ನಟ, ನಿರ್ದೇಶಕ ಅಭಿಷೇಕ್‌ ಶೆಟ್ಟಿ ‘ನಮ್‌ ಗಣಿ ಬಿಕಾಂ ಪಾಸ್ 2’ ನೂತನ ಸಿನಿಮಾ ಘೋಷಿಸಿದ್ದಾರೆ. ಈ ಹಿಂದೆ ಅವರೇ ನಟಿಸಿ, ನಿರ್ದೇಶಿಸಿದ್ದ ‘ನಮ್‌ ಗಣಿ ಬಿಕಾಂ ಪಾಸ್’ ಚಿತ್ರದ ಸರಣಿಯಿದು. ಅವರ ಹುಟ್ಟುಹಬ್ಬದ ಅಂಗವಾಗಿ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಅಭಿಷೇಕ್ ಶೆಟ್ಟಿ‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ನಮ್ ಗಣಿ ಬಿಕಾಂ ಪಾಸ್ 2’ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ‘ನಮ್‌ ಗಣಿ ಬಿಕಾಂ ಪಾಸ್‌’ ಚಿತ್ರದ ಮೂಲಕ ನಟ, ನಿರ್ದೇಶಕನಾಗಿ ಚಂದನವನಕ್ಕೆ ಹೆಜ್ಜೆ ಇಟ್ಟ ಅಭಿಷೇಕ್ ಚೊಚ್ಚಲ ನಿರ್ದೇಶನದಲ್ಲೇ ಗಮನ ಸೆಳೆದಿದ್ದರು. ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸರಣಿ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಫಸ್ಟ್‌ಲುಕ್‌ನಲ್ಲಿ ಸೂಟು ಬೂಟು ತೊಟ್ಟು, ಕೈಯಲ್ಲಿ ಕಾಫಿ ಕಪ್ – ಬನ್ ಹಿಡಿದು ದುಬಾರಿ ಕಾರಿನ ಮುಂದೆ ಸ್ಟೈಲಿಶ್‌ ಆಗಿ ಪೋಸು ನೀಡಿದ್ದಾರೆ. ಚಿತ್ರವನ್ನು Adhvi Creations ಬ್ಯಾನರ್‌ ಅಡಿಯಲ್ಲಿ ಪ್ರಶಾಂತ್ ನಿರ್ಮಿಸುತ್ತಿದ್ದಾರೆ. ಸುಮಂತ್ ಆಚಾರ್ಯ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ, ಆನಂದ್ ರಾಜವಿಕ್ರಂ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ. ಸಿನಿಮಾದ ಕತೆ ಬರವಣಿಗೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತೊಂದು ಹೊಸ ಮಾಹಿತಿಯೊಂದಿಗೆ ಅಭಿಷೇಕ್ ಶೆಟ್ಟಿ ಬರಲಿದ್ದಾರೆ. ಅಭಿಷೇಕ್‌ ಶೆಟ್ಟಿ ‘ಗಜಾನನ ಅಂಡ್ ಗ್ಯಾಂಗ್’, ಅನೀಶ್ ನಟನೆಯ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

LEAVE A REPLY

Connect with

Please enter your comment!
Please enter your name here