ನಟಿ ನೇಹಾ ಶರ್ಮಾ ಅಭಿನಯದ ‘ಆಫತ್‌-ಎ—ಶ್ಕ್‌’ ಸಿನಿಮಾ ಝೀ5ನಲ್ಲಿ 29ರಿಂದ ಸ್ಟ್ರೀಮ್ ಆಗಲಿದೆ. ಯಶಸ್ವೀ ಹಂಗೇರಿಯನ್ ಸೂಪರ್‌ನ್ಯಾಚುರಲ್‌ ಥ್ರಿಲ್ಲರ್‌ ಸಿನಿಮಾ ‘ಲಿಝಾ’ದ ಭಾರತೀಯ ಅವತರಣಿಕೆ ಇದು.

ಇಂದ್ರಜಿತ್‌ ನಟ್ಟೋಜಿ ನಿರ್ದೇಶನದ ‘ಆಫತ್‌-ಎ—ಶ್ಕ್‌’ ಸಿನಿಮಾದ ಓಟಿಟಿ ರಿಲೀಸ್‌ ಡೇಟ್ ಅನೌನ್ಸ್ ಆಗಿದೆ. ಬಾಲಿವುಡ್‌ ನಟಿ ನೇಹಾ ಶರ್ಮಾ ಅಭಿನಯದ ಈ ಸಿನಿಮಾ ZEE5ನಲ್ಲಿ ಇದೇ ಅಕ್ಟೋಬರ್‌ 29ರಿಂದ ಸ್ಟ್ರೀಮ್ ಆಗಲಿದೆ. ಪ್ರಶಸ್ತಿ ಪುರಸ್ಕೃತ ಹಂಗೇರಿಯನ್ ಸಿನಿಮಾ ‘ಲಿಝಾ’ದ ಭಾರತೀಯ ಅವತರಣಿಕೆ ಇದು. ‘Dramedy’ (Comedy – drama) ವರ್ಗಕ್ಕೆ ಸೇರ್ಪಡೆಗೊಳಿಸಬಹುದಾದ ಪ್ರಯೋಗವಿದು. ಚೆಂದದ ಯುವತಿ ಲಲ್ಲೂ (ನೇಹಾ ಶರ್ಮಾ) ನಿಜಪ್ರೀತಿಯ ಹುಡುಕಾಟ, ಈ ಹಂತದಲ್ಲಿ ಆಕೆಗೆ ಎದುರಾಗುವ ಭಯ ಹುಟ್ಟಿಸುವ ಘಟನಾವಳಿಗಳು ಸಿನಿಮಾದ ವಸ್ತು. ಇದೊಂದು ಸೂಪರ್‌ನ್ಯಾಚುರಲ್‌ ಕಂಟೆಂಟ್‌ನ ಸಿನಿಮಾ ಎಂದು ಝೀ5 ಹೇಳಿಕೊಂಡಿದೆ.

“ಮೂಲ ಹಂಗೇರಿಯನ್ ಸಿನಿಮಾ ‘ಲಿಝಾ’ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೊಡ್ಡ ಯಶಸ್ಸು ಕಂಡಿದೆ. ಕಳೆದ ಕೆಲವು ವರ್ಷಗಳಿಂದ ಭಾರತೀಯ ಪ್ರೇಕ್ಷಕರು ಸೂಪರ್‌ನ್ಯಾಚುರಲ್‌ ಸ್ಟೋರಿಗಳನ್ನು ಹೆಚ್ಚೆಚ್ಚು ನೋಡುತ್ತಿದ್ದಾರೆ. ಕನ್ಸೂಮರ್ ಸೆಂಟ್ರಿಕ್‌ ಓಟಿಟಿ ಪ್ಲಾಟ್‌ಫಾರ್ಮ್‌ ಆಗಿ ನಾವು ಜನರಿಗೆ ಉತ್ತಮ ಗುಣಮಟ್ಟದ ಮನರಂಜನೆ ಕೊಡಲು ಸಿದ್ಧರಾಗಿದ್ದೇವೆ. ಆ ನಿಟ್ಟಿನಲ್ಲಿ ‘ಆಫತ್-ಎ-ಇಶ್ಕ್‌’ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಮ್ಮದು” ಎನ್ನುತ್ತಾರೆ ಝೀ5ನ ಭಾರತದ ಚೀಫ್‌ ಬ್ಯುಸಿನೆಸ್‌ ಆಫೀಸರ್‌ ಮನೀಶ್ ಕಲ್ರಾ. ಸಿನಿಮಾದ ಇತರೆ ಪ್ರಮುಖ ತಾರಾಬಳಗದಲ್ಲಿ ದೀಪಕ್ ದೊಬ್ರಿಯಾನ್‌, ಅಮಿತ್ ಸೈಲ್‌, ನಮಿತ್ ದಾಸ್‌, ಇಳಾ ಅರುಣ್ ಇದ್ದಾರೆ.

LEAVE A REPLY

Connect with

Please enter your comment!
Please enter your name here