ಕಲ್ಯಾಣ್‌ ಸಂತೋಷ್‌ ನಿರ್ದೇಶನದ ‘ಸುಂದರಂ ಮಾಸ್ಟರ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹರ್ಚ ಚೆಮುಡು ನಟಿಸಿರುವ ಕಾಮಿಡಿ ಚಿತ್ರವನ್ನು ನಟ ರವಿತೇಜ ನಿರ್ಮಿಸಿದ್ದಾರೆ. ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.

ಹರ್ಷ ಚೆಮುಡು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಸುಂದರಂ ಮಾಸ್ಟರ್’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಕಲ್ಯಾಣ್ ಸಂತೋಷ್ ಬರೆದು ನಿರ್ದೇಶಿಸಿದ್ದಾರೆ. ದಿವ್ಯಾ ಶ್ರೀಪಾದ, ಶಾಲಿನಿ ನಂಬು, ಕಾಳಿದಿಂಡಿ ಶ್ವೇತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬುಡಕಟ್ಟು ಪ್ರದೇಶದ ಶಾಲೆಗೆ ನೇಮಕಗೊಂಡ ಶಿಕ್ಷಕ ಹಳ್ಳಿಯಲ್ಲಿರುವ ಮಕ್ಕಳಿಗೆ ಮತ್ತು ವಯಸ್ಕರಿಗೆ ಶಿಕ್ಷಣ ನೀಡಲು ಹೋದಾಗ ಎದುರಿಸುವ ಸಮಸ್ಯೆಗಳನ್ನು ಟೀಸರ್‌ನಲ್ಲಿ ಹಾಸ್ಯದ ನಿರೂಪಣೆಯಲ್ಲಿ ತೋರಿಸಲಾಗಿದೆ. ಶಿಕ್ಷಕ ಮರದ ಕೊಂಬೆಗಳನ್ನು ಬಳಸಿಕೊಂಡು ಇಂಗ್ಲಿಷ್ ವರ್ಣಮಾಲೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುತ್ತಾನೆ. ಆದರೆ ಅವನು ಏನು ಕಲಿಸುತ್ತಿದ್ದಾನೆ ಎಂಬುದು ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಆದರೆ ಆಶ್ಚರ್ಯದ ಸಂಗತಿ ಎಂಬುವಂತೆ ಬುಡಕಟ್ಟು ಜನಾಂಗದವರು ಈಗಾಗಲೇ
ಇಂಗ್ಲಿಷ್ ಅನ್ನು ಚೆನ್ನಾಗಿ ತಿಳಿದು ಮಾತನಾಡುತ್ತಿರುತ್ತಾರೆ. ಅಲ್ಲಿನ ಜನ ಅವನನ್ನು ಅಜ್ಞಾನಿ ಶಿಕ್ಷಕನೆಂದು ತಪ್ಪಾಗಿ ತಿಳಿಯುತ್ತಾರೆ. ಈ ಮಧ್ಯೆ, ಶಿಕ್ಷಕ ಸ್ಥಳೀಯ ಯುವತಿಯೊಬ್ಬಳನ್ನು ಪ್ರೀತಿಸುತ್ತಾನೆ. ಮುಂದೇನಾಗಬಹುದು ಎಂಬುದನ್ನು ಚಿತ್ರ ತೋರಿಸಲಿದೆ.

ಆರ್ ಟಿ ಟೀಮ್ ವರ್ಕ್ಸ್ ಮತ್ತು ಗೋಲ್ಡನ್ ಮೀಡಿಯಾ ಅಡಿಯಲ್ಲಿ ರವಿತೇಜ ಮತ್ತು ಸುಧೀರ್ ಕುಮಾರ್ ಕುರ್ರು ಜತೆಗೂಡಿ ಸಿನಿಮಾ ನಿರ್ಮಿಸಿದ್ದಾರೆ. ಶ್ರೀಚರಣ್ ಪಾಕಳ ಸಂಗೀತ ನೀಡಿದ್ದು, ದೀಪಕ್ ಯರಗೇರ ಛಾಯಾಗ್ರಹಣ ಮಾಡಿದ್ದಾರೆ. ಜುಲೈ 28ರಂದು ಸಿನಿಮಾ ಚಿತ್ರಮಂದಿರಗಳಿಗೆ ಬರಲಿದೆ. ನಟ ರವಿತೇಜ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಚಿತ್ರದ ಟೀಸರ್‌ ಮತ್ತು ಪೋಸ್ಟರ್‌ ಹಂಚಿಕೊಂಡು, ‘Our #SUNDARAMMASTER is here. Happy to bring you all the teaSIR of our SM featuring my boy @harshachemudu’ ಎಂದು ಬರೆದುಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here