ಅನೀಸ್‌ ಬಜ್ಮಿ ನಿರ್ದೇಶಿಸುತ್ತಿರುವ ‘ಭೂಲ್ ಭುಲೈಯಾ 3’ ಹಿಂದಿ ಸಿನಿಮಾದ ನಾಯಕಿಯಾಗಿ ತೃಪ್ತಿ ದಿಮ್ರಿ ಆಯ್ಕೆಯಾಗಿದ್ದಾರೆ. ಕಾರ್ತಿಕ್‌ ಆರ್ಯನ್‌ ಹೀರೋ ಆಗಿ ನಟಿಸುತ್ತಿರುವ ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿದ್ಯಾ ಬಾಲನ್‌ ನಟಿಸುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲೈಯಾ 3’ ಹಿಂದಿ ಚಿತ್ರದ ನಾಯಕಿಯಾಗಿ ಕಿಯಾರಾ ಅಡ್ವಾನಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಈ ಪಾತ್ರಕ್ಕೆ ಕಿಯಾರಾ ಬದಲಿಗೆ ‘ಅನಿಮಲ್‌’ ಸಿನಿಮಾ ಖ್ಯಾತಿಯ ತೃಪ್ತಿ ದಿಮ್ರಿ ಅಭಿನಯಿಸಲಿದ್ದಾರೆ. ಈ ಸಿನಿಮಾದಲ್ಲಿ ವಿದ್ಯಾ ಬಾಲನ್ ಅವರಿಗೆ ಪ್ರಮುಖ ಪಾತ್ರವಿದೆ. ಚಿತ್ರತಂಡವು ತೃಪ್ತಿ ಅವರ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದು, ‘ಭೂಲ್ ಭುಲೈಯಾ 3 ತಂಡಕ್ಕೆ ಸ್ವಾಗತ’ ಎಂದು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದೆ. ಪೋಸ್ಟರ್‌ನಲ್ಲಿ ಟೇಬರ್‌ ಒಂದರ ಮೇಲೆ ಪುಸ್ತಕ ಮತ್ತು ತೃಪ್ತಿ ದಿಮ್ರಿ ಅವರ ಪೋಟೊದೊಂದಿಗೆ ಒಂದು ಕೀಲಿ ಹಾಗೂ ಕ್ಯಾಂಡಲ್‌ಗಳನ್ನು ಕಾಣಬಹುದು.

2007ರಲ್ಲಿ ತೆರೆಕಂಡಿದ್ದ ಸೈಂಟಿಫಿಕ್‌ – ಕಾಮಿಡಿ ಸಿನಿಮಾ ‘ಭೂಲ್ ಭುಲೈಯಾ’ದ ‘ಮಂಜುಲಿಕಾ’ ಪಾತ್ರ ನಿರ್ವಹಿಸಿದ್ದ ವಿದ್ಯಾ ಬಾಲನ್ ಚಿತ್ರದ ಮೂರನೇ ಭಾಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಕಾರ್ತಿಕ್ ಅವರು ವಿದ್ಯಾ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ. ಸಿನಿಮಾದ ಎರಡನೇ ಭಾಗವನ್ನು ನಿರ್ದೇಶಿಸಿದ್ದ ಅನೀಸ್ ಬಜ್ಮಿ ಅವರು ಮೂರನೇ ಭಾಗವನ್ನು ನಿರ್ದೇಶಿಸಲಿದ್ದಾರೆ. ಮೊದಲ ಭಾಗವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದರು. ಮತ್ತು ಚಿತ್ರದಲ್ಲಿ ವಿದ್ಯಾ ಜೊತೆಗೆ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಚಿತ್ರದ ಎರಡನೇ ಭಾಗದಲ್ಲಿ ಕಾರ್ತಿಕ್ ಅವರು ತಬು ಮತ್ತು ಕಿಯಾರಾ ಅಡ್ವಾಣಿ ಅವರ ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here