ತಾವು ರಚಿಸಿರುವ ‘ಕೆಂಡದ ಸೆರಗು’ ಕಾದಂಬರಿ ಆಧರಿಸಿ ಅದೇ ಶೀರ್ಷಿಕೆಯಡಿ ಸಿನಿಮಾ ಮಾಡುತ್ತಿದ್ದಾರೆ ರಾಕಿ ಸೋಮ್ಲಿ. ಚಿತ್ರದ ಲಿರಿಕಲ್‌ ವೀಡಿಯೋ ಸಾಂಗ್‌ ‘ಈ ಹುಡುಗಿ ಎಷ್ಟು ಚೆಂದ’ ಬಿಡುಗಡೆಯಾಗಿದೆ. ವೀರೇಶ್‌ ಕಬ್ಲಿ ಸಂಯೋಜನೆಯ ಈ ಹಾಡಿಗೆ ಹರೀಶ್‌ ಅರಸು ಮತ್ತು ಪೂರ್ಣಿಮಾ ಹೆಜ್ಜೆ ಹಾಕಿದ್ದಾರೆ.

ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾ ಕತೆಯ ಕಾರಣಕ್ಕೆ ಆರಂಭದಿಂದಲೂ ಸುದ್ದಿಯಲ್ಲಿದೆ. ನಿರ್ದೇಶಕ ರಾಕಿ ಸೋಮ್ಲಿ ಅವರು ಇದೇ ಹೆಸರಿನ ತಮ್ಮದೇ ಕಾದಂಬರಿ ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ. ದೇಸಿ ಕ್ರೀಡೆ ಕುಸ್ತಿ ಹಿನ್ನೆಲೆಯಲ್ಲಿ ಹೆಣೆದಿರುವ ಕಥಾಹಂದರ. ಚಿತ್ರದಲ್ಲಿ ಕುಸ್ತಿ ಪೈಲ್ವಾನ್‌ಗಳು ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾದ ‘ಈ ಹುಡುಗಿ ಎಷ್ಟು ಚೆಂದ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ನಿರ್ದೇಶಕ ರಾಕಿ ಸೋಮ್ಲಿ ಅವರೇ ರಚಿಸಿರುವ ಈ ಹಾಡಿಗೆ ವೀರೇಶ್‌ ಕಬ್ಲಿ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ ಶಾಸ್ತ್ರಿ ದನಿಯಾಗಿರುವ ಹಾಡಿಗೆ ಯುವ ನಟ ಹರೀಶ್‌ ಅರಸು ಮತ್ತು ಪೂರ್ಣಿಮಾ ಹೆಜ್ಜೆ ಹಾಕಿದ್ದಾರೆ. ಸದ್ಯ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಸದ್ಯದಲ್ಲೇ ತೆರೆಕಾಣಲಿದೆ. ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಪೊಲೀಸ್‌ ಕಮಿಷನರ್‌ ಪಾತ್ರ ನಿರ್ವಹಿಸಿದ್ದು, ಯುವನಟಿ ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ನಟಿಸಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಇದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here