ಪ್ರಸ್ತುತ ಯುವಪೀಳಿಗೆಯಲ್ಲಿ ಮೊಬೈಲ್ ಅಡಿಕ್ಷನ್ ಹೆಚ್ಚಾಗಿದೆ. ಇದರಿಂದ ಅವರಿಗೆ ಅನುಕೂಲವೂ ಉಂಟು. ಅನಾನುಕೂಲವೂ ಉಂಟು. ಮೊಬೈಲನ್ನು ಅವಶ್ಯಕತೆಗಿಂತ ಹೆಚ್ಚು ಬಳಸಿದರೆ ಏನೆಲ್ಲಾ ಆಗಬಹುದು ಎಂಬುದನ್ನು 14 ನಿಮಿಷಗಳ ‘ಜಂಗಮವಾಣಿ’ ಕಿರುಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಮನು ಕಾಟ್.

ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಇವೆಂಟ್‌ಗಳನ್ನು ಆಯೋಜಿಸಿದ ಅನುಭವಿ ಮನು. ಅವರೀಗ ತಮ್ಮದೇ ಆದ ಚಿರಾಗ್ ಇವೆಂಟ್ಸ್ & ಪ್ರೊಡಕ್ಷನ್ಸ್ ಮೂಲಕ ‘ಜಂಗಮವಾಣಿ’ ಕಿರುಚಿತ್ರ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇವರದೇ. “ನನಗೆ ಚಿತ್ರ‌ ನಿರ್ದೇಶಕನಾಗುವ ಹಂಬಲವಿದೆ. ಅದರ ಮೊದಲ ಹೆಜ್ಜೆಯಾಗಿ ಕಿರುಚಿತ್ರ ನಿರ್ದೇಶಿಸಿದ್ದೇನೆ. ಈ ಕಿರುಚಿತ್ರ ಬರೀ ಯೂಟ್ಯೂಬ್‌ನಲ್ಲಷ್ಟೇ ಅಲ್ಲದೆ, ಆನೇಕಲ್‌ನ ಕೆಲವು ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದೆ. ಕಿರುಚಿತ್ರವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು” ಎನ್ನುತ್ತಾರೆ ಮನು. “ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ಅಭಿನಯದ ಮೊದಲ ಕಿರುಚಿತ್ರವಿದು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಮೊಬೈಲ್ ಎಲ್ಲರಿಗೂ ಅವಶ್ಯಕ, ಆದರೆ, ಅದನ್ನು ಅವಶ್ಯಕತೆ ಇದ್ದಷ್ಟು ಮಾತ್ರ ಬಳಸೋಣ” ಎನ್ನುವುದು ನಟಿ ಪ್ರೇರಣ ಅವರ ಅನಿಸಿಕೆ. ಕಿರಣ್ ಛಾಯಾಗ್ರಹಣ, ಜಿತಿನ್ ಸಂಗೀತ ನಿರ್ದೇಶನವಿರುವ ಕಿರುಚಿತ್ರದಲ್ಲಿ ತನು, ರಾಮಸ್ವಾಮಿ, ಪ್ರೇರಣ, ತೇಜಸ್ ಮುಂತಾದವರು ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here