ಅಭಿಷೇಕ್ ಬಚ್ಚನ್‍ ಅಭಿನಯದ ‘ಬಾಬ್ ಬಿಸ್ವಾಸ್’ ಹಿಂದಿ ಚಿತ್ರದ ಟೀಸರ್ ಲಾಂಚ್‍ ಆಗಿದೆ. ನಟೋರಿಯಸ್ ಸೀರಿಯಲ್ ಕಿಲ್ಲರ್‍ ಬಾಬ್ ಬಿಸ್ವಾಸ್‍ ಕುರಿತ ಚಿತ್ರವಿದು. ಇದೇ ಡಿಸೆಂಬರ್ 3ರಿಂದ ZEE5 ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

ನಟ ಅಭಿಷೇಕ್‌ ಬಚ್ಚನ್‍ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ‘ಬಾಬ್ ಬಿಸ್ವಾಸ್’ ಹಿಂದಿ ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ. ಟೀಸರ್‍ನಲ್ಲಿ ಧ್ವನಿಯೊಂದು ಕೇಳಿಬಂದಿದ್ದು, “ನಿನಗೆ ನೆನಪು ಇಲ್ಲದೇ ಇರಬಹುದು, ಆದರೆ ನೀನೊಬ್ಬ ಕೆಟ್ಟ ವ್ಯಕ್ತಿ” ಎಂದಿದೆ. ಇನ್ನು ‘ಏಕ್ ಮಿನಿಟ್‍ ಬಾಬ್ ಕಿ ನಜರ್‍ ಆಪ್ ಪರ್ ಹೈ’ ಎಂದು ಕ್ಯಾಪ್ಷನ್ ಸಹ ಬರೆದುಕೊಂಡಿದ್ದಾರೆ ಅಭಿಷೇಕ್. ಈ ಧ್ವನಿ ಮತ್ತು ಸಾಲಿನ ಹಿಂದೆ ಚಿತ್ರಕಥೆ ಇದೆ ಎಂದು ಅಂದಾಜಿಸಲಾಗಿದೆ. ‘ಬಾಬ್ ಬಿಸ್ವಾಸ್’ 2012ರ ‘ಕಹಾನಿ’ ಚಿತ್ರದ ಮತ್ತೊಂದು ಭಾಗ ಎನ್ನಬಹುದು. ಅಭಿಷೇಕ್‍ರ ‘ಏಕ್ ಮಿನಿಟ್’ ಲೈನ್ ‘ಕಹಾನಿ’ ಚಿತ್ರದ ಫೇಮಸ್‍ ಡೈಲಾಗ್‍ ಅನ್ನು ನೆನಪಿಸುತ್ತದೆ. ಅಭಿಷೇಕ್ ಬಚ್ಚನ್ ಸೀರಿಯಲ್ ಕಿಲ್ಲರ್‍ ಬಾಬ್ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ಚಿತ್ರದಲ್ಲಿ ಅವರ ಹೇರ್‍ಸ್ಟೈಲ್, ವಸ್ತ್ರವಿನ್ಯಾಸ ಬಾಬ್ ಪಾತ್ರಕ್ಕೆ ಜೀವತುಂಬಿದೆ.

ಬಾಬ್‌ ಪಾತ್ರ ತಮಗೆ ಇಂಟ್ರಸ್ಟಿಂಗ್ ಮತ್ತು ಅಷ್ಟೇ ಚಾಲೆಂಜಿಂಗ್‍ ಆಗಿದೆ ಎಂದಿದ್ದಾರೆ ಅಭಿಷೇಕ್‌. ಬಾಬ್ ಲುಕ್‍ಗೆ ಇವರ ಫ್ಯಾನ್ಸ್ ಫುಲ್ ಮಾರ್ಕ್ಸ್‌ ಕೊಟ್ಟಿದ್ದಾರೆ. ಚಿತ್ರವನ್ನು ದಿಯಾ ಅನ್ನಪೂರ್ಣ ಘೋಶ್ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್‌ ಅವರ ರೆಡ್‌ ಚಿಲ್ಲಿ ಎಂಟರ್‍ಟೇನ್‍ಮೆಂಟ್‍ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಅಭಿಷೇಕ್‌ ಜೊತೆಗೆ ಚಿತ್ರಾಂಗಧಾ ಸಿಂಗ್ ಇದ್ದಾರೆ. ಇದೇ ಡಿಸೆಂಬರ್‌ 3ರಿಂದ ZEE5 ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

Previous articleಟೀಸರ್ | ಭ್ರಷ್ಟಾಚಾರದ ವಿರುದ್ಧ ಸಮರ; ಡಿಸೆಂಬರ್ 24ಕ್ಕೆ ‘ಶ್ಯಾಮ್ ಸಿಂಗಾ ರಾಯ್’
Next article‘ರಾಣ’ ಸಿನಿಮಾದ ಹಾಡಿನಲ್ಲಿ ಸಂಯುಕ್ತ ಹೆಗ್ಡೆ; ನಟಿ ರಾಗಿಣಿ ಜಾಗಕ್ಕೆ ಬಂದರು ‘ಕಿರಿಕ್ ಪಾರ್ಟಿ’ ಹುಡುಗಿ

LEAVE A REPLY

Connect with

Please enter your comment!
Please enter your name here