ಮೊನ್ನೆಯಷ್ಟೇ ಮುಕ್ತಾಯವಾದ IFF 2023ರಲ್ಲಿ ‘ಪಂಚಾಯತ್ ಸೀಸನ್ 2’ ಹಿಂದಿ ಸರಣಿಯು ‘ಅತ್ಯುತ್ತಮ ವೆಬ್ ಸರಣಿ’ (OTT) ಪ್ರಶಸ್ತಿ ಗೆದ್ದಿದೆ. ದೀಪಕ್‌ ಕುಮಾರ್‌ ಮಿಶ್ರಾ ನಿರ್ದೇಶನದ ಸರಣಿಯ ಪ್ರಮುಖ ಪಾತ್ರಗಳಲ್ಲಿ ಜಿತೇಂದ್ರ ಕುಮಾರ್‌, ನೀನಾ ಗುಪ್ತಾ, ರಘುಬೀರ್‌ ಯಾದವ್‌, ಫೈಸಲ್‌ ಮಲ್ಲಿಕ್‌ ಅಭಿನಯಿಸಿದ್ದಾರೆ.

ಗೋವಾದಲ್ಲಿ ಜರುಗಿದ 54ನೇ IFFI 2023 ಚಲನಚಿತ್ರೋತ್ಸವದಲ್ಲಿ ‘ಪಂಚಾಯತ್ ಸೀಸನ್ 2’ ಹಿಂದಿ ಸರಣಿಯು ‘ಅತ್ಯುತ್ತಮ ವೆಬ್ ಸರಣಿ’ (OTT) ಪ್ರಶಸ್ತಿ ಗೆದ್ದಿದೆ. ಈ ಸರಣಿಯನ್ನು ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿದ್ದಾರೆ. ಈ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ ನೇತೃತ್ವದಲ್ಲಿ ನಿರ್ಮಾಪಕರಾದ ಉತ್ಪಲ್ ಬೋರ್ಪುಜಾರಿ ಮತ್ತು ಕೃಷ್ಣ ಡಿಕೆ ಮತ್ತು ನಟರಾದ ದಿವ್ಯಾ ದತ್ತಾ ಮತ್ತು ಪ್ರೊಸೆನ್‌ಜಿತ್‌ ಚಟರ್ಜಿ ಸೇರಿದಂತೆ ಐದು ಸದಸ್ಯರನ್ನೊಳಗೊಂಡ ತೀರ್ಪುಗಾರರು ನಿರ್ಣಯಿಸಿದ್ದಾರೆ. ಸರಣಿಯಲ್ಲಿ ಜಿತೇಂದ್ರ ಕುಮಾರ್, ನೀನಾ ಗುಪ್ತಾ, ರಘುಬೀರ್ ಯಾದವ್, ಫೈಸಲ್ ಮಲ್ಲಿಕ್, ಚಂದನ್ ರಾಯ್ ಮತ್ತು ಸಾನ್ವಿಕಾ ಸೇರಿದಂತೆ ಅನೇಕ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದಾರೆ. ಹಾಸ್ಯ-ಸರಣಿಯು ಒಂದು ನಗರದ ಇಂಜಿನಿಯರಿಂಗ್ ಪದವೀಧರ ಅಭಿಷೇಕ್ ತ್ರಿಪಾಠಿಯ ಸುತ್ತ ಸುತ್ತುತ್ತದೆ.

ಅಭಿಷೇಕ್‌ (ಜಿತೇಂದ್ರ ಕುಮಾರ್) ಉನ್ನತ ಉದ್ಯೋಗದ ಕೊರತೆಯಿಂದಾಗಿ ತನಗಿಷ್ಟವಿಲ್ಲದಿದ್ದರೂ ಬಲ್ಲಿಯಾ ಜಿಲ್ಲೆಯ ಫುಲೇರಾ ಎಂಬ ಹಳ್ಳಿಯಲ್ಲಿ ಪಂಚಾಯತ್ ಕಚೇರಿಯ ಕಾರ್ಯದರ್ಶಿಯಾಗಿ ಸೇರುತ್ತಾನೆ. ಉತ್ತರ ಪ್ರದೇಶದಲ್ಲಿ ಮೊದಲ ಸೀಸನ್‌ ನಡೆದ ನಂತರ, ಎರಡನೇ ಸೀಸನ್ ಫುಲೇರಾದಲ್ಲಿ ಜರುಗುತ್ತದೆ. ಸೀಸನ್‌ 2ನಲ್ಲಿ ಅಭಿಷೇಕ್‌ ಅನೇಕ ಹೊಸ ಸವಾಲುಗಳನ್ನು ಎದುರಿಸುತ್ತಾನೆ. ಏಕೆಂದರೆ ಅವನು ಹದಗೆಟ್ಟಿರುವ ಪಂಚಾಯತ್ ಕಚೇರಿಯ ದೈನಂದಿನ ಕೆಲಸಗಳನ್ನು ಒಬ್ಬನೇ ನಿಭಾಯಿಸುತ್ತಿರುತ್ತಾನೆ. ಸ್ಥಳೀಯ ಹಳ್ಳಿಯ ರಾಜಕೀಯ ಮತ್ತು ಗ್ರಾಮಸ್ಥರೊಂದಿಗೆ ವ್ಯವಹರಿಸುತ್ತಾನೆ. ಕಾರ್ಪೊರೇಟ್ ಜಗತ್ತಿನಲ್ಲಿ ತನ್ನ ಉತ್ತಮ ಭವಿಷ್ಯಕ್ಕಾಗಿ CAT ಪರೀಕ್ಷೆಗಳಿಗೆ ತಯಾರಾಗಲು ಪ್ರಯತ್ನಿಸುತ್ತಿರುತ್ತಾನೆ. ಹೀಗೆ ಅವನು ತನ್ನ ಒತ್ತಡದ ಬದುಕನ್ನು ಸಾಗಿಸುತ್ತಾನೆ. ಆ ಹಳ್ಳಿಯಲ್ಲಿ ಪ್ರಧಾನ್, ವಿಕಾಸ್, ಪ್ರಹ್ಲಾದ್ ಮತ್ತು ಮಂಜು ದೇವಿಯೊಂದಿಗೆ ಅಭಿಷೇಕ್ ಉತ್ತಮ ಒಡನಾಟ ಬೆಳೆಸಿಕೊಳ್ಳುತ್ತಾನೆ. ಸರಣಿಯನ್ನು The Viral Fever ಬ್ಯಾನರ್‌ ಅಡಿಯಲ್ಲಿ ಅರುಣಾಭ್ ಕುಮಾರ್ ನಿರ್ಮಿಸಿದ್ದು, ಚಂದನ್‌ ಕುಮಾರ್‌ ರಚಿಸಿದ್ದಾರೆ. May 20, 2022ರಿಂದ Prime Videoದಲ್ಲಿ ಸರಣಿ ಸ್ಟ್ರೀಮ್‌ ಆಗಿತ್ತು.

LEAVE A REPLY

Connect with

Please enter your comment!
Please enter your name here