ನಟ ಸೂರ್ಯ ನಿರ್ಮಾಣದ ‘ಉಡನ್‌ಪಿರಪ್ಪೆ’ ತಮಿಳು ಚಿತ್ರ ಇದೇ 14ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ನಟಿ ಜ್ಯೋತಿಕಾ ಅಭಿನಯದ 50ನೇ ಚಿತ್ರವಿದು.

ಜನಪ್ರಿಯ ತಮಿಳು ಹೀರೋ ಸೂರ್ಯ ಅವರ ‘2D ಎಂಟರ್‌ಟೇನ್‌ಮೆಂಟ್‌’ ಸಂಸ್ಥೆ ಅಮೇಜಾನ್‌ ಪ್ರೈಮ್‌ ಓಟಿಟಿಯೊಂದಿಗೆ ನಾಲ್ಕು ಸಿನಿಮಾಗಳ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಂತೆ ಮೊದಲ ಚಿತ್ರವಾಗಿ ‘ರಾಮೆ ಆನಂದಲಂ ರಾವಣೆ ಆನಂದಲಂ’ ಕಳೆದ ತಿಂಗಳು ತೆರೆಕಂಡಿತ್ತು. ಇದೀಗ ಎರಡನೇ ಚಿತ್ರವಾಗಿ ‘ಉಡನ್‌ಪಿರಪ್ಪೆ’ ಅಕ್ಟೋಬರ್‌ 14ರಂದು ದಸರಾ ಹಬ್ಬದಿಂದ ಸ್ಟ್ರೀಮ್‌ ಆಗಲಿದೆ. ಸರವಣನ್‌ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ಸಸಿಕುಮಾರ್ ಮತ್ತು ಜ್ಯೋತಿಕಾ ನಟಿಸಿದ್ದಾರೆ.


ನಟ ಸೂರ್ಯರ ತಾರಾಪತ್ನಿ ಜ್ಯೋತಿಕಾಗೆ ‘ಉಡನ್‌ಪಿರಪ್ಪೆ’ ವೃತ್ತಿಬದುಕಿನ 50ನೇ ಸಿನಿಮಾ. ‘ರಕ್ತಸಂಬಂಧಂ’ ಶೀರ್ಷಿಕೆಯಡಿ ಈ ಸಿನಿಮಾ ತೆಲುಗು ಭಾಷೆಯಲ್ಲೂ ಸ್ಟ್ರೀಮ್ ಆಗಲಿದೆ. ಈ ಫ್ಯಾಮಿಲಿ ಡ್ರಾಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಸಮುದ್ರಕನಿ, ಕಲೈಅರಸನ್‌, ಸೂರಿ ಇದ್ದಾರೆ. ಪ್ರೈಮ್‌ಗಾಗಿ ಸೂರ್ಯ ನಿರ್ಮಿಸಿದ ಮೊದಲ ಪ್ರಯೋಗ ‘ರಾಮೆ ಆನಂದಲಂ ರಾವಣೆ ಆನಂದಲಂ’ ಚಿತ್ರವನ್ನು ಅರಿಸಿಲ್‌ ಮೂರ್ತಿ ನಿರ್ದೇಶಿಸಿದ್ದರು. ‘2D ಎಂಟರ್‌ಟೇನ್‌ಮೆಂಟ್‌’ ಸಂಸ್ಥೆಯಡಿ ಪ್ರೈಮ್‌ಗಾಗಿ ತಯಾರಾಗುತ್ತಿರುವ ಮತ್ತೆರೆಡು ಚಿತ್ರಗಳು -‘ಓಹ್‌ ಮೈ ಗಾಡ್‌’ ಮತ್ತು ‘ಜೈ ಭೀಮ್‌’. ಈ ಎರಡು ಚಿತ್ರಗಳು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ತೆರೆಕಾಣಲಿವೆ. ‘ಜೈ ಭೀಮ್‌’ ಪ್ರಮುಖ ಪಾತ್ರದಲ್ಲಿ ಸೂರ್ಯ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here