ನಿಖಿಲ್‌ ಅಡ್ವಾಣಿ ನಿರ್ದೇಶನದ ‘ವೇದ’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಜಾನ್‌ ಅಬ್ರಹಾಂ ಮತ್ತು ಶಾರ್ವರಿ ವಾಘ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸಿನಿಮಾದ ಟೀಸರ್‌ ಆಕ್ಷನ್‌ ಸನ್ನಿವೇಶಗಳಿಂದ ಗಮನ ಸೆಳೆಯುತ್ತದೆ. ಇದೇ ಜುಲೈ 12ರಂದು ಸಿನಿಮಾ ತೆರೆಕಾಣಲಿದೆ.

ಜಾನ್ ಅಬ್ರಹಾಂ ಮತ್ತು ಶಾರ್ವರಿ ವಾಘ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ವೇದ’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಹೈ ಆಕ್ಟೇನ್ ಆಕ್ಷನ್ – ಡ್ರಾಮಾವನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದ್ದಾರೆ. ಟೀಸರ್, ಶಾರ್ವರಿ ಪಾತ್ರವನ್ನು ಪರಿಚಯಿಸಿದ್ದು, ವೇದಾ (ಶಾರ್ವರಿ) ತನ್ನದೇ ಆದ ಹಾದಿಯನ್ನು ರೂಪಿಸಿಕೊಳ್ಳುವ ಹೋರಾಟದಲ್ಲಿ ನಿರತಳಾದಂತೆ ಕಾಣಿಸಿಸುತ್ತದೆ. ತನ್ನ ಬಾಕ್ಸಿಂಗ್ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ಅವಳು ಎದುರಿಸುತ್ತಿರುವ ಅಗ್ನಿಪರೀಕ್ಷೆಗಳನ್ನು ಇದರಲ್ಲಿ ತೋರಿಸಲಾಗಿದೆ. ನಂತರ ಜಾನ್‌ ಅಬ್ರಹಾಂ ಪಾತ್ರವನ್ನು ಪರಿಚಯಿಸಲಾಗಿದ್ದು, ಅವರು ‘ನನಗೆ ಯುದ್ಧ ಮಾಡುವುದು ಹೇಗೆ ಎಂಬುದು ಮಾತ್ರ ತಿಳಿದಿದೆ’ ಎಂದು ಹೇಳುವುದನ್ನು ಕಾಣಬಹುದು.

‘ಸಲಾಮ್-ಎ-ಇಷ್ಕ್’ ಮತ್ತು ‘ಬಾಟ್ಲಾ ಹೌಸ್’ ಚಲನಚಿತ್ರಗಳ ನಂತರ ಅಬ್ರಹಾಂ ಮತ್ತು ನಿಖಿಲ್ ಅಡ್ವಾಣಿ ಅವರ ನಡುವಿನ ಮೂರನೇ ಸಹಯೋಗ ಇದು. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ತಮನ್ನಾ ಭಾಟಿಯಾ ಇತರೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. Zee Studios, Emmay Entertainment ಮತ್ತು JA Entertainment ಬ್ಯಾನರ್‌ ಅಡಿಯಲ್ಲಿ ಜಾನ್, ಮೋನಿಶಾ ಅಡ್ವಾಣಿ ಮತ್ತು ಮಧು ಭೋಜ್ವಾನಿ ಅವರು ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ಜುಲೈ 12ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here