ಹೇಮಂತ ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಟೈಟಲ್‌ ಟ್ರ್ಯಾಕ್‌ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಧನಂಜಯ್‌ ರಂಜನ್‌ ರಚನೆಯ ಈ ಹಾಡಿಗೆ ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದು, ಕಪಿಲ್‌ ಕಪಿಲನ್‌ ಹಾಡಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಧನಂಜಯ್‌ ರಂಜನ್‌ ರಚನೆಯ ಹಾಡಿಗೆ ಚರಣ್‌ ರಾಜ್‌ ಸಂಗೀತ ಸಂಯೋಜನೆಯಿದೆ. ಕಪಿಲ್‌ ಕಪಿಲನ್‌ ಹಾಡಿದ್ದಾರೆ. ‘ನದಿಯೇ ಓ ನದಿಯೇ, ನಿನಗಾಗಿ ನಾ ಕಾಯುವೆ..’ ಎಂದು ಶುರುವಾಗುವ ಗೀತೆ ಮೆಲಡಿ ಜೊತೆಗೆ ಕಂಟೆಂಪರರಿ ಸಂಗೀತ ಮತ್ತು ಸರಳ ಚಿತ್ರಸಾಹಿತ್ಯದೊಂದಿಗೆ ಗಮನಸೆಳೆಯುತ್ತದೆ. ಚಿತ್ರದಲ್ಲಿ ರಕ್ಷಿತ್‌ ಅವರಿಗೆ ನಾಯಕಿಯರಾಗಿ ರುಕ್ಮಿಣಿ ವಸಂತ್‌ ಮತ್ತು ಚೈತ್ರ ಜೆ ಆಚಾರ್‌ ನಟಿಸಿದ್ದಾರೆ. ಹೇಮಂತ್‌ ಎಂ ರಾವ್‌ ನಿರ್ದೇಶನದ ಈ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ತೆರೆಕಾಣುತ್ತಿದೆ. ಮೊದಲ ಭಾಗ (ಸೈಡ್‌ A) ಸೆಪ್ಟೆಂಬರ್‌ 1ರಂದು ಮತ್ತು ಎರಡನೇ ಭಾಗ (ಸೈಡ್‌ B) ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿದೆ. ನಟ ರಕ್ಷಿತ್‌ ಈ ಹಿಂದೆ ಹೇಮಂತ್‌ ರಾವ್‌ ಅವರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ನಟಿಸಿದ್ದರು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಇದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಸುನೀಲ್ ಭಾರದ್ವಾಜ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here