ಮಲಯಾಳಂ ಚಿತ್ರನಿರ್ಮಾಪಕ, ಉದ್ಯಮಿ ಕೆ ರವೀಂದ್ರನಾಥನ್‌ ನಾಯರ್‌ ಅಗಲಿದ್ದಾರೆ. ಹೊಸ ಅಲೆಯ ಮಲಯಾಳಂ ಸಿನಿಮಾಗಳ ಜನಕ ಎಂದೇ ಅಲ್ಲಿನ ಚಿತ್ರರಂಗ ಅವರನ್ನು ಗುರುತಿಸಿತ್ತು. ‘ಅಚಾನಿ’, ‘ತಂಪು’, ‘ಕುಮ್ಮಟ್ಟಿ’, ‘ಎಸ್ತಪ್ಪನ್’.‌ ‘ಪೋಕ್ಕುವೆಯಿನ್‌’, ‘ಮಂಜು’, ‘ಮುಖಾಮುಖಂ’ ಅವರ ನಿರ್ಮಾಣದ ಕೆಲವು ಪ್ರಮುಖ ಸಿನಿಮಾಗಳು. ಜಿ ಅರವಿಂದನ್ ನಿರ್ದೇಶನದ ‘ಎಸ್ತಪ್ಪನ್’ ಚಿತ್ರದಲ್ಲಿ ರವಿ ಅಭಿನಯಿಸಿದ್ದರು.

ಮಲಯಾಳಂ ನಿರ್ಮಾಪಕ, ಉದ್ಯಮಿ ಕೆ ರವೀಂದ್ರನಾಥನ್ ನಾಯರ್ (90) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೇರಳದ ಕೊಲ್ಲಂನಲ್ಲಿನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ರವೀಂದ್ರನಾಥನ್‌ ನಾಯರ್‌ ಅವರು ಮಲಯಾಳಂ ಚಿತ್ರರಂಗದ ಪ್ರಮುಖ ಚಿತ್ರನಿರ್ಮಾಪಕ. ನಾಯರ್‌ ನಿರ್ಮಾಣದ ‘ಅಚಾನಿ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ನಂತರ ಅವರಿಗೆ ‘ಅಚಾನಿ ರವಿ’ ಎಂಬ ಹೆಸರು ಬಂದಿತು. ಈ ಚಿತ್ರದ ಯಶಸ್ಸಿನ ನಂತರ ಅವರು ಕೊಲ್ಲಂನಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಸೋಪಾನಂ ಸಭಾಂಗಣ ನಿರ್ಮಿಸಿದ್ದರು. ‘ತಂಪು’, ‘ಕುಮ್ಮಟ್ಟಿ’, ‘ಎಸ್ತಪ್ಪನ್’.‌ ‘ಪೋಕ್ಕುವೆಯಿನ್‌’, ‘ಮಂಜು’, ‘ಮುಖಾಮುಖಂ’ ಸೇರಿದಂತೆ 14ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಜಿ ಅರವಿಂದನ್ ನಿರ್ದೇಶನದ ‘ಎಸ್ತಪ್ಪನ್’ ಚಿತ್ರದಲ್ಲಿ ರವಿ ಅಭಿನಯಿಸಿದ್ದರು.

ನಾಯರ್‌ ಅವರಿಗೆ 20 ರಾಷ್ಟ್ರಪ್ರಶಸ್ತಿಗಳು ಸೇರಿದಂತೆ ಮಲಯಾಳಂ ಚಿತ್ರರಂಗವು ಕೇರಳ ರಾಜ್ಯ ಸರ್ಕಾರದ ವತಿಯಿಂದ ನೀಡುವ ಪ್ರತಿಷ್ಠಿತ ‘ಜೆಸಿ ಡೇನಿಯಲ್’ ಪ್ರಶಸ್ತಿ ಸಂದಿದೆ. ಇವರು National Film Awards Committee, the Central Board of Film Certification, and the Film Development Corporation ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರವಿ ಅವರು ಮಕ್ಕಳಾದ ಪ್ರತಾಪ್ ನಾಯರ್, ಪ್ರೀತಾ ನಾಯರ್ ಮತ್ತು ಪ್ರಕಾಶ್ ನಾಯರ್ ಅವರನ್ನು ಅಗಲಿದ್ದಾರೆ. ಅವರ ಪತ್ನಿ ದಿವಂಗತ ಉಷಾ ರವಿ ಅವರು ಹಿನ್ನೆಲೆ ಗಾಯಕಿಯಾಗಿದ್ದು, ‘ತಂಪು’, ‘ಆಂಬಲ್ ಪೂವು’ ಮುಂತಾದ ಚಲನಚಿತ್ರಗಳಿಗೆ ಹಾಡಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಚಿತ್ರರಂಗದ ಪ್ರಮುಖರು ರವಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here