ಕನ್ನಡ ನಟ ರಿಷಿ ‘ಶೈತಾನ್‌’ ತೆಲುಗು ಕ್ರೈಂ – ಡ್ರಾಮಾ ವೆಬ್‌ ಸರಣಿಯೊಂದಿಗೆ ಓಟಿಟಿ ಜಗತ್ತು ಪ್ರವೇಶಿಸಿದ್ದಾರೆ. ಮಹಿ ರಾಘವ್‌ ನಿರ್ದೇಶನದ ಸರಣಿ ಜೂನ್‌ 15ರಿಂದ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

‘ಕವಲುದಾರಿ’, ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾಗಳ ಮೂಲಕ ಪ್ರತಿಭಾವಂತ ನಟ ಎಂದು ಕರೆಸಿಕೊಂಡ ರಿಷಿ ಸದ್ದಿಲ್ಲದೆ ಓಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಲವ್‌, ಸಸ್ಪೆನ್ಸ್‌, ಕಾಮಿಡಿ ಜಾನರ್‌ಗಳಲ್ಲಿ ಅವರನ್ನು ಕನ್ನಡಿಗರು ನೋಡಿದ್ದರು. ಹೊಸ ಬಗೆಯ ಕಂಟೆಂಟ್‌ಗೆ ಒಗ್ಗಿಕೊಳ್ಳುವ ನಟ ಎಂದೇ ಚಿತ್ರರಂಗದಲ್ಲಿ ಅವರ ಬಗ್ಗೆ ಮಾತನಾಡುತ್ತಾರೆ. ಸದ್ಯ ‘ರಾಮನ ಅವತಾರ’ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿರುವ ರಿಷಿ ಒಂದಷ್ಟು ಹೊಸ ಪ್ರಾಜೆಕ್ಟ್‌ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಇದೀಗ ‘ಶೈತಾನ್‌’ ತೆಲುಗು ವೆಬ್‌ ಸರಣಿ ಮೂಲಕ ಅವರು ಓಟಿಟಿ ವೇದಿಕೆ ಪ್ರವೇಶಿಸಿದ್ದಾರೆ. ಸರಣಿಯಲ್ಲಿನ ಅವರ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಈ ಲುಕ್‌ ಸಖತ್‌ ರಗಡ್‌ ಆಗಿದೆ.

ಮಹಿ ರಾಘವ್ ನಿರ್ದೇಶನದ ಕ್ರೈಮ್ ಡ್ರಾಮಾ ‘ಶೈತಾನ್’ ಸರಣಿಯಲ್ಲಿ ರಿಷಿ ಅವರು ‘ಬಾಲಿ’‌ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಹಾಗೂ ಖಳನಾಯಕ ಎರಡು ಶೇಡ್‌ನಲ್ಲಿರುವ ಬಾಲಿ ಪಾತ್ರದ ಲುಕ್‌ ರಿಲೀಸ್‌ ಆಗಿದೆ. ಜೂನ್ 15ರಿಂದ ಈ ಸರಣಿ ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಮೂಲ ತೆಲುಗು ಭಾಷೆಯ ಜೊತೆ ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಸರಣಿ ಮೂಡಿಬರಲಿದೆ. ರವಿ ಕಾಳೆ, ಜಾಫರ್ ಸಾದಿಕ್, ಲೀನಾ, ಮಣಿಕಂಠನ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಮಿಡಿ, ಸಸ್ಪೆನ್ಸ್ ಪಾತ್ರಗಳಲ್ಲಿ ಕಾಣಿಸಿದ್ದ ರಿಷಿಗೆ ಇದು ಬೇರೆಯದ್ದೇ ಇಮೇಜು ತಂದುಕೊಡುವ ಸಾಧ್ಯತೆಗಳಿವೆ.

https://youtu.be/DIVSfM6nQ38

LEAVE A REPLY

Connect with

Please enter your comment!
Please enter your name here