‘ಜಪಾನ್‌ – ಮೇಡ್‌ ಇನ್‌ ಇಂಡಿಯಾ!’ ಎನ್ನುವ ಡೈಲಾಗ್‌ನ ಕಾರ್ತಿ ಅಭಿನಯದ ‘ಜಪಾನ್‌’ ಟೀಸರ್‌ ಇಂಟರೆಸ್ಟಿಂಗ್‌ ಆಗಿದೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅವರಿಗೆ ಈ ಟೀಸರ್‌ ಬರ್ತ್‌ಡೇ ಗಿಫ್ಟ್‌. ರಾಜು ಮುರುಗನ್‌ ನಿರ್ದೇಶನದ ಚಿತ್ರದ ನಾಯಕಿ ಅನು ಇಮ್ಯಾನುಯೆಲ್‌.

ತಮಿಳು ನಟ ಕಾರ್ತಿ ಇಂದು 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಗಿಫ್ಟ್‌ ಆಗಿ ಅವರ ‘ಜಪಾನ್‌’ ತಮಿಳು ಚಿತ್ರದ ಕ್ಯಾರಕ್ಟರ್‌ ಟೀಸರ್‌ ಬಿಡುಗಡೆಗೊಳಿಸಿದೆ ಚಿತ್ರತಂಡ. ಇಲ್ಲಿ ಹೀರೋ, ಕಾಮಿಡಿಯನ್‌, ವಿಲನ್‌ ಆಗಿ ಕಾಣಿಸಿಕೊಳ್ಳುವ ಕಾರ್ತಿ ಭಿನ್ನ ಶೇಡ್‌ಗಳಲ್ಲಿದ್ದಾರೆ. ಸ್ಟೈಲಿಶ್ ಗ್ಲಾಸ್‌ ಹಾಕಿ, ಗುಂಗರು ಕೂದಲಿನ ಹೀರೋ ಹೆಸರು ‘ಜಪಾನ್‌’. ಆದರೆ ಮೇಡ್‌ ಇನ್‌ ಇಂಡಿಯಾ! ಕನ್ನಡದಲ್ಲಿಯೂ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ‘ಜೋಕರ್’ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್‌ ಪಡೆದ ನಿರ್ದೇಶಕ ರಾಜು ಮುರುಗನ್, ನಿರ್ಮಾಪಕರಾದ ಎಸ್ ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್ ಪ್ರಭು ಜಪಾನ್ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದಾರೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣವಾಗುತ್ತಿದೆ. ಕಾರ್ತಿ ನಟನೆಯ 25ನೇ ಸಿನಿಮಾ ‘ಜಪಾನ್’ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಅನು ಇಮ್ಯಾನುಯೆಲ್ ಚಿತ್ರದ ಹಿರೋಯಿನ್‌. ಟಾಲಿವುಡ್‌ ಹಾಸ್ಯನಟ ಸುನಿಲ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಛಾಯಾಗ್ರಹಣ ಚಿತ್ರಕ್ಕಿದೆ. ಶೂಟಿಂಗ್ ಹಂತದಲ್ಲಿರುವ ‘ಜಪಾನ್’ ಈ ವರ್ಷ ದೀಪಾವಳಿಗೆ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here