ಸೈಕಾಲಾಜಿಕಲ್‌ ಡ್ರಾಮಾ ‘ರುದ್ರ’ ವೆಬ್‌ ಸರಣಿಯೊಂದಿಗೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕ್ರಿಮಿನಲ್‌ ಮೈಂಡ್‌’ನ ಪೊಲೀಸ್‌ ಅಧಿಕಾರ ಪಾತ್ರ ಅವರದ್ದು. BBC ಯಶಸ್ವೀ ಸರಣಿ ‘ಲೂಥರ್‌’ ಹಿಂದಿ ಅವತರಣಿಕೆ ‘ರುದ್ರ’ ಟ್ರೈಲರ್‌ ಬಿಡುಗಡೆಯಾಗಿದ್ದು, ಮಾರ್ಚ್‌ 4ರಿಂದ ಸರಣಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ರಾಜೇಶ್‌ ಮುಪಾಶ್ಕರ್‌ ನಿರ್ದೇಶನದ ‘ರುದ್ರ: ದಿ ಎಡ್ಜ್‌ ಆಫ್‌ ಡಾರ್ಕ್‌ನೆಸ್‌’ ವೆಬ್‌ ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಅಜಯ್‌ ದೇವಗನ್‌ ಡಿಜಿಟಲ್‌ ಡೆಬ್ಯೂ ಆಗುತ್ತಿರುವ ಸರಣಿಯಿದು. ಅವರಿಲ್ಲಿ ACP ರುದ್ರವೀರ್‌ ಸಿಂಗ್‌ ಪಾತ್ರದಲ್ಲಿದ್ದು, ನಟಿ ರಾಶಿ ಖನ್ನಾ ‘ಆಲಿಯಾ’ ಪಾತ್ರ ಕುತೂಹಲಕಾರಿಯಾಗಿದೆ. ಟ್ರೈಲರ್‌ ನೋಡಿದಾಗ ಮಾಮೂಲಿ ಕ್ರೈಂ – ಡ್ರಾಮಾ ಎನಿಸಿದರೂ ರಾಶಿ ಪಾತ್ರ ಕತೆಗೆ ತಿರುವು ನೀಡುವ ಸುಳಿವು ಸಿಗುತ್ತದೆ. ಇದ್ರಿಸ್‌ ಎಲ್ಬಾ ನಟನೆಯ BBCಯ ಯಶಸ್ವೀ ಸರಣಿ ‘ಲೂಥರ್‌’ ಹಿಂದಿ ಅವತರಣಿಕೆ ‘ರುದ್ರ’. ಮೂಲ ಇಂಗ್ಲಿಷ್‌ ಸರಣಿಯಲ್ಲಿ ನಟ ಇದ್ರಿಸ್‌ ಎಲ್ಬಾ ಅವರು ಚತುರ, ನಿಷ್ಠಾವಂತ, ನಿರ್ಭಿಡೆಯ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದರು. ಭಯಾನಕ ಕ್ರೈಂ ಕೇಸ್‌ಗಳನ್ನು ಭೇದಿಸುವ ಹಾದಿಯಲ್ಲಿ ರುದ್ರ (ದೇವಗನ್‌) ವಿಚಲಿತನಾಗುವ, ಕೆಲವು ಬಾರಿ ಕ್ರೂರಿಯೂ ಆಗುತ್ತಾನೆ ಎನ್ನುವ ಚಿತ್ರಣ ಪಾತ್ರಕ್ಕಿದೆ. ಇಶಾ ಡಿಯೋಲ್‌, ಅತುಲ್‌ ಕುಲಕರ್ಣಿ, ಅಶ್ವಿನಿ ಕಾಲ್ಸೇಕರ್‌, ಆಶಿಷ್‌ ವಿದ್ಯಾರ್ಥಿ ಸರಣಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಡಿಜಿಟಲ್‌ ಸ್ಟ್ರೀಮಿಂಗ್‌ ಜಗತ್ತು ನನಗೆ ಎಂದಿಗೂ ಅಚ್ಚರಿ ಮೂಡಿಸುತ್ತದೆ. ಲಾಂಗ್‌ – ಫಾರ್ಮ್ಯಾಟ್‌ ಕಂಟೆಂಟ್‌ನೊಂದಿಗೆ ಡಿಜಿಟಲ್‌ಗೆ ಡೆಬ್ಯೂ ಮಾಡಲು ಇಚ್ಛಿಸಿದ್ದೆ. ರುದ್ರ ಅಂಥದ್ದೊಂದು ವೇದಿಕೆ ಒದಗಿಸಿದೆ” ಎನ್ನುತ್ತಾರೆ ಅಜಯ್‌ ದೇವಗನ್‌. ಮಾರ್ಚ್‌ 4ರಿಂದ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಹಿಂದಿ, ಕನ್ನಡ, ಮರಾಠಿ, ಬೆಂಗಾಲಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here