ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿ ಇದೀಗ ಬೆಳ್ಳಿತೆರೆಯಲ್ಲೂ ಸದ್ದು ಮಾಡುತ್ತಿರುವ ಕಿರಣ್‌ ರಾಜ್‌ರ ‘ರಾನಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಗುರುತೇಜ್‌ ಶೆಟ್ಟಿ ನಿರ್ದೇಶನದ ಆಕ್ಷನ್‌ ಚಿತ್ರದ ನಾಯಕಿಯರಾಗಿ ಸಮೀಕ್ಷ, ಅಪೂರ್ವ, ರಾಧ್ಯ ನಟಿಸಿದ್ದಾರೆ.

ತಮ್ಮ ‘ರಾನಿ’ ಚಿತ್ರದ ಹೀರೋ ಕಿರಣ್‌ ರಾಜ್‌ ಬರ್ತ್‌ಡೇಗೆ ಚಿತ್ರತಂಡ ಟೀಸರ್‌ ಅನ್ನು ಗಿಫ್ಟ್‌ ಆಗಿ ನೀಡಿದೆ. ಬೆಂಗಳೂರು ಮಾಗಡಿ ರಸ್ತೆ ವಿಕ್ಟರಿ ಥಿಯೇಟರ್‌ನಲ್ಲಿ ಟೀಸರ್‌ ಬಿಡುಗಡೆ ಸಮಾರಂಭ ಮತ್ತು ಕಿರಣ್‌ ರಾಜ್‌ ಹುಟ್ಟುಹಬ್ಬ ಆಚರಣೆ ನಡೆಯಿತು. ‘ಅಭಿಮಾನಿಗಳ ಪ್ರೀತಿಗೆ ಮನ ತುಂಬಿ ಬಂದಿದೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಋಣಿ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಗುರುತೇಜ್ ಶೆಟ್ಟಿ ವಿಭಿನ್ನ ಕತೆ ಮಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ತುಂಬಾ ಚೆನ್ನಾಗಿದೆ’ ಎನ್ನುತ್ತಾರೆ. ನಿರ್ದೇಶಕ ಗುರುತೇಜ್‌ ಶೆಟ್ಟಿ ಹೀರೋ ಕಿರಣ್‌ ರಾಜ್‌ ಅವರಿಗೆ ಈ ಹಿಂದೆ ‘ಬಡ್ಡೀಸ್‌’ ಸಿನಿಮಾ ನಿರ್ದೇಶಿಸಿದ್ದರು. ಈಗ ‘ರಾನಿ’ಯಲ್ಲಿ ಈ ಜೋಡಿ ಮತ್ತೆ ಒಂದಾಗಿದೆ.

ತಮ್ಮ ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ಗುರುತೇಜ್‌ ಶೆಟ್ಟಿ, ‘ಹೀರೋ ಕಿರಣ್ ರಾಜ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ನಟನೆಗಷ್ಟೇ ಸೀಮಿತವಾಗದೆ, ನನ್ನ ಜೊತೆ ಪ್ರತಿಯೊಂದು ಕೆಲಸದಲ್ಲೂ ಭಾಗಿಯಾಗಿದ್ದಾರೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿರುವುದಷ್ಟೇ ಅಲ್ಲದೇ, ಟೀಸರ್‌ಗೆ ಧ್ವನಿ ಸಹ ನೀಡಿದ್ದಾರೆ’ ಎನ್ನುತ್ತಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿವೆ. ಚಿತ್ರದ ಮೂವರು ನಾಯಕಿಯರಾಗಿ ಸಮೀಕ್ಷ, ಅಪೂರ್ವ ಮತ್ತು ರಾಧ್ಯ ಅಭಿನಯಿಸಿದ್ದಾರೆ. ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್‌ ಹೆಗಡೆ ನಿರ್ಮಾಣದ ಚಿತ್ರಕ್ಕೆ ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣವಿದೆ.

Previous article‘ಡೆವಿಲ್‌’ ತೆಲುಗು ಸಿನಿಮಾ ಟೀಸರ್‌ | ಕಲ್ಯಾಣ್‌ ರಾಮ್‌ ಬರ್ತ್‌ಡೇ ಉಡುಗೊರೆ
Next articleಇದು ನಮ್ಮ, ನಿಮ್ಮ ಮನೆಗಳಲ್ಲಿನ ಗೊರಕೆ ಕತೆ!

LEAVE A REPLY

Connect with

Please enter your comment!
Please enter your name here