ಪ್ರತಿಷ್ಠಿತ ಹಾಲಿವುಡ್‌ ಸ್ಟುಡಿಯೋಗಳ ಬಾಯ್ಕಾಟ್‌ ಮಧ್ಯೆ 79ನೇ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ಘೋಷಣೆಯಾಗಿವೆ. ಡ್ರಾಮಾ ವಿಭಾಗದಲ್ಲಿ ‘ದಿ ಪವರ್‌ ಆಫ್‌ ದಿ ಡಾಗ್‌’ ಮತ್ತು ಕಾಮಿಡಿ ಜಾನರ್‌ನಲ್ಲಿ ಸ್ಟೀವನ್‌ ಸ್ಪಿಲ್‌ಬರ್ಗ್‌ರ ‘ವೆಸ್ಟ್‌ ಸೈಡ್‌ ಸ್ಟೋರಿ’ ಸಿನಿಮಾಗಳು ಪ್ರಶಸ್ತಿ ಪಡೆದಿವೆ.

ಹಾಲಿವುಡ್‌ನ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ಘೋಷಣೆಯಾಗಿವೆ. ಇದೇ ಮೊದಲ ಬಾರಿಗೆ ತಾರೆಯರಿಲ್ಲದ, ರೆಡ್‌ ಕಾರ್ಪೆಟ್‌ ಇಲ್ಲದ, ಟೆಲಿವಿಷನ್‌ ನೇರಪ್ರಸಾರವಿಲ್ಲದ ಗೋಲ್ಡನ್‌ ಗ್ಲೋಬ್‌ ಸಮಾರಂಭ ನಡೆದಿದೆ. ಕೆಲವು ಅನಗತ್ಯ ವಿವಾದಗಳಿಗೆ ಸಿಲುಕಿದ್ದಲ್ಲದೆ ಹಾಗೂ ಪ್ರಮುಖ ಹಾಲಿವುಡ್‌ ಸ್ಟುಡಿಯೋಗಳ ಬಾಯ್ಕಾಟ್‌ಗೂ 2022ರ ಪ್ರಶಸ್ತಿ ಸಮಾರಂಭ ಸಾಕ್ಷಿಯಾಯ್ತು. ಡ್ರಾಮಾ ಜಾನರ್‌ನಲ್ಲಿ ಜೇನ್‌ ಕ್ಯಾಂಪಿಯನ್‌ ನಿರ್ದೇಶನದ ‘ದಿ ಪವರ್‌ ಆಫ್‌ ದಿ ಡಾಗ್‌’ ಅತ್ಯುತ್ತಮ ಸಿನಿಮಾ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಚಿತ್ರಕ್ಕೆ ಅತ್ಯುತ್ತ ನಿರ್ದೇಶನ ಮತ್ತು ಅತ್ಯುತ್ತಮ ಪೋಷಕ ನಟ ಗೌರವ ಸಂದಿವೆ.

ಸ್ಟೀವನ್‌ ಸ್ಪಿಲ್‌ಬರ್ಗ್‌ ನಿರ್ದೇಸನದ ‘ವೆಸ್ಟ್‌ ಸೈಡ್‌ ಸ್ಟೋರಿ’ ಸಿನಿಮಾ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಕಿರುತೆರೆ ವಿಭಾಗದಲ್ಲಿ HBOದ ಡ್ರಾಮಾ ‘ಸಕ್ಸೆಷನ್‌’ ಅತ್ಯುತ್ತಮ ಟೆಲಿವಿಷನ್‌ ಡ್ರಾಮಾ, ಅತ್ಯುತ್ತಮ ನಟ (ಜೆರೆಮಿ ಸ್ಟ್ರಾಂಗ್‌), ಅತ್ಯುತಮ ನಟಿ (ಸರಾಹ್‌ ಸ್ನೂಕ್‌) ಅತ್ಯುತ್ತಮ ಕಾಮಿಡಿ ‘ಹ್ಯಾಕ್ಸ್‌’, ಅತ್ಯುತ್ತಮ ಕಾಮಿಡಿ ನಟಿಯಾಗಿ ಜೀನ್‌ ಸ್ಮಾರ್ಟ್‌ ಪುರಸ್ಕಾರ ಪಡೆದಿದ್ದಾರೆ. ಕೊರಿಯನ್‌ ಡ್ರಾಮಾ ‘ಸ್ಕ್ವಿಡ್‌ ಗೇಮ್‌’ ಮತ್ತು ಫ್ರೆಂಚ್‌ ಡ್ರಾಮಾ ‘ಲುಪಿನ್‌’ ಅತ್ಯುತ್ತಮ ಟೆಲಿವಿಷನ್‌ ಸರಣಿಗಳಾಗಿ ನಾಮನಿರ್ದೇಶನಗೊಂಡಿದ್ದವು. ‘ಸ್ಕ್ವಿಡ್‌’ ಗೇಮ್‌’ನ ಓ ಯಿಯಾಂಗ್‌ ಸು ಅತ್ಯುತ್ತಮ ಪೋಷಕ ನಟ ಗೌರವಕ್ಕೆ ಪಾತ್ರರಾದರು.

