿಸಿರುವ ಸಿನಿಮಾ ಈಗಾಗಲೇ ಟ್ರೈಲರ್‌ನಿಂದಲೇ ನಿರೀಕ್ಷೆ ಹುಟ್ಟುಹಾಕಿದೆ. ಈಗ ಬಿಡುಗಡೆಯಾಗಿರುವ ಟೈಟಲ್ ಟ್ರ್ಯಾಕ್‌ ಅದ್ಧೂರಿ ಸೆಟ್‌ನಲ್ಲಿ ಚಿತ್ರಣಗೊಂಡಿದ್ದು, ರ್ಯಾಪರ್‌ಗಳು ಹಾಗೂ ಡ್ಯಾನ್ಸರ್‌ಗಳೊಂದಿಗೆ ಹೀರೋ ಗಣೇಶ್ ಹೆಜ್ಜೆ ಹಾಕಿದ್ದಾರೆ. ‘ಸಖತ್‌’ ಟ್ರೈಲರ್‌ನಲ್ಲಿ ಗಣೇಶ್‌ ಅಂಧನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿತ್ತು. ಆದರೆ ಈ ಬಗ್ಗೆ ನಿರ್ದೇಶಕರು ಮಾತ್ರ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

‘ಸಖತ್’ ಇಂಟ್ರಡಕ್ಷನ್‌ ಸಾಂಗ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದೆ. ಸಾಂಗ್‌ನಲ್ಲಿ ಗಣೇಶ್ ಲೈವ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿವೇರ್‌ ಕಾಸ್ಟ್ಯೂಮ್‌ನಲ್ಲಿ ಗಣೇಶ್ ಮಿಂಚಿದ್ದು, ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಸಿಂಪಲ್ ಸುನಿ ಅವರೇ ಗೀತೆ ರಚಿಸಿದ್ದು, ಅವರ ಜೊತೆಗೆ ರ್ಯಾಪರ್ ಸಿದ್ ಸಾಹಿತ್ಯ ಕೂಡ ಹದವಾಗಿ ಬೆರೆತಿದೆ. ಈ ಸಾಹಿತ್ಯಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಪಂಚಮ್ ಜೀವಾ, ಜೂಡಾ ಸ್ಯಾಂಡಿ, ರ್ಯಾಪರ್ ಸಿದ್ ದನಿಯಾಗಿದ್ದಾರೆ. ಇದೇ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ಗಣೇಶ್‌ಗೆ ನಿಶ್ವಿಕಾ ನಾಯ್ಡು ಜೋಡಿ. ಕೆವಿಎನ್ ಪ್ರೊಡಕ್ಷನ್‌ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್  ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಮತ್ತಿತರರು ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here