ಹೇಮಂತ್‌ ಜೋಯ್ಸ್‌ ಸಂಗೀತ ಸಂಯೋಜನೆಯಲ್ಲಿ ‘ಖುಷಿ2’ EDM ವೀಡಿಯೋ ಆಲ್ಬಂ ಬಿಡುಗಡೆಯಾಗಿದೆ. ಪ್ರಮೋದ್‌ ಮರವಂತೆ ರಚಿಸಿರುವ ಗೀತೆಯನ್ನು ಚೇತನ್‌ ನಾಯ್ಕ ಹಾಡಿದ್ದಾರೆ. ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶಿಸಿದ್ದು ಹೇಮಂತ್‌ ಜೋಯ್ಸ್‌ ಜೊತೆ ಸುಂದರಶ್ರೀ ನಟಿಸಿದ್ದಾರೆ.

ಸಂಗೀತ ನಿರ್ದೇಶಕ ಹೇಮಂತ್ ಜೋಯ್ಸ್ ‘ಖುಷಿ-2’ ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿರುವ ‘ಖುಷಿ’ ಹಾಡಿನ ಸೀಕ್ವೆಲ್ ಇದು. ಅಜ್ಜಿ ಮತ್ತು ಮೊಮ್ಮಗನ ಬಾಂಧವ್ಯ ಸಾರುವ ಈ ಹಾಡು EDM ಸಾಂಗ್. ಅಂದರೆ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಹಾಡು. ಸಾಹಿತ್ಯಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಹೆಚ್ಚಿರುತ್ತೆ. ಒಂದು ರೀತಿ ವಿದೇಶಿ ಹಾಡುಗಳ ಫಾರ್ಮ್ಯಾಟ್‌. ತಾವೇಕೆ EDM ಒಮ್ಮೆ ಟ್ರೈ ಮಾಡಬಾರದು ಎಂದು ಹೇಮಂತ್ ‘ಖುಷಿ 2’ ಹಾಡು ಮಾಡಿದ್ದಾರೆ. ಕನ್ನಡದ ಮಟ್ಟಿಗೆ ಇದು ಅಪರೂಪದ ಪ್ರಯೋಗ. ರಕ್ಷಿತ್ ತೀರ್ಥಹಳ್ಳಿ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದರೆ, ಇಂಗ್ಲೀಷ್‌ನಲ್ಲಿ ಚಿನ್ಮಯ್ ಬರೆದಿದ್ದಾರೆ. ಚೇತನ್ ನಾಯ್ಕ್ ಈ ಹಾಡಿಗೆ ದನಿಯಾಗಿದ್ದು, ಹೇಮಂತ್ ಜೋಯ್ಸ್ ಮ್ಯೂಸಿಕ್ ನೀಡುವುದರ ಜೊತೆಗೆ ಹಾಡಿನ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ. ಹೇಮಂತ್ ಜೋಯ್ಸ್ ಜೊತೆಗೆ ಹಿರಿಯ ನಟಿ ಸುಂದರಶ್ರೀ ನಟಿಸಿದ್ದಾರೆ.

Previous articleಲವ್ ಸ್ಟೋರಿ ಬದಿಗಿಟ್ಟು ನೋಡಿದರೆ ಒಳ್ಳೆಯ ಸರಣಿ ‘ರಾಕೆಟ್ ಬಾಯ್ಸ್’
Next article‘KGF’ ಚಾಪ್ಟರ್‌ 2 ಡಬ್ಬಿಂಗ್‌ ಪೂರ್ಣಗೊಳಿಸಿದ ನಟಿ ರವೀನಾ ಟಂಡನ್‌

LEAVE A REPLY

Connect with

Please enter your comment!
Please enter your name here