ಪ್ರಶಸ್ತಿ ಪಟ್ಟಿ – ಅತ್ಯುತ್ತಮ ಮೋಷನ್‌ ಪಿಕ್ಚರ್‌ (ಡ್ರಾಮಾ) – ದಿ ಪವರ್‌ ಆಫ್‌ ದಿ ಡಾಗ್‌ | ಮೋಷನ್‌ ಪಿಕ್ಚರ್‌ (ಮ್ಯೂಸಿಕಲ್‌/ಡ್ರಾಮಾ) – ವೆಸ್ಟ್‌ ಸೈಡ್‌ ಸ್ಟೋರಿ | ಅತ್ಯುತ್ತಮ ನಟಿ (ಮೋಷನ್‌ ಪಿಕ್ಚರ್‌ – ಡ್ರಾಮಾ) – ನಿಲೋಲ್‌ ಕಿಡ್ಮನ್‌ (ಬೀಯಿಂಗ್‌ ದಿ ರಿಕಾರ್ಡೋಸ್‌) | ಅತ್ಯುತ್ತಮ ನಟ (ಮೋಷನ್‌ ಪಿಕ್ಚರ್‌ – ಡ್ರಾಮಾ) – ವಿಲ್‌ ಸ್ಮಿತ್‌ (ಕಿಂಗ್‌ ರಿಚರ್ಡ್ಸ್‌) | ಅತ್ಯುತ್ತಮ ನಟಿ (ಮೋಷನ್‌ ಪಿಕ್ಚರ್‌ – ಮ್ಯೂಸಿಕಲ್‌ / ಕಾಮಿಡಿ) – ರಚೆಲ್‌ ಝೆಗ್ಲರ್‌ (ವೆಸ್ಟ್‌ ಸೈಡ್‌ ಸ್ಟೋರಿ) | ಅತ್ಯುತ್ತಮ ನಟ (ಮೋಷನ್‌ ಪಿಕ್ಚರ್‌ – ಮ್ಯೂಸಿಕಲ್‌ / ಕಾಮಿಡಿ) – ಆಂಡ್ರ್ಯೂ ಗಾರ್‌ಫೀಲ್ಡ್‌ (ಟಿಕ್‌, ಟಿಕ್‌… ಬೂಮ್‌!) | ಅತ್ಯುತ್ತಮ ನಿರ್ದೇಶನ (ಮೋಷನ್‌ ಪಿಕ್ಚರ್‌) – ಜೇನ್‌ ಕ್ಯಾಂಪಿಯನ್‌ (ದಿ ಪವರ್‌ ಆಫ್‌ ದಿ ಡಾಗ್‌) | ಅತ್ಯುತ್ತಮ ಚಿತ್ರಕಥೆ (ಮೋಷನ್‌ ಪಿಕ್ಚರ್‌) – ಕೆನ್ನೆತ್‌ ಬ್ರನಾಗ್‌ (ಬೆಲ್‌ಫಾಸ್ಟ್‌) | ಅತ್ಯುತ್ತಮ ಸಿನಿಮಾ (ಅನಿಮೇಟೆಡ್‌) – ಎನ್‌ಕ್ಯಾಂಟೊ | ಅತ್ಯುತ್ತಮ ಸಿನಿಮಾ (ನಾನ್‌ – ಇಂಗ್ಲಿಷ್‌) – ಡ್ರೈವ್‌ ಮೈ ಕಾರ್ (ಜಪಾನ್‌) | ಅತ್ಯುತ್ತಮ ನಟಿ (ಟೆಲಿವಿಷನ್‌ ಮೋಷನ್‌ ಪಿಕ್ಚರ್‌) – ಕೇಟ್‌ ವಿನ್‌ಸ್ಲೆಟ್‌ (ಮೇರ್‌ ಆಫ್‌ ಈಸ್ಟ್‌ಟೌನ್‌) | ಅತ್ಯುತ್ತಮ ನಟ (ಟೆಲಿವಿಷನ್‌ ಮೋಷನ್‌ ಪಿಕ್ಚರ್‌)- ಮೈಖೇಲ್‌ ಕೀಟನ್‌ (ಡೋಪ್‌ಸಿಕ್‌)

LEAVE A REPLY

Connect with

Please enter your comment!
Please enter your name here