ದಕ್ಷಿಣ ಕೊರಿಯಾದ ಜನಪ್ರಿಯ Rapper ಮತ್ತು ನಟ Ok Taec-yeon ಭಾರತೀಯ ಸಿನಿಮಾಗಳ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪ್ರಸ್ತುತ Prime Videoದಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಹಾರ್ಟ್‌ಬೀಟ್‌’ ಸರಣಿಯಲ್ಲಿದ್ದಾರವರು. ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಎಂದು Ok Taec-yeon ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಕೋರಿಕೆ ಇಟ್ಟಿದ್ದಾರೆ.

ದಕ್ಷಿಣ ಕೊರಿಯಾದ Rapper, ಗೀತರಚನೆಕಾರ, ನಟ ಮತ್ತು ಉದ್ಯಮಿ Ok Taec-yeon ಭಾರತದ ಚಲನಚಿತ್ರಗಳ ಮೇಲೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇವರು ಕೋರಿಯಾದ TV ಸರಣಿಯಾದ ‘Vincenzov ಶೋನಿಂದಾಗಿ ಭಾರತೀಯ K-ಡ್ರಾಮಾ ಅಭಿಮಾನಿಗಳಿಗೆ ಚಿರಪರಿತರಾಗಿದ್ದಾರೆ. ಭಾರತೀಯ ವಿಷಯಗಳನ್ನು ಇಷ್ಟಪಡುವ ಇವರು ಭಾರತೀಯ ಚಲನಚಿತ್ರಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಎಂದು ಆಗಾಗ ಚರ್ಚಿಸುತ್ತಿರುತ್ತಾರೆ. ಇವರು ಪ್ರಸ್ತುತ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ಫ್ಯಾಂಟಸಿ ಡ್ರಾಮಾ ‘ಹಾರ್ಟ್ ಬೀಟ್’ ಸೀರೀಸ್‌ನಲ್ಲಿ ರಕ್ತಪಿಶಾಚಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಕಾರ್ಯಕ್ರಮದ ಪ್ರಚಾರ ಸಮಯದಲ್ಲಿ ಭಾರತದಲ್ಲಿ ಕೊರಿಯನ್ ಡ್ರಾಮಾ ವೀಕ್ಷಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಅವರು PTI ವರ್ಚ್ಯುಯೆಲ್‌ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಬಯಕೆ ಹಾಗೂ ಭಾರತೀಯ ಚಲನಚಿತ್ರಗಳು ಮತ್ತು ಮನೋರಂಜನಾ ಕಾರ್ಯಕ್ರಮಗಳ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ತಾನು ಭಾರತೀಯರ ಪ್ರೀತಿಗೆ ಋಣಿಯಾಗಿರುತ್ತೇನೆ ಎಂದಿದ್ದಾರೆ. OK Taec-yeon ‘ಸಿಂಡ್ರೆಲಾಸ್ ಸಿಸ್ಟರ್ಸ್’ K-ಡ್ರಾಮಾದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ, ‘ಡ್ರೀಮ್ ಹೈ’ (2011), (2013) ‘ವಂಡರ್‌ಫುಲ್ ಡೇಸ್’ (2014), ‘ಅಸೆಂಬ್ಲಿ’ (2015), ‘ಲೆಟ್ಸ್ ಫೈಟ್ ಘೋಸ್ಟ್’ (2016), ‘ಸೇವ್ ಮಿ’ (2017), ‘ದಿ ಗೇಮ್ ಟುವರ್ಡ್ಸ್ ಜೀರೋ’ (2020), ‘ಸೀಕ್ರೆಟ್ ರಾಯಲ್ ಇನ್‌ಸ್ಪೆಕ್ಟರ್; ಜಾಯ್ʼ (2021), ಮತ್ತು ‘ವಿನ್ಸೆಂಜೊ’ (2021) ಸೇರಿದಂತೆ ಜನಪ್ರಿಯ ಸರಣಿಗಳಲ್ಲಿ ನಟಿಸಿದ್ದಾರೆ. ‘ಮ್ಯಾರೇಜ್ ಬ್ಲೂ’ (2013), ‘ಹೌಸ್ ಆಫ್ ದಿ ಡಿಸಪಿಯರ್ಡ್’ (2017) ಮತ್ತು ‘ಹನ್ಸನ್: ರೈಸಿಂಗ್ ಡ್ರ್ಯಾಗನ್’ (2022) ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ Netflix ಶೋ, ‘XO, Kitty’ಯಲ್ಲಿ ಅತಿಥಿಯಾಗಿದ್ದರು. ‘ಘೋಸ್ಟ್ ಕೊರಿಯನ್ ಬಾಯ್ ಬ್ಯಾಂಡ್ 2 ಪಿ ಎಮ್‌’ Rapper ಆಗಿಯೂ ಪ್ರಸಿದ್ಧರಾಗಿದ್ದಾರೆ.

Previous article‘ಮಾಯಾಬಜಾರ್‌ for sale’ | ZEE5 ತೆಲುಗು ವೆಬ್‌ ಸರಣಿ ಜುಲೈ 14ರಿಂದ
Next article

LEAVE A REPLY

Connect with

Please enter your comment!
Please enter your name here