ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸರಣಿ ಮನಿ ಹೀಸ್ಟ್‌ 5ನ ಪಾರ್ಟ್‌ 2 ಟ್ರೈಲರ್ ಬಿಡುಗಡೆಯಾಗಿದೆ. ಅಲ್ವೆರೊ ಮೊರ್ಟೆ, ಇತ್ಝಿಯಾರ್‌ ಇಟುನೊ, ಪೆಡ್ರೊ ಅಲೆನ್ಸೊ, ಜೇಮ್ ಲೊರೆಂಟೆ ಮತ್ತಿತರರು ಸರಣಿಗೆ ಮರಳಿದ್ದಾರೆ. ಡಿಸೆಂಬರ್‌ 3ರಿಂದ ಸೀರೀಸ್‌ ಸ್ಟ್ರೀಮ್ ಆಗಲಿದೆ.

ನೆಟ್‌ಫ್ಲಿಕ್ಸ್‌ ಜನಪ್ರಿಯ ಸರಣಿ ಮನಿ ಹೀಸ್ಟ್‌ 5ನ ಪಾರ್ಟ್‌ 2 ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲಿ ಭರಪೂರ ಆಕ್ಷನ್, ಎಮೋಷನ್ಸ್‌ ಇದ್ದು ವೀಕ್ಷಕರ ನಿರೀಕ್ಷೆ ಹೆಚ್ಚಿದೆ. ಸ್ಪಾನಿಷ್‌ ಶೋ ‘ಲಾ ಕಾಸಾ ಡೆ ಪಾಪೆಲ್‌’ ನೆಟ್‌ಫ್ಲಿಕ್ಸ್‌’ನಲ್ಲಿ ‘ಮನಿ ಹೀಸ್ಟ್‌’ ಶೀರ್ಷಿಕೆಯಡಿ ಇಂಗ್ಲೀಷ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಫೈನಲ್‌ ಸೀಸನ್‌ನ ಮೊದಲ ಪಾರ್ಟ್ ಸೆಪ್ಟೆಂಬರ್‌ನಲ್ಲಿ ಸ್ಟ್ರೀಮ್ ಆಗಿತ್ತು. ಸೆಕೆಂಡ್ ಪಾರ್ಟ್‌ ಡಿಸೆಂಬರ್‌ 3ರಿಂದ ವೀಕ್ಷಕರಿಗೆ ಲಭ್ಯವಾಗಲಿದೆ. ಸೆಕೆಂಡ್‌ ಪಾರ್ಟ್‌ನ ಅಫಿಷಿಯಲ್ ಸಿನಾಪ್ಸಿಸ್‌ನಲ್ಲಿ, “ಟೊಕ್ಯೊ ಸತ್ತಿದ್ದಾಳೆ. ಶತ್ರುಗಳು ಬ್ಯಾಂಕ್‌ನಲ್ಲಿ ಅಡಗಿದ್ದಾರೆ. ಗಾಯಗೊಂಡಿರುವ ಅವರು ಈಗ ಇನ್ನಷ್ಟು ಅಪಾಯಕಾರಿ. ಮುಂದೆ ಸವಾಲುಗಳಿದ್ದು, ಕಳ್ಳತನಕ್ಕೆ ಈ ಗ್ಯಾಂಗ್‌ ಹೊಸದೊಂದು ಯೋಜನೆ ರೂಪಿಸುತ್ತಿದೆ. ಪ್ರೊಫೆಸರ್‌ ಮಾಡುವ ದೊಡ್ಡ ತಪ್ಪಿನಿಂದಾಗಿ ಎಲ್ಲವೂ ಕೈತಪ್ಪಿಹೋಗಲಿದೆ” ಎಂದಿದೆ.

Previous articleಟ್ರೈಲರ್ | ದುಲ್ಕರ್ ಸಲ್ಮಾನ್‌ ಕ್ರೈಂ ಥ್ರಿಲ್ಲರ್‌ ‘ಕುರುಪ್‌’; ನವೆಂಬರ್‌ 12ರಂದು ತೆರೆಗೆ
Next articleನಟ ವಿಜಯ್ ಸೇತುಪತಿ ಮೇಲೆ ಹಲ್ಲೆ; ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಘಟನೆ

LEAVE A REPLY

Connect withPlease enter your comment!
Please enter your name here