ಚೆಂಬನ್‌ ವಿನೋದ್‌ ಜೋಶಿ ನಿರ್ದೇಶನದ ‘ರಂಬಾನ್‌’ ಮಲಯಾಳಂ ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಮೋಹನ್‌ಲಾಲ್‌ ಹೀರೋ ಆಗಿ ನಟಿಸಲಿರುವ ಸಿನಿಮಾಗೆ ಮುಂದಿನ ವರ್ಷ ಚಿತ್ರೀಕರಣ ಆರಂಭವಾಗಲಿದೆ.

ಮೋಹನ್‌ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ‘ರಂಬಾನ್’ ಮಲಯಾಳಂ ಚಿತ್ರದ ಮೋಷನ್ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಖ್ಯಾತ ನಿರ್ದೇಶಕ ಚೆಂಬನ್ ವಿನೋದ್ ಜೋಶಿ ನಿರ್ದೇಶಿಸಲಿದ್ದಾರೆ. ಶೀರ್ಷಿಕೆ ಪೋಸ್ಟರ್ ಅನ್ನು ಮೋಹನ್ ಲಾಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡು, ”ನಿಮಗೆ ‘ರಾಂಬಾನ್‌’ ಚಿತ್ರವನ್ನು ಪರಿಚಯಿಸಲು ಉತ್ಸುಕನಾಗಿದ್ದೇನೆ. ಚಿತ್ರವನ್ನು ಐನ್‌ಸ್ಟಿನ್‌ ಝಾಕ್‌ಪಾಲ್‌ ಮತ್ತು ಶೈಲೇಶ್ ಆರ್ ನಿರ್ಮಿಸಲಿದ್ದಾರೆ. ಚೆಂಬನ್ ವಿನೋದ್ ಜೋಸ್ ನಿರ್ದೇಶಿಸಲಿದ್ದಾರೆ. ನಿಮ್ಮ ಬೆಂಬಲವೇ ನಮ್ಮ ಶಕ್ತಿ’ ಎಂದು ಟಿಪ್ಪಣಿ ಬರೆದಿದ್ದಾರೆ. ಸಿನಿಮಾಗೆ ಸಮೀರ್ ತಾಹಿರ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಈ ಹಿಂದೆ ‘ಕುರುಪ್’, ‘ಮಹಾನ್’ ಮತ್ತು ‘ಭೀಷ್ಮ ಪರ್ವಂ’ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿರುವ ವಿವೇಕ್ ಹರ್ಷನ್ ಸಂಕಲನ ನಿರ್ವಹಿಸಲಿದ್ದಾರೆ. ‘ಅಂಬಿಲಿ’ ಮತ್ತು ‘ತಲ್ಲುಮಾಲ’ ಚಿತ್ರಗಳ ಖ್ಯಾತಿಯ ವಿಷ್ಣು ವಿಜಯ್ ಅವರ ಸಂಗೀತ ಚಿತ್ರಕ್ಕಿರಲಿದೆ. ‘ರೋಮಾಂಚಮ್’ ಮತ್ತು ‘ತಲ್ಲುಮಾಲಾ’ ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಮಾಶರ್ ಹಂಸ ವೇಷಭೂಷಣ ವಿನ್ಯಾಸಗೊಳಿಸುತ್ತಿದ್ದಾರೆ. 2024ರ ಆರಂಭದಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, 2025ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಜೋಶಿಯವರ ಮುಂದಿನ ಚಿತ್ರವು ಕ್ರೀಡೆಯಾಧಾರಿತ ಆಕ್ಷನ್ ಡ್ರಾಮಾ ಸಿನಿಮಾ ‘ಆಂಟೋನಿ’ ನವೆಂಬರ್ 17ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಜೋಜು ಜಾರ್ಜ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್‌ಲಾಲ್‌ರ ಬಹು ನಿರೀಕ್ಷಿತ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಆಕ್ಷನ್-ಥ್ರಿಲ್ಲರ್‌ ಸಿನಿಮಾ ‘ಮಲೈಕೊಟ್ಟೈ ವಾಲಿಬನ್’, ಜನವರಿ 25, 2024ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್‌ ಲಾಲ್‌ ನಟಿಸುತ್ತಿರುವ ‘L2 : ಎಂಪುರಾನ್’ ಮೊದಲ ಶೆಡ್ಯೂಲ್‌ ಪೂರ್ಣಗೊಂಡಿದೆ. ಇದು 2019ರಲ್ಲಿ ತೆರೆಕಂಡಿದ್ದ ‘ಲೂಸಿಫರ್’ ಚಿತ್ರದ ಸರಣಿ.

LEAVE A REPLY

Connect with

Please enter your comment!
Please enter your name here