ನಾಗಭೂಷಣ್‌ ಹೀರೋ ಆಗಿ ನಟಿಸುತ್ತಿರುವ ‘ವಿದ್ಯಾಪತಿ’ ಸಿನಿಮಾದ ನಾಯಕಿಯಾಗಿ ಮಲೈಕಾ ವಸುಪಾಲ್‌ ಆಯ್ಕೆಯಾಗಿದ್ದಾರೆ. ಡಾಲಿ ಧನಂಜಯ್‌ ನಿರ್ಮಾಣದ ಚಿತ್ರವಿದು. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ನಟ ಧನಂಜಯ್‌ ಅವರ ಡಾಲಿ ಪಿಕ್ಚರ್ಸ್‌ನ ನೂತನ ಸಿನಿಮಾ ‘ವಿದ್ಯಾಪತಿ’ ನಾಯಕಿಯಾಗಿ ಮಲೈಕಾ ವಸುಪಾಲ್‌ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ‘ಉಪಾಧ್ಯಕ್ಷ’ ಚಿತ್ರದಲ್ಲಿ ಅವರು ನಾಯಕಿಯಾಗಿದ್ದರು. ‘ಟಗರು ಪಲ್ಯ’ ಚಿತ್ರದ ನಂತರ ಧನಂಜಯ್‌ ತಮ್ಮ ಸ್ನೇಹಿತ ನಾಗಭೂಷಣ್‌ರಿಗೆ ಮಾಡುತ್ತಿರುವ ಚಿತ್ರವಿದು. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾದ ಫಸ್ಟ್‌ಲುಕ್‌ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ನಾಯಕಿಯನ್ನು ಪರಿಚಯಿಸಿದೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಮಲೈಕಾ, ‘ಉಪಾಧ್ಯಕ್ಷ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಪರಿಚಯವಾಗಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಅಲ್ಲಿನ ಯಶಸ್ಸು ಅವರನ್ನು ‘ವಿದ್ಯಾಪತಿ’ ಸಿನಿಮಾಗೆ ಕರೆತಂದಿದೆ.

ಸಿನಿಮಾದಲ್ಲಿ ಮಲೈಕಾ ‘ವಿದ್ಯಾ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸಿಂಪಲ್ ಆಗಿರುವ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ‘ಇಕ್ಕಟ್’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದೊಂದು ಆಕ್ಷನ್‌ – ಕಾಮಿಡಿ ಎನ್ನುವ ಸುಳಿವು ಸಿಗುತ್ತದೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ಸಿನಿಮಾಗಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾಪತಿ ನಾಯಕಿ ಮಲೈಕಾ ವಸೂಪಾಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

LEAVE A REPLY

Connect with

Please enter your comment!
Please enter your name